ಬಿಜೆಪಿ ಕಾರ್ಪೊರೇಟರ್​ ಮೇಲೆ ಗುಂಡಿನ ದಾಳಿ- ಸಾವು

shootout
Published on

ರಾಂಚಿ (ಉತ್ತರಾಖಂಡ): ಬಿಜೆಪಿ ಕಾರ್ಪೊರೇಟರ್ ಒಬ್ಬರನ್ನು ದುಷ್ಕರ್ಮಿಗಳು ಗುಂಡಿಟ್ಟು ಹತ್ಯೆ ಮಾಡಿರುವ ಘಟನೆ ಉತ್ತರಾಖಂಡ್‍ನ ರುದ್ರಾಪುರದಲ್ಲಿ ನಡೆದಿದೆ.

ರುದ್ರಾಪುರದ 13ನೇ ವಾರ್ಡ್‍ನ ಪಾಲಿಕೆ ಸದಸ್ಯರಾಗಿದ್ದ ಪ್ರಕಾಶ್ ದಾಮಿ ಹತ್ಯೆಯಾಗಿರುವ ಬಿಜೆಪಿ ಮುಖಂಡ.

ಇಂದು ಬೆಳಗ್ಗೆ ಸುಮಾರು ಎಂಟು ಗಂಟೆಯ ಹೊತ್ತಿಗೆ ಈ ಘಟನೆ ನಡೆದಿದೆ. ದಾಖಲೆಯೊಂದಕ್ಕೆ ಸಹಿ ಮಾಡಿಸಿಕೊಳ್ಳುವ ನೆಪದಲ್ಲಿ ಪ್ರಕಾಶ್ ಅವರನ್ನು ಮನೆಯಿಂದ ಹೊರ ಕರೆದಿದ್ದ ಕೆಲ ವ್ಯಕ್ತಿಗಳು ನಂತರ ಗುಂಡಿಟ್ಟು ಹತ್ಯೆ ಮಾಡಿ ಪರಾರಿಯಾಗಿದ್ದಾರೆ ಎಂದು ಎಸ್​ಪಿ ದೇವೇಂದ್ರ ಪಿಂಚ ತಿಳಿಸಿದ್ದಾರೆ.

ಕಾರಿನ ಬಳಿ ಪ್ರಕಾಶ್​ ಅವರನ್ನು ದುಷ್ಕರ್ಮಿಗಳು ಕರೆದಿದ್ದರು. ಏಕೆ ಕರೆಯುತ್ತಿದ್ದಾರೆ ಎಂದು ತಿಳಿಯದ ಪ್ರಕಾಶ್​ ಅವರು ಕಾರಿನ ಬಳಿ ಹೋದಾಗ ಈ ಕೃತ್ಯ ಎಸಗಲಾಗಿದೆ. ರಕ್ತದ ಮಡುವಿನಲ್ಲಿ ಬಿದ್ದಿದ್ದ ಪ್ರಕಾಶ್ ಅವರನ್ನು ಆಸ್ಪತ್ರೆಗೆ ಸಾಗಿಸಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೆ ಅವರು ಮೃತಪಟ್ಟಿದ್ದಾರೆ ಎಂದು ದೇವೇಂದ್ರ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net