ಬೆಡ್‌ರೂಮ್‌ನಲ್ಲಿ ಪತಿಯ ಕೊಂದು, ಅಲ್ಲಿಯೇ ಸಮಾಧಿ ಮಾಡಿದಳು- ಕಾರಣ ಮಾತ್ರ ನಿಗೂಢ!

Murder 11 June 20 1
Published on

ಅಗರ್ತಲಾ: ಗಂಡನನ್ನು ಬೆಡ್‌ರೂಮ್‌ನಲ್ಲಿಯೇ ಕೊಂದು, ಅಲ್ಲಿಯೇ ಸಮಾಧಿ ಮಾಡಿ ನಂತರ ಪೊಲೀಸರಿಗೆ ಯುವತಿ ಶರಣಾಗಿರುವ ಘಟನೆ ಅಗರ್ತಲಾದಲ್ಲಿ ನಡೆದಿದೆ.

ಭಾರತಿ ರೆಂಗ್‌ ಎಂಬ 25 ವರ್ಷದ ಯುವತಿ ಗಂಡನ ಕೊಲೆ ಮಾಡಿರುವ ಆರೋಪ ಎದುರಿಸುತ್ತಿದ್ದಾಳೆ. ಈಕೆ ತನ್ನ ಗಂಡ 30 ವರ್ಷದ ಸಂಜಿತ್‌ನನ್ನು ಕೊಲೆ ಮಾಡಿ ಪೊಲೀಸರಿಗೆ ಶರಣಾಗಿದ್ದಾಳೆ.

ಭಾರತಿ ನೀಡದ ಹೇಳಿಕೆ ಮೇರೆಗೆ ಪೊಲೀಸರು ಧಲೈ ಜಿಲ್ಲೆಯ ಗಂಡಚೆರಾ ಉಪವಿಭಾಗದ ಹಳ್ಳಿಯೊಂದಕ್ಕೆ ಹೋಗಿ ನೋಡಿದಾಗ ಪತಿಯ ಶವ ಬೆಡ್‍ರೂಮಿನಲ್ಲಿ ದೊರಕಿದೆ. ಶವವನ್ನು ಹೊರತೆಗೆದು ಪೊಲೀಸರು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದು, ಅದರಲ್ಲಿ ಭಾರವಾದ ವಸ್ತುವಿನಿಂದ ತಲೆಗೆ ಹೊಡೆದು ವ್ಯಕ್ತಿಯನ್ನು ಹತ್ಯೆ ಮಾಡಲಾಗಿದೆ ಎಂದು ತಿಳಿದು ಬಂದಿದೆ.

ಆದರೆ ತಾನೇಕೆ ಗಂಡನನ್ನು ಕೊಲೆ ಮಾಡಿದೆ, ಕೊಲೆ ಮಾಡಿ ನೇರವಾಗಿ ಪೊಲೀಸರಿಗೆ ಹೇಳುವ ಬದಲು ಅಲ್ಲಿಯೇ ಏಕೆ ಸಮಾಧಿ ಮಾಡಿದೆ ಎಂಬ ಬಗ್ಗೆ ಪೊಲೀಸರು ಎಷ್ಟೇ ಕೇಳಿದರೂ ಆರೋಪಿ ಭಾರತಿ ಬಾಯಿ ಬಿಡುತ್ತಿಲ್ಲ ಎಂದು ಪೊಲೀಸರು ಹೇಳಿದ್ದಾರೆ.

ಈ ದಂಪತಿಗೆ ಆರು ವರ್ಷದ ಮಗಳಿದ್ದಾಳೆ. ಕೊಲೆಗೆ ಕಾರಣ ತಿಳಿಯುವುದು ಕಷ್ಟವಾಗಿದೆ, ಏಕೆಂದರೆ ಭಾರತಿ ಏನೂ ಬಾಯಿ ಬಿಡುತ್ತಿಲ್ಲ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಈ ಸಂಬಂಧ ತನಿಖೆ ಮುಂದುವರಿದಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net