ಗಂಡನನ್ನು ಉಳಿಸಿಕೊಡಿ... ಸಿಎಂ ಮನೆ ಎದುರು ಮಹಿಳೆಯ ಆಕ್ರಂದನ- ಚಿಕಿತ್ಸೆ ಸಿಗುವ ಮೊದಲೇ ಸಾವು!

12-vij-1d-devanahalli-kovid hospital
?
Published on

ಬೆಂಗಳೂರು: ನನ್ನ ಪತಿಯನ್ನು ಉಳಿಸಿಕೊಡಿ... ಯಾವ ಆಸ್ಪತ್ರೆಯಲ್ಲಿಯೂ ಹಾಸಿಗೆ ಸಿಗುತ್ತಿಲ್ಲ... ದಯವಿಟ್ಟು ಹಾಸಿಗೆ ಒದಗಿಸಿಕೊಡಿ... ಎಂದು ಮುಖ್ಯಮಂತ್ರಿ ಮನೆ ಎದುರು ಮಹಿಳೆಯೊಬ್ಬರು ಮಾಡಿಕೊಳ್ಳುತ್ತಿದ್ದ ಆಕ್ರಂದನ ಮುಗಿಲುಮುಟ್ಟಿತ್ತು.

ಸತೀಶ್ ಎಂಬ ಸೋಂಕಿತನಿಗೆ ಯಾವ ಆಸ್ಪತ್ರೆಯಲ್ಲಿಯೂ ಹಾಸಿಗೆ ಸಿಗದ ಕಾರಣ, ರಾಮೋಹಳ್ಳಿಯ ಚಿಕ್ಕಲ್ಲೂರಿನಿಂದ ಬಂದಿರುವ ಪತ್ನಿ ಮತ್ತು ಸಂಬಂಧಿಕರು ಸಿಎಂ ಮನೆ ಎದುರು ಪ್ರತಿಭಟನೆ ಮಾಡಿದರು.

ಕರೊನಾ ಸೋಂಕಿತರಿಗೆ ಇರುವ ಸಹಾಯವಾಣಿ ಸದಾ ಬಿಜಿ ಬರುತ್ತಿದೆ. ಎಲ್ಲಿ ಹೋಗುವುದೋ ತಿಳಿಯುತ್ತಿಲ್ಲ. ಆಸ್ಪತ್ರೆಗಳಲ್ಲಿ ಬೆಡ್ ಇಲ್ಲ, ವೆಂಟಿಲೇಟರ್ ಸಿಗುತ್ತಿಲ್ಲ. ಎಲ್ಲಿ ಹೋದರೂ ವಾಪಸ್‌ ಕಳಿಸುತ್ತಿದ್ದಾರೆ ಎಂದು ಸಂಬಂಧಿಕರು ಕಣ್ಣೀರು ಹಾಕುತ್ತಿದ್ದರು.

ಇವರ ಆಧಾರ್‌ ನಂಬರ್‌ ಇತ್ಯಾದಿಗಳನ್ನು ಪೊಲೀಸರು ಪಡೆದು, ಕೂಡಲೇ ಸೋಂಕಿತನನ್ನು ಅಂಬುಲೆನ್ಸ್‌ ಮೂಲಕ ರಾಮಯ್ಯ ಆಸ್ಪತ್ರೆಗೆ ಕಳುಹಿಸಿದರು. ಆದರೆ ಅದಾಗಲೇ ಸತೀಶ್ ಮೃತಪಟ್ಟರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net