

ಬೆಂಗಳೂರು: ಇಂದು ವಿಶ್ವದ ಮೊದಲ ಹೈಬ್ರಿಡ್ ಏರ್ ಷೋಗೆ ಚಾಲನೆ ದೊರೆತಿದೆ. ಬೆಂಗಳೂರಿನ ಯಲಹಂಕ ವಾಯುನೆಲೆಯಲ್ಲಿ ಈ ಪ್ರದರ್ಶನ ನಡೆಯುತ್ತಿದೆ. ಇಷ್ಟು ವರ್ಷ ಕೇವಲ ಸ್ಥಳಕ್ಕೆ ಹೋಗಿ ಲೋಹದ ಹಕ್ಕಿಗಳ ನರ್ತನವನ್ನು ನೋಡಬಹುದಿತ್ತು. ಆದರೆ ಇದೇ ಮೊದಲ ಬಾರಿಗೆ ಕೋವಿಡ್‌ನಿಂದಾಗಿ ಮನೆಯಲ್ಲಿ ಕುಳಿತು ವಿಶ್ವದ ಯಾವುದೇ ಮೂಲೆಗಳಿಂದಲೂ ಈ ಏರ್‌ಷೋ ನೋಡಬಹುದಾಗಿದೆ. ಆದ್ದರಿಂದ ಇದನ್ನು ಹೈಬ್ರಿಡ್ ಏರ್ ಷೋ ಎಂದು ಹೆಸರಿಸಾಗಿದೆ.
ಇಂಥದ್ದೊಂದು ಐತಿಹಾಸಿಕ ಷೋಗೆ ಇದಾಗಲೇ ಚಾಲನೆ ದೊರೆತಿದೆ. ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಚಾಲನೆ ನೀಡಿದ್ದಾರೆ.
ಕಾರ್ಯಕ್ರದಲ್ಲಿ ಉಪಸ್ಥಿತರಿದ್ದ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ಭಾರತದ ಶೇ. 65ರಷ್ಟು ಯುದ್ಧ ವಿಮಾನಗಳು ಕರ್ನಾಟಕದಲ್ಲೇ ಸಿದ್ಧವಾಗುತ್ತಿವೆ. ದೇವನಹಳ್ಳಿಯಲ್ಲಿ 1 ಸಾವಿರ ಎಕರೆ ವಿಸ್ತೀರ್ಣದ ಏರೋಸ್ಪೇಸ್ ಪಾರ್ಕ್ ಸಿದ್ಧವಾಗುತ್ತಿದೆ. ಎರಡು ಅಂತಾರಾಷ್ಟ್ರೀಯ ಮತ್ತು ಐದು ಡೊಮೆಸ್ಟಿಕ್ ಏರ್ಪೋರ್ಟ್ಗಳು ಕರ್ನಾಟಕದಲ್ಲಿ ಇವೆ ಎಂಬ ಮಾಹಿತಿ ನೀಡಿದರು.
ಬೆಂಗಳೂರು ವಿದ್ಯಾಭ್ಯಾಸ, ಸ್ಟಾರ್ಟ್ ಅಪ್, ವಹಿವಾಟಿಗೆ ಅತ್ಯುತ್ತಮ ಸ್ಥಳವಾಗಿದೆ. ಭಾರತದ ಒಟ್ಟಾರೆ ವೈಮಾನಿಕ ತಯಾರಿಕೆಯಲ್ಲಿ ಶೇ. 65ರಷ್ಟು ಕರ್ನಾಟಕದಲ್ಲೇ ಆಗುತ್ತದೆ. ಕೋವಿಡ್ ಸಂದರ್ಭದಲ್ಲೂ ಬೆಂಗಳೂರಿನಲ್ಲಿ ಏರ್ ಶೋ ನಡೆಸಲು ನಿರ್ಧರಿಸಿದ್ದಕ್ಕೆ ರಕ್ಷಣಾ ಇಲಾಖೆಗೆ ಧನ್ಯವಾದ ಅರ್ಪಿಸುತ್ತೇನೆ ಎಂದು ಯಡಿಯೂರಪ್ಪ ಹೇಳಿದರು.
540 ಪ್ರದರ್ಶಕರು, 77 ವಿದೇಶಿ ಪ್ರದರ್ಶಕರು ಇದರಲ್ಲಿ ಭಾಗಿಯಾಗಲಿದ್ದಾರೆ.
ಇವುಗಳ ಕೆಲವೊಂದು ವಿಡಿಯೋಗಳನ್ನೂ ನೀವೂ ಕಣ್ತುಂಬಿಸಿಕೊಳ್ಳಿ