ಕೇರಳ, ತಮಿಳುನಾಡಿಗೆ ಅಪ್ಪಳಿಸಲಿದೆ ಅರ್ನಬ್​- ನಿವಾರ್​, ಬುರೇವಿ ನಂತರ ಇನ್ನೊಂದು ಶಾಕ್​!

arnab cyclone
Published on

ಚೆನ್ನೈ: ತಮಿಳುನಾಡು, ಕೇರಳ, ಆಂಧ್ರಪ್ರದೇಶಗಳಿಗೆ ಈ ವರ್ಷಾಂತ್ಯ ಭಾರಿ ಅನಾಹುತಗಳನ್ನೇ ಸೃಷ್ಟಿಸುತ್ತಿದೆ. ನಿವಾರ್​ ಹಾಗೂ ಬುರೇವಿಯ ಚಂಡಮಾರುತಗಳ ಹೊಡೆತದಿಂದ ಇನ್ನೂ ಸುಧಾರಿಸಿಕೊಳ್ಳದ ಈ ರಾಜ್ಯಗಳಿಗೆ ಇದೀಗ ಅರ್ನಬ್​ ಶಾಕ್​ ಕೊಡಲಿದೆ.

ಹಿಂದೂಮಹಾಸಾಗರದಲ್ಲಿ ವಾಯುಭಾರ ಕುಸಿತದಿಂದಾಗಿ ಅರ್ನಬ್​ ಚಂಡಮಾರುತ ಎದ್ದಿದೆ. ಇದಾಗಲೇ ಕೇರಳ ಪ್ರವೇಶಿಸಲು ಸನ್ನದ್ಧವಾಗಿರುವ ಚಂಡಮಾರುತ ಕೆಲವೇ ದಿನಗಳಲ್ಲಿ ತಮಿಳುನಾಡು ಪ್ರವೇಶಿಸಲಿದೆ ಎಂದು ಹವಾಮಾನ ಇಲಾಖೆ ಹೇಳಿದೆ.

ಈ ಹಿನ್ನೆಲೆಯಲ್ಲಿ ಕೇರಳ ಮತ್ತು ತಮಿಳುನಾಡಿನಲ್ಲಿ ಭೀಕರ ಮಳೆಯಾಗುವ ಸಾಧ್ಯತೆ ಇದ್ದು, ನೆರೆಯ ಕರ್ನಾಟಕದ ಮೇಲೂ ಇದು ಪರಿಣಾಮ ಬೀರಲಿದೆ.

ಅಷ್ಟಕ್ಕೂ ಅರ್ನಬ್​ ಎಂದರೆ ಸಮುದ್ರ. ಇದರ ಮೂಲ ಸಂಸ್ಕೃತ. ಸಂಸ್ಕೃತದಲ್ಲಿ ಅರ್ಣವ ಎಂದರೆ ಸಮುದ್ರ. ಅರ್ಣವದಿಂದ ಅರ್ನಬ್​ ಆಗಿದೆ. ಅರ್ಣವ ಎನ್ನುವುದು ಹನುಮಂತನ ಹೆಸರು ಕೂಡ. ಈತ ಸಮುದ್ರ ಸೀಮೋಲ್ಲಂಘನ ಮಾಡಿದ್ದರಿಂದ ಈ ಹೆಸರು. ಹೀಗಾಗಿ ಈಗ ಸಮುದ್ರಗಳಲ್ಲಿ ಅಲೆಯೇಳುವ ಚಂಡಮಾರುತಕ್ಕೆ ಅರ್ನಬ್ ಎಂದು ಹೆಸರು ಇಡಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net