ಬಿಇಎಲ್​ನಲ್ಲಿದೆ ಇಂಜಿನಿಯರ್ಸ್​​ ಹುದ್ದೆ : ಇತರ ಸೌಲಭ್ಯಗಳ ಜತೆ 1.40 ಲಕ್ಷ ರೂ.ವರೆಗೆ ಸಂಬಳ

BEL
Published on

ರಕ್ಷಣಾ ಸಚಿವಾಲಯದ ಅಧೀನದಲ್ಲಿ ಕಾರ್ಯ ನಿರ್ವಹಿಸುವ ಭಾರತ್​ ಎಲೆಕ್ಟ್ರಾನಿಕ್ಸ್​ ಲಿಮಿಟೆಡ್​ (ಬಿಇಎಲ್​) ನವರತ್ನ ಸಂಸ್ಥೆಗಳಲ್ಲಿ ಒಂದಾಗಿದೆ. ಜಿಯಾಬಾದ್​ ಹಾಗೂ ಕೋಟ್​ದ್ವಾರ ಟಕದಲ್ಲಿ ಡೆಪ್ಯುಟಿ ಇಂಜಿನಿಯರ್ಸ್​ ಇ-2 ಗ್ರೇಡ್​ ಹುದ್ದೆಗಳಿಗೆ ಪರ್ಮನೆಂಟ್​ ಆಧಾರದಲ್ಲಿ ನೇಮಕ ಮಾಡಿಕೊಳ್ಳಲಾಗುತ್ತಿದೆ. ಕರ್ನಾಟಕ, ಗುಜರಾತ್​, ದೆಹಲಿ, ರಾಜಸ್ಥಾನ, ಉತ್ತರಪ್ರದೇಶ, ಹರಿಯಾಣ, ಪಂಜಾಬ್​, ಮಹಾರಾಷ್ಟ್ರ ಅಥವಾ ದೇಶದ ಯಾವುದೇ ಭಾಗಕ್ಕಾದರೂ ನೇಮಕ ಮಾಡಬಹುದಾಗಿದೆ.

ಹುದ್ದೆ ವಿವರ
* ಡೆಪ್ಯುಟಿ ಇಂಜಿನಿಯರ್​ (ಎಲೆಕ್ಟ್ರಾನಿಕ್ಸ್​, ಎಲೆಕ್ಟ್ರಾನಿಕ್ಸ್​ ಆ್ಯಂಡ್​ ಕಮ್ಯುನಿಕೇಷನ್​, ಎಲೆಕ್ಟ್ರಾನಿಕ್ಸ್​ ಆ್ಯಂಡ್​ ಟೆಲಿಕಮ್ಯುನಿಕೇಷನ್​, ಕಮ್ಯುನಿಕೇಷನ್​, ಟೆಲಿಕಮ್ಯುನಿಕೇಷನ್​ ವಿಭಾಗ) - 24
(ಸಾಮಾನ್ಯ ವರ್ಗದ ಅಭ್ಯರ್ಥಿಗಳಿಗೆ 12 ಸ್ಥಾನ, ಇತರ ಹಿಂದುಳಿದ ಅಭ್ಯರ್ಥಿಗಳಿಗೆ 6, ಎಸ್ಸಿಗೆ 3, ಎಸ್ಟಿಗೆ 3ಸ್ಥಾನ ಮೀಸಲಿರಿಸಲಾಗಿದೆ)

ಶೈಕ್ಷಣಿಕ ಅರ್ಹತೆ: ಇಲೆಕ್ಟ್ರಾನಿಕ್ಸ್​/ ಇಲೆಕ್ಟ್ರಾನಿಕ್ಸ್​ ಆ್ಯಂಡ್​ ಕಮ್ಯುನಿಕೇಷನ್​/ ಇಲೆಕ್ಟ್ರಾನಿಕ್ಸ್​ ಆ್ಯಂಡ್​ ಟೆಲಿ ಕಮ್ಯುನಿಕೇಷನ್​ನಲ್ಲಿ ಪೂರ್ಣಾವಧಿಯ ಬಿಇ/ ಬಿ.ಟೆಕ್​/ ಬಿಎಸ್ಸಿ ಪದವಿಯನ್ನು ಸಾಮಾನ್ಯವರ್ಗ, ಒಬಿಸಿ ಅಭ್ಯರ್ಥಿಗಳು ಪ್ರಥಮ ದರ್ಜೆಯಲ್ಲಿ ಉತ್ತೀರ್ಣರಾಗಿರಬೇಕು, ಎಸ್ಸಿ, ಎಸ್ಟಿ ಅಭ್ಯರ್ಥಿಗಳು ಉತ್ತೀರ್ಣರಾಗಿದ್ದರೆ ಸಾಕು. ಕನಿಷ್ಠ ಒಂದು ವರ್ಷದ ವೃತ್ತಿ ಅನುಭವ ಕೇಳಲಾಗಿದೆ.

ವಯೋಮಿತಿ: 1.9.2022ಕ್ಕೆ ಅನ್ವಯವಾಗುವಂತೆ ಗರಿಷ್ಠ 25 ವರ್ಷ ವಯೋಮಿತಿ ನಿಗದಿಪಡಿಸಲಾಗಿದ್ದು, ಮೀಸಲಾತಿ ಅಭ್ಯರ್ಥಿಗಳಿಗೆ ಸರ್ಕಾರದ ನಿಯಮದನ್ವಯ 3 ರಿಂದ 10 ವರ್ಷ ವಯೋ ಸಡಿಲಿಕೆ ಇದೆ.

ವೇತನ: ಮಾಸಿಕ 40,000 ರೂ. ದಿಂದ 1,40,000 ರೂ. ವೇತನ ಜತೆ ಡಿಎ, ಮನೆ ಬಾಡಿಗೆ ಭತ್ಯೆ, ಗ್ರೂಪ್​ ಇನ್​ಶ್ಯುರೆನ್ಸ್​, ಮೆಡಿಕಲ್​ ಫೆಸಿಲಿಟೀಸ್​, ಪ್ರಾವಿಡಂಟ್​ ಫಂಡ್​, ಪೆನ್ಷನ್​, ಗ್ರಾಚುಟಿಯನ್ನು ಸಂಸ್ಥೆಯ ನಿಯಮಾನುಸಾರ ನೀಡಲಾಗುವುದು.

ಅರ್ಜಿ ಶುಲ್ಕ: ಎಸ್ಸಿ, ಎಸ್ಟಿ, ಅಂಗವಿಕಲ ಅಭ್ಯರ್ಥಿಗಳನ್ನು ಹೊರತುಪಡಿಸಿ ಉಳಿದ ಅಭ್ಯರ್ಥಿಗಳು 708 ರೂ. ಅನ್ನು ಪಾವತಿಸತಕ್ಕದ್ದು.

ಆಯ್ಕೆ ಪ್ರಕ್ರಿಯೆ: ಅಭ್ಯರ್ಥಿಗಳ ಶೈಕ್ಷಣಿಕ ಅಂಕ, ವೃತ್ತಿ ಅನುಭವ ಆಧರಿಸಿ ಶಾರ್ಟ್​ಲಿಸ್ಟ್​ ಮಾಡಿ 1:5ರ ಅನುಪಾತದಲ್ಲಿ ಸಂದರ್ಶನಕ್ಕೆ ಆಹ್ವಾನಿಸಲಾಗುವುದು. ಆಯ್ಕೆಪಟ್ಟಿಯನ್ನು ಬಿಇಎಲ್​ ವೆಬ್​ಸೈಟ್​ನಲ್ಲಿ ಪ್ರಕಟಿಸಲಾಗುವುದು. ಆಭ್ಯರ್ಥಿಗಳು ತಮ್ಮ ಸಂದರ್ಶನದ ಆಹ್ವಾನಪತ್ರದ ಪ್ರತಿ ಪಡೆದು ಸಂದರ್ಶನದ ಸಮಯದಲ್ಲಿ ತರಲು ಸೂಚಿಸಲಾಗಿದೆ.

ಅರ್ಜಿ ಸಲ್ಲಿಸಲು ಕೊನೇ ದಿನ: 6.10.2022
ಅಧಿಸೂಚನೆಗೆ: https://bit.ly/3LlbzxU

ಮಾಹಿತಿಗೆ: http://www.bel-india.in

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net