ಇದೆಂಥ ಹೊಸ ಅವತಾರನಪ್ಪ! ಬಲೂನು ಬಿಟ್ಟು ಭಾರತವನ್ನು ಹೆದರಿಸಲು ನೋಡ್ತಿದೆಯೇ ಪಾಕ್​?

pak ballon
Published on

ಶ್ರೀನಗರ: ದಾಳಿ ಮಾಡಿ, ಗುಂಡು ಹಾರಿಸಿ, ಕದನ ವಿರಾಮ ಉಲ್ಲಂಘಿಸಿ, ಎಲ್ಲಾ ರೀತಿಯ ಕುತಂತ್ರ ಬುದ್ಧಿಯನ್ನು ಉಪಯೋಗಿಸಿ ಭಾರತವನ್ನು ಬೆದರಿಸಲು ಯತ್ನಿಸುತ್ತಿರುವ ಪಾಕಿಸ್ತಾನ ಇದೀಗ ಹೊಸ ಉಪಾಯ ಹೂಡಿದಂತಿದೆ.

ಜಮ್ಮು ಮತ್ತು ಕಾಶ್ಮೀರದ ಸೊಟ್ರಾಚೆಕ್ ಗ್ರಾಮದ ಹಿರೇನಗರ ಪ್ರದೇಶದಲ್ಲಿ ಪಾಕಿಸ್ತಾನ ಪಿಐಎ (ಪಾಕಿಸ್ತಾನ ಇಂಟರ್‌ ನ್ಯಾಷನಲ್ ಏರ್​ಲೈನ್ಸ್) ಹೆಸರು ಇರುವ ಬಲೂನ್ ಒಂದು ಪತ್ತೆಯಾಗಿದ್ದು ಇದು ಸ್ಥಳೀಯರನ್ನು ಬೆಚ್ಚಿ ಬೀಳಿಸಿದೆ.

ವಿಚಿತ್ರ ಬಲೂನು ನೋಡಿದ ಕೂಡಲೇ ಗ್ರಾಮಸ್ಥರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಈ ಕುರಿತು ಮಾಹಿತಿ ಬರುತ್ತಿದ್ದಂತೆಯೇ ಕಾರ್ಯಪ್ರವೃತ್ತರಾದ ರಾಜ್‍ಬಾಗ್ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಬಲೂನ್​ನನ್ನು ವಶಕ್ಕೆ ಪಡೆದು ತನಿಖೆ ಮುಂದುವರೆಸಿದ್ದಾರೆ.

ಇದು ಮಕ್ಕಳಾಡುವ ವಿಮಾನ ಮಾದರಿಯ ಬಲೂನೋ ಅಥವಾ ನಿಜವಾಗಿಯೂ ಪಾಕಿಸ್ತಾನದ ಗುಪ್ತಚರ ಇಲಾಖೆಯ ಕುತಂತ್ರವೋ ಎಂಬುದನ್ನು ಶೀಘ್ರದಲ್ಲೇ ಪತ್ತೆ ಹಚ್ಚಲಾಗುವುದು ಎಂದು ಹಿರಿಯ ಅಧಿಕಾರಿಯೊಬ್ಬರು ಸ್ಪಷ್ಟಪಡಿಸಿದ್ದಾರೆ.

ಆದರೆ ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಫೋಟೋ ವೈರಲ್​ ಆಗುತ್ತಿದ್ದಂತೆಯೇ ತಮಾಷೆ ಮಾಡಿದವರೇ ಹೆಚ್ಚು. ಈ ಬಲೂನ್​ ನೋಡಿದರೆ ಮಕ್ಕಳ ಆಟಿಕೆಯಂತಿದೆ. ಪಾಕಿಸ್ತಾನ ಇದಕ್ಕಿಂತ ಬೇರೇನೂ ಮಾಡಲು ಸಾಧ್ಯವಿಲ್ಲ ಎಂದು ತಮಾಷೆಯ ಕಮೆಂಟ್​ಗಳನ್ನು ಹಾಕುತ್ತಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net