ತಿರುಪತಿಯಲ್ಲಿ ಅಪ್ಪುವಿಗೆ ಇದೆಂಥ ಅವಮಾನ? ಕನ್ನಡ ಬಾವುಟಕ್ಕೂ ನೋ ಎಂಟ್ರಿ! ಶಿವಣ್ಣ ನೋವು...

puneeth
Published on

ತಿರುಪತಿ: ತಿರುಪತಿಗೆ ತೆರಳಿದ್ದ ವ್ಯಕ್ತಿಯೊಬ್ಬರ ಕಾರಿನಲ್ಲಿದ್ದ ಪುನೀತ್​ ರಾಜ್​ಕುಮಾರ್​ ಅವರ ಸ್ಟಿಕ್ಕರ್​ ಅನ್ನು ಕಿತ್ತುಹಾಕಿ ಅಪಮಾನ ಮಾಡಿರುವ ಘಟನೆ ಅಪ್ಪು ಅಭಿಮಾನಿಗಳಲ್ಲಿ ಭಾರಿ ಕಿಡಿಯನ್ನು ಹೊತ್ತಿಸಿದೆ.

ಅಪ್ಪು ಅಭಿಮಾನಿಯೊಬ್ಬರ ಕಾರಿನ ಮೇಲಿದ್ದ ಅಪ್ಪುವಿನ ಸ್ಟಿಕ್ಕರ್​ ಅನ್ನು ತಿರುಪತಿಯಲ್ಲಿ ಕಿತ್ತು ಹಾಕಲಾಗಿದೆ. ಮಾತ್ರವಲ್ಲದೇ ಕನ್ನಡದ ಬಾವುಟವನ್ನೂ ಕಿತ್ತು ಹಾಕಲಾಗಿದೆ. ಈ ರೀತಿ ಕಾರಿನಲ್ಲಿ ಸ್ಟಿಕ್ಕರ್​ ಅಂಟಿಸುವುದು ನಿಯಮ ಉಲ್ಲಂಘನೆ ಎಂಬ ಕಾರಣಕ್ಕೆ ಈ ರೀತಿ ಮಾಡಲಾಗಿದೆ. ಬೆಂಗಳೂರಿನಿಂದ ತಿರುಪತಿಗೆ ಹೋಗಿದ್ದ ಅಪ್ಪು ಅಭಿಮಾನಿಯೊಬ್ಬರಿಗೆ ಈ ರೀತಿ ಆಗಿದ್ದು, ಇದರ ವಿಡಿಯೋ ಭಾರಿ ವೈರಲ್​ ಆಗಿದೆ. ಸ್ಟಿಕ್ಕರ್ ತೆಗೆಯುತ್ತಿದ್ದ ದೃಶ್ಯವನ್ನು ಕರ್ನಾಟಕ ರಕ್ಷಣಾ ವೇದಿಕೆಯ ಗಜಸೇವೆ ರಾಜ್ಯಾಧ್ಯಕ್ಷ ತಾಯ್ನಾಡು ರಾಘವೇಂದ್ರ ವಿಡಿಯೋ ಮಾಡಿದ್ದು, ಇದನ್ನು ನೋಡಿದವರು ಆಂಧ್ರದ ವಿರುದ್ಧ ಕಿಡಿ ಕಾರಿದ್ದಾರೆ.

ಈ ಬಗ್ಗೆ ನಟ ಶಿವರಾಜ್​ಕುಮಾರ್​ ತುಂಬಾ ಬೇಸರ ವ್ಯಕ್ತಪಡಿಸಿದ್ದಾರೆ. ಈ ರೀತಿ ಯಾರು ಮಾಡಿದರೋ ನನಗೆ ಗೊತ್ತಿಲ್ಲ. ಆದರೆ ಹೀಗೆ ಅಭಿಮಾನದಿಂದ ಹಾಕಿಕೊಂಡಿರುವ ಫೋಟೋ ತೆಗೆಯಬಾರದು. ಇದು ಅಪ್ಪು ಫೋಟೋ ಅಥವಾ ನನ್ನ ತಮ್ಮನ ಫೋಟೋ ಎಂದು ಹೇಳುತ್ತಿಲ್ಲ. ಯಾರದ್ದೇ ಆಗಿದ್ದರೂ ಹೀಗೆ ಮಾಡಬಾರದು. ಅಭಿಮಾನಿಗಳು, ಅಭಿಮಾನದಿಂದ ಫೋಟೋ ಹಾಕಿರುತ್ತಾರೆ. ಹೀಗೆ ಅದನ್ನು ಕಿತ್ತು ಹರ್ಟ್ ಮಾಡುವುದು ಸರಿಯಲ್ಲ ಎಂದಿದ್ದಾರೆ.

ತಮ್ಮ ನಟನ ಬಗ್ಗೆ ಅಭಿಮಾನಿಗಳಲ್ಲಿ ಟ್ರೂ ಫೀಲಿಂಗ್ ಇರುತ್ತದೆ. ಅದಕ್ಕೆ ಹೀಗೆ ಮಸಿ ಬಳಿಯಬಾರದು. ನಮಗೆ ಇಷ್ಟ ಇರುತ್ತೋ ಇಲ್ವೋ ಗೊತ್ತಿಲ್ಲ ಯಾರು ಆ ರೀತಿ ಮಾಡಬಾರದು ಎಂದಿದ್ದಾರೆ.

ಇನ್ನು ಈ ಘಟನೆ ಕನ್ನಡಿಗರನ್ನು ರೊಚ್ಚಿಗೆಬ್ಬಿಸಿದೆ. ಈ ಕುರಿತು ಮಾತನಾಡಿರುವ ತಾಯ್ನಾಡು ರಾಘವೇಂದ್ರ ಕನ್ನಡದ ಜನತೆ ತಿರುಪತಿಯಲ್ಲಿ ಕನ್ನಡ ಧ್ವಜ ಹಾಕುವಂತಿಲ್ಲ. ಕನ್ನಡ ನಟರ ಫೋಟೋಗಳನ್ನು ಅಭಿಮಾನಿಳು ಹಾಕಿಕೊಳ್ಳುವಂತಿಲ್ಲ. ತಿರುಮಲ ತಿರುಪತಿ ದೇವಸ್ಥಾನಕ್ಕೆ ತೆರಳುವ ಮುಖ್ಯದ್ವಾರದಲ್ಲಿ ಕನ್ನಡ ಬಾವುಟಕ್ಕೆ ಕರ್ನಾಟಕದ ವಾಹನಗಳಿಗೆ ಅವಮಾನ ಮಾಡಲಾಗುತ್ತಿದೆ. ಇದೆಂಥ ಸಂಸ್ಕೃತಿ ಎಂದು ಕಿಡಿ ಕಾರಿರುವ ಅವರು, ಈ ಬಗ್ಗೆ ಕರ್ನಾಟಕ ಸರ್ಕಾರ ಆಂಧ್ರ ಸರಕಾರದವರ ಜೊತೆ ಮಾತನಾಡಬೇಕು ಎಂದಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net