

ಳ್ಳಾರಿಯಲ್ಲಿರುವ ವಿಜಯನಗರ ವೈದ್ಯಕೀಯ ವಿಜ್ಞಾನ ಸಂಸ್ಥೆ (ವಿಮ್ಸ್-ವಿಐಎಂಎಸ್)ಯಲ್ಲಿ ಬೋಧಕೇತರ ಹುದ್ದೆಗಳಿಗೆ ನೇಮಕ ಮಾಡಿಕೊಳ್ಳಲಾಗುತ್ತಿದ್ದು, ಅರ್ಹ ಅಭ್ಯರ್ಥಿಗಳನ್ನು ನೇರ ಸಂದರ್ಶನಕ್ಕೆ ಆಹ್ವಾನಿಸಲಾಗಿದೆ.
ಒಟ್ಟು ಹುದ್ದೆಗಳು: 130
*ಶುಶ್ರೂಷಾಧಿಕಾರಿಯಾಗಲು ಅವಕಾಶ
ವಿಮ್ಸ್ ಸಂಸ್ಥೆಯ ಸುವಿಶೇಷ ಆಸ್ಪತ್ರೆಯ ನಿರ್ವಹಣೆಗಾಗಿ ಸೃಜನೆಯಾಗಿರುವ ಹುದ್ದೆಗಳಲ್ಲಿ ನಿರೀಕ್ಷಿತ ಕೋವಿಡ್-19 3ನೇ ಅಲೆಯನ್ನು ಸಮರ್ಪಕವಾಗಿ ನಿರ್ವಹಿಸಲು ಅವಶ್ಯವಿರುವ ಗ್ರೂಪ್ ಸಿ ಹುದ್ದೆಗಳಿಗೆ ಹೊರಗುತ್ತಿಗೆ ಆಧಾರದ ಮೇಲೆ ಕೆಟಿಪಿಪಿ ನಿಯಮಾನುಸಾರ ಬೆಂಗಳೂರಿನ ಕಿಯೋನಿಕ್ಸ್ ಸಂಸ್ಥೆ ಮೂಲಕ ನೇಮಕ ಮಾಡಿಕೊಳ್ಳಲಾಗುತ್ತಿದೆ. ಈ ಹುದ್ದೆಗಳು ತಾತ್ಕಾಲಿಕವಾಗಿ ಇರುತ್ತದೆ ಹಾಗೂ ಯಾವುದೇ ಕಾಯಂ ನೇಮಕಾತಿಗೆ ಪರಿಗಣಿಸಲಾಗುವುದಿಲ್ಲ. ಆಸಕ್ತ, ಅರ್ಹ ಅಭ್ಯರ್ಥಿಗಳು ನೇರ ಸಂದರ್ಶನಕ್ಕೆ ಹಾಜರಾಗಬಹುದು. ಕಾರ್ವಿುಕ ಕಾಯ್ದೆ ಅನ್ವಯ ವೇತನ ನೀಡುವುದಾಗಿ ಅಧಿಸೂಚನೆಯಲ್ಲಿ ತಿಳಿಸಲಾಗಿದೆ. ಕೋವಿಡ್-19 ಅವಧಿಯಲ್ಲಿ ಕಾರ್ಯನಿರ್ವಹಿಸಿದ ಅಭ್ಯರ್ಥಿಗಳಿಗೆ ಆದ್ಯತೆ ನೀಡಲಾಗುವುದು.
ಹುದ್ದೆ ವಿವರ
* ಶುಶ್ರೂಷಾಧಿಕಾರಿ - 110 * ರೇಡಿಯೋಗ್ರಾಫರ್ - 1 * ಫಾರ್ಮಸಿ ಅಧಿಕಾರಿ - 2 * ಕ್ಷ-ಕಿರಣ ತಂತ್ರಜ್ಞರು - 3 * ಫಿಜಿಯೋಥೆರಪಿಸ್ಟ್ - 1 * ಡಯಟೀಷಿಯನ್ - 1 * ಲ್ಯಾಬ್ ಟೆಕ್ನಿಷಿಯನ್ - 3 * ಡ್ರೇವರ್ - 6 * ಡಯಾಲಿಸಿಸ್ ಟೆಕ್ನಿಷಿಯನ್ - 1 * ಸಿಟಿ ಟೆಕ್ನಿಷಿಯನ್ - 2
ಶೈಕ್ಷಣಿಕ ಅರ್ಹತೆ: ಶುಶ್ರೂಷಾಧಿಕಾರಿ ಹುದ್ದೆಗೆ ಜಿಎನ್ಎಂ ಶುಶ್ರೂಷ ತರಬೇತಿ (3 ವರ್ಷಕ್ಕಿಂತ ಕಡಿಮೆ ಇರಬಾರದು) ಹೊಂದಿರಬೇಕು. ಬಿಎಸ್ಸಿ ನರ್ಸಿಂಗ್ ಮಾಡಿರುವ ಅಭ್ಯರ್ಥಿಗಳಿಗೆ ಮೊದಲ ಆದ್ಯತೆ ನೀಡಲಾಗುವುದು. ಉಳಿದ ಹುದ್ದೆಗಳಿಗೆ ಅನುಗುಣವಾಗಿ ಎಸ್ಸೆಸ್ಸೆಲ್ಸಿ, ಪಿಯುಸಿ, ಕ್ಷ-ಕಿರಣ ತಂತ್ರಜ್ಞರ ತಾಂತ್ರಿಕ ಡಿಪ್ಲೊಮಾ, ಡಿ ಫಾರ್ವ/ ಬಿ ಫಾರ್ವ ಪದವಿ, ಫಿಜಿಯೋಥೆರಪಿಸ್ಟ್ ಕೋರ್ಸ್ನಲ್ಲಿ ಡಿಪ್ಲೊಮಾ, ಹೋಮ್ ಸೈನ್ಸ್ನಲ್ಲಿ ಪದವಿ, ಬಿಎಸ್ಸಿ ನ್ಯೂಟ್ರಿಷಿಯನ್, ಲ್ಯಾಬ್ ಟೆಕ್ನಿಷಿಯನ್ ತಾಂತ್ರಿಕ ಡಿಪ್ಲೊಮಾ, ಡಯಾಲಿಸಿಸ್ ಟೆಕ್ನಿಷಿಯನ್ ಕೋರ್ಸ್ನಲ್ಲಿ ಡಿಪ್ಲೊಮಾ, ಸಿಟಿ ಟೆಕ್ನಿಷಿಯನ್ನಲ್ಲಿ ಡಿಪ್ಲೊಮಾ ಮಾಡಿರಬೇಕು. ಚಾಲಕ ಹುದ್ದೆಗೆ ಭಾರಿ ವಾಹನ ಪರವಾನಗಿ ಕೇಳಲಾಗಿದೆ. ಅಭ್ಯರ್ಥಿಗಳು ಮಾನ್ಯತೆ ಪಡೆದ ವಿಶ್ವವಿದ್ಯಾಲಯ/ ಕಾಲೇಜುಗಳಲ್ಲಿ ಪದವಿ ಪಡೆದಿರಬೇಕು.
ವಯೋಮಿತಿ: ಎಲ್ಲ ಹುದ್ದೆಗೂ ಅನ್ವಯವಾಗುವಂತೆ ಸಾಮಾನ್ಯವರ್ಗದ ಅಭ್ಯರ್ಥಿಗಳಿಗೆ ಗರಿಷ್ಠ 35 ವರ್ಷ, ಎಸ್ಸಿ, ಎಸ್ಟಿ, ಪ್ರವರ್ಗ 1ರ ಅಭ್ಯರ್ಥಿಗಳಿಗೆ ಗರಿಷ್ಠ 40 ವರ್ಷ, ಪ್ರವರ್ಗ 2ಎ, 2ಬಿ, 3ಎ, 3ಬಿ, ಇತರ ಹಿಂದುಳಿದ ವರ್ಗದ ಅಭ್ಯರ್ಥಿಗಳಿಗೆ ಗರಿಷ್ಠ 38 ವರ್ಷ ವಯೋಮಿತಿ ನಿಗದಿಪಡಿಸಲಾಗಿದೆ.
ಸೂಚನೆ: ಸಂದರ್ಶನಕ್ಕೆ ಹಾಜರಾಗುವ ಅಭ್ಯರ್ಥಿಗಳು ಶೈಕ್ಷಣಿಕ ಮಾಹಿತಿ, ಮೀಸಲಾತಿ, ಅಗತ್ಯ ಪ್ರಮಾಣಪತ್ರ, ದಾಖಲೆಗಳ ಮೂಲ ಹಾಗೂ ಒಂದು ಪ್ರತಿಯನ್ನು ತರಲು ಸೂಚಿಸಲಾಗಿದೆ. ಅಲ್ಲದೇ ಅಭ್ಯರ್ಥಿಗಳು ನಿರ್ದೇಶಕರು, ವಿಮ್ಸ್, ಬಳ್ಳಾರಿ ಹೆಸರಿನಲ್ಲಿ ಅರ್ಜಿಶುಲ್ಕವಾಗಿ 500 ರೂ. ಡಿಡಿ ಅನ್ನು ತರಲು ತಿಳಿಸಲಾಗಿದೆ. ಅರ್ಜಿಯನ್ನು ವಿಮ್ಸ್ ವೆಬ್ಸೈಟ್ನಿಂದ ಡೌನ್ಲೋಡ್ ಮಾಡಿಕೊಂಡು ಭರ್ತಿ ಮಾಡಲು ಸೂಚಿಸಲಾಗಿದೆ.
ಸಂದರ್ಶನ ನಡೆಯುವ ದಿನಾಂಕ: 10.1.2022 (ಬೆಳಗ್ಗೆ 10.30ರಿಂದ)
ಸಂದರ್ಶನ ನಡೆಯುವ ಸ್ಥಳ: ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣ, ಬಳ್ಳಾರಿ.
ಅಧಿಸೂಚನೆಗೆ: https://bit.ly/3HthYUB
ಮಾಹಿತಿಗೆ: http://www.vimsbellary.org.in/