More

    ನಿಜ ಜೀವನದಲ್ಲಿ ‘ಡಾಲಿ ಕೀ ಡೋಲಿ’: ಫಸ್ಟ್‌ ನೈಟ್‌ ಕನಸಲ್ಲಿ ವರ- ನೀರು ಕೊಡಲು ಹೇಳಿ ವಧು ಎಸ್ಕೇಪ್‌

    ಬೇವಾರ್‌ (ಉತ್ತರ ಪ್ರದೇಶ): ಬಾಕ್ಸ್‌ಆಫೀಸ್‌ನಲ್ಲಿಯೇ ಸಿಕ್ಕಾಪಟ್ಟೆ ಧೂಳೆಬ್ಬಿಸಿದ್ದ ಚಿತ್ರ 2015ರಲ್ಲಿ ಬಿಡುಗಡೆಯಾಗಿದ್ದ ಡಾಲಿ ಕೀ ಡೋಲಿ (ಡಾಲಿಯ ಮೆರವಣಿಗೆ). ಸೋನಮ್‌ ಕಪೂರ್‌, ಪುಳಕಿತ್‌ ಸಮ್ರಾಟ್‌ ಅಭಿನಯದ ಈ ಚಿತ್ರ ನೋಡಿದವರಿಗೆ ಇನ್ನೊಮ್ಮೆ ಚಿತ್ರ ನೆನಪಿಸುವಂಥ ಘಟನೆ ನಿಜವಾಗಿಯೂ ನಡೆದಿದೆ.

    ಉತ್ತರ ಪ್ರದೇಶದ ಮೈನಪುರಿ ಬೇವಾರ್‌ ಸಮೀಪದ ಪರಂಖಾ ಗ್ರಾಮದಲ್ಲಿ ಇದೇ ಚಿತ್ರದ ಕಥೆಯಂತೆ ಘಟನೆ ನಡೆದಿದೆ. ಅದೇನೆಂದರೆ, ಮದುವೆಯಾದ ನಂತರ ಮದುಮಗಳನ್ನು ಮನೆಗೆ ಕರೆದುಕೊಂಡು ಬರುವಾಗ ಮೊದಲ ರಾತ್ರಿಯ ಕನಸನ್ನು ಯುವಕ ಕಾಣುತ್ತಿದ್ದರೆ, ಯುವತಿ ತನಗೆ ಹಾಕಿದ ಚಿನ್ನಾಭರಣ, ವರನ ಕಡೆಯವರು ನೀಡಿರುವ ದುಡ್ಡು-ಒಡವೆಗಳ ಜತೆ ಎಸ್ಕೇಪ್‌ ಆಗಿದ್ದಾಳೆ.

    ಆಗಿದ್ದೇನೆಂದರೆ ಪರಂಖಾ ಗ್ರಾಮದ ರಾಜು ಎಂಬ ಯುವಕನಿಗೆ ಎಷ್ಟು ಹುಡುಕಿದರೂ ಹೆಣ್ಣು ಸಿಗುತ್ತಿರಲಿಲ್ಲ. ನಂತರ ದಲ್ಲಾಳಿಯ ಮೊರೆ ಹೋಗಿದ್ದಾರೆ ಆತನ ಪಾಲಕರು. ದಲ್ಲಾಳಿ ಓರ್ವ ಯುವತಿಯನ್ನು ಪರಿಚಯ ಮಾಡಿಸಿದ್ದಾನೆ. ನಂತರ ಎರಡೂ ಮನೆಯವರು ಮದುವೆಗೆ ಒಪ್ಪಿದರು. ಸುಮ್ಮನೇ ಒಪ್ಪಲಿಲ್ಲ. ಯುವತಿಗೆ ವಧುದಕ್ಷಿಣೆಯಾಗಿ 80 ಸಾವಿರ ರೂ. ನೀಡಬೇಕು ಎಂದು ಹೇಳಿದ್ದರು, ಜತೆಗೆ ಒಂದಿಷ್ಟು ಚಿನ್ನಾಭರಣಗಳನ್ನೂ ಹಾಕುವಂತೆ ಷರತ್ತು ವಿಧಿಸಿದ್ದರು. ವಯಸ್ಸಾಗುತ್ತಾ ಬಂದರೂ ಹುಡುಗಿ ಸಿಗದ ಬೇಸರದಲ್ಲಿದ್ದ ರಾಜು ಹಾಗೂ ಆತನ ಪಾಲಕರಿಗೆ ಮದುವೆಯಾದರೆ ಸಾಕಿತ್ತು. ಅದಕ್ಕೆ ಒಪ್ಪಿಕೊಂಡರು.

    ಸಮೀಪದ ಶೀಟ್ಲಾ ಧಾಮ ದೇವಸ್ಥಾನದಲ್ಲಿ ಮದುವೆಯಾಯಿತು. ಮದುವೆ ಸಂದರ್ಭದಲ್ಲಿ 80 ಸಾವಿರ ರೂ. ದುಬಾರಿ ಬಟ್ಟೆ ಬರೆ, ಆಭರಣ ಎಲ್ಲವನ್ನೂ ರಾಜು ಮನೆಯವರು ಯುವತಿಗೆ ನೀಡಿದ್ದರು. ಮದುವೆ ಮುಗಿಸಿ ಮುಂದಿನ ಕಾರ್ಯಕ್ಕೆ ವಧುವನ್ನು ಕರೆದುಕೊಂಡು ರಾಜು ಗ್ರಾಮಕ್ಕೆ ಮರಳುತ್ತಿದ್ದ. ಅಲ್ಲಿ ಮೊದಲ ರಾತ್ರಿಗೆ ಸಕಲ ಸಿದ್ಧತೆ ನಡೆಸಲಾಗಿತ್ತು.

    ಹೀಗೆ ಬರುವಾಗ ದಾರಿ ಮಧ್ಯೆ ವಧು ತನಗೆ ಬಾಯಾರಿಕೆಯಾಗಿದೆ ಎಂದು ಹೇಳಿದ್ದಾಳೆ. ನೀರಿನ ಬಾಟಲಿ ತಾ ಎಂದಿದ್ದಾಳೆ. ಗಾಡಿಯಿಂದ ಇಳಿದ ರಾಜು ನೀರಿನ ಬಾಟಲಿ ತರಲು ಹೋಗಿ ವಾಪಸ್‌ ಆಗುತ್ತಿದ್ದಂತೆಯೇ ಯುವತಿ ಎಸ್ಕೇಪ್‌ ಆಗಿದ್ದಾಳೆ. ಎಲ್ಲಿ ಹುಡುಕಿದರೂ ಆಕೆ ಸಿಗಲಿಲ್ಲ. ನಂತರ ತಾನು ಮೋಸ ಹೋಗಿರುವುದು ತಿಳಿದಿದ್ದು, ಇದೀಗ ಪೊಲೀಸಲ್ಲಿ ದೂರು ದಾಖಲು ಮಾಡಿದ್ದಾನೆ.

    ರಸ್ತೆ ರಿಪೇರಿಯಾಗುವವರೆಗೆ ಮದ್ವೆಯಾಗಲ್ಲ: ದಾವಣಗೆರೆ ಶಿಕ್ಷಕಿಗೆ ಸಿಕ್ತು ಸರ್ಕಾರದ ಸ್ಪಂದನೆ

    ಬಿಗ್‌ಬಾಸ್‌ನಿಂದ ಪೊಲೀಸ್‌ ಸ್ಟೇಷನ್‌ವರೆಗೆ… ಪ್ರಶಾಂತ್‌ ಸಂಬರಗಿ ವಿರುದ್ಧ ಚಂದ್ರಚೂಡ್‌ ಕಂಪ್ಲೇಂಟ್‌

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts