ಹುಟ್ಟುಹಬ್ಬದಂದೇ ಕಾದುಕುಳಿತಿದ್ದ ಜವರಾಯ! ಕೇಕ್‌ ಕಟ್ ಮಾಡುವಷ್ಟರಲ್ಲೇ ಪುಟಾಣಿಯ ಜೀವ ಹೋಯ್ತು

girl
Published on

ಚಾಮರಾಜನಗರ: ಹುಟ್ಟುಹಬ್ಬದಂದೇ ಮೂರು ವರ್ಷದ ಬಾಲಕಿ ಪ್ರಾಣಬಿದ್ದ ಹೃದಯವಿದ್ರಾವಕ ಘಟನೆ ಚಾಮರಾಜನಗರದಲ್ಲಿ ನಡೆದಿದೆ.

ನಿವೇದಿತಾ ಎಂಬ ಬಾಲಕಿ ಮೃತಪಟ್ಟವಳು. ಚಾಮರಾಜನಗರದ ಕೆಂಗಾಕಿ ಗ್ರಾಮದಲ್ಲಿ ನಿವೇದಿತಾ ಕುಟುಂಬ ತೋಟದ ಮನೆಯಲ್ಲಿ ವಾಸವಾಗಿದೆ. ಇಂದು ಪುಟಾಣಿಯ ಮೂರನೆಯ ಹುಟ್ಟುಹಬ್ಬ. ಈ ನಿಮಿತ್ತ ಮನೆಯಲ್ಲಿ ಸಂಭ್ರಮದ ವಾತಾವರಣವಿತ್ತು. ಹುಟ್ಟುಹಬ್ಬ ಆಚರಿಸಿಕೊಳ್ಳಲು ಕೇಕ್‌ ಕೂಡ ರೆಡಿಯಾಗಿತ್ತು.

ಕಾರ್ಯಕ್ರಮ ಇನ್ನೂ ಸ್ವಲ್ಪ ಹೊತ್ತು ಇದ್ದುದರಿಂದ ಬಾಲಕಿ ಆಟವಾಡಲು ಹೋಗಿದ್ದಾಳೆ. ಅಲ್ಲಿ ಪಂಪ್ ಸೆಟ್ ಸ್ಪರ್ಶಿಸಿಬಿಟ್ಟಿದ್ದಾಳೆ. ಕೂಡಲೇ ಮೃತಪಟ್ಟಿದ್ದಾಳೆ. ಕುಟುಂಬದಲ್ಲಿ ಸಂಭ್ರಮ ಮನೆ ಮಾಡಬೇಕಿದ್ದ ವೇಳೆ ಶೋಕದ ವಾತಾವರಣ ಆವರಿಸಿದೆ. ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ.

ಸ್ಥಳಕ್ಕೆ ಚಾಮರಾಜನಗರ ಗ್ರಾಮಾಂತರ ಪೊಲೀಸರು ಭೇಟಿ ನೀಡಿ ಈ ಕುರಿತು ಪರಿಶೀಲನೆ ಮಾಡುತ್ತಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net