More

    ಕನ್ನಡಿಗ ‘ಸೆಟಲೈಟ್​ ಮ್ಯಾನ್​’ಗೆ ಗೂಗಲ್​ ನಮನ- ಉಡುಪಿಯ ಈ ಸಾಧಕನ ಬಗ್ಗೆ ನಿಮಗೆಷ್ಟು ಗೊತ್ತು?

    ವಾಷಿಂಗ್ಟನ್​: ಹಲವಾರು ಕ್ಷೇತ್ರಗಳ ದಿಗ್ಗಜರ ಹುಟ್ಟುಹಬ್ಬ ಅಥವಾ ಪುಣ್ಯಸ್ಮರಣೆಯನ್ನು ಗೂಗಲ್​ ತನ್ನ ಡೂಡಲ್​ ಮೂಲಕ ವಿಶೇಷವಾಗಿ ಸ್ಮರಿಸಿಕೊಳ್ಳುತ್ತದೆ.
    ಇಂದು ನೀವು ಗೂಗಲ್​ ಡಾಟ್​ ಕಾಮ್​ ಟೈಪಿಸಿದ ನಂತರ ಓರ್ವ ವ್ಯಕ್ತಿಯ ಚಿತ್ರವು ಎಲ್ಲರಿಗೂ ಕಾಣಿಸುತ್ತದೆ. ಅವರ್ಯಾರು ಗೊತ್ತಾ? ಇವರೇ ಉಡುಪಿ ರಾಮಚಂದ್ರ ರಾವ್​. ಹೆಸರಿನಲ್ಲಿಯೇ ಇರುವಂತೆ ಇವರು ಉಡುಪಿಯ ಕುವರ, ಕರುನಾಡ ಹೆಮ್ಮೆಯ ಪುತ್ರ.

    ವಿಜ್ಞಾನಿ ಉಡುಪಿ ರಾಮಚಂದ್ರ ರಾವ್​​​ ಅವರ ಜನ್ಮದಿನವಿಂದು. ಈ ಹಿನ್ನೆಲೆಯಲ್ಲಿ ಗೂಗಲ್​ ತನ್ನ ಡೂಡಲ್​ ಮೂಲಕ ಈ ಮಹಾನ್​ ವಿಜ್ಞಾನಿಯನ್ನು ಸ್ಮರಿಸಿಕೊಂಡಿದೆ. ಅವರ ಫೋಟೋದ ಜತೆಗೆ ಭೂಮಿಯ ಚಿತ್ರವಿರುವ ಡೂಡಲ್​ ರಚಿಸಿರುವ ಕಾರಣ ಏನು ಗೊತ್ತಾ?

    ಸೆಟಲೈಟ್​ ಮ್ಯಾನ್​ ಎಂದೇ ವಿಶ್ವಖ್ಯಾತಿ ಪಡೆದಿರುವ ಕನ್ನಡಿಗ ಪ್ರೊ.ರಾಮಚಂದ್ರ ರಾವ್ ಅವರ ಹೆಸರು ಕೇಳಿದವರು ಬಹಳ ವಿರಳ ಎಂದೇ ಹೇಳಬೇಕು. 1975ರಲ್ಲಿ ಭಾರತದ ಮೊದಲ ಉಪಗ್ರಹ​​ ಆರ್ಯಭಟ ಉಡಾವಣೆಯ ನೇತೃತ್ವ ವಹಿಸಿದ್ದು ಇದೇ ಕನ್ನಡದ ಪುತ್ರ. ಇವರು ಇಸ್ರೋದ ಮುಖ್ಯಸ್ಥರಾಗಿದ್ದರು. ಇದೇ ಕಾರಣಕ್ಕೆ ಅವರ ಫೋಟೋದ ಜತೆಗೆ ಭೂಮಿಯ ಚಿತ್ರವನ್ನು ಚಿತ್ರಿಸಲಾಗಿದೆ.

    ಪ್ರೊ, ರಾಮಚಂದ್ರ ರಾವ್​ ಅವರು 20ಕ್ಕೂ ಹೆಚ್ಚು ಉಪಗ್ರಹಗಳನ್ನು ಅಭಿವೃದ್ಧಿ ಪಡಿಸಿದ್ದಾರೆ. 1994ರಲ್ಲಿ ಭಾರತ ಬಾಹ್ಯಕಾಶ ಸಂಶೋಧನಾ ಸಂಸ್ಥೆಯ ಅಧ್ಯಕ್ಷರಾಗಿದ್ದರು ಇವರು. 2013ರಲ್ಲಿ ಸ್ಯಾಟಲೈಟ್​​ ಹಾಲ್​ ಆಫ್​ ಪ್ರೇಮ್​ಗೆ ಸೇರ್ಪಡೆಯಾದ ಮೊದಲ ಭಾರತೀಯ ಹೆಗ್ಗಳಿಕೆ ಇವರ ಮೇಲಿದೆ.

    ರಾಮಚಂದ್ರ ರಾವ್ ಅವರು 1932ರಲ್ಲಿ ಉಡುಪಿಯ ಹಳ್ಳಿಯೊಂದರಲ್ಲಿ ಜನಿಸಿದರು. ಭೌತಶಾಸ್ತ್ರಜ್ಞರಾಗಿದ್ದ ಇವರು ಅಮೆರಿಕದಲ್ಲಿ ಪ್ರೊಫೆಸರ್​ ಆಗಿ ಸೇವೆ ಸಲ್ಲಿಸಿದರು. ನಂತರ ನಾಸಾ ಬಾಹ್ಯಾಕಾಶ ಶೋಧಕಗಳಲ್ಲಿ ಪ್ರಯೋಗ ಮಾಡಿದರು. 1966ರಲ್ಲಿ ಭಾರತಕ್ಕೆ ಮರಳಿದರು. 1972ರಲ್ಲಿ ಭಾರತದ ಪ್ರಮುಖ ಬಾಹ್ಯಕಾಶ ವಿಜ್ಞಾನ ಸಂಸ್ಥೆಯಾದ ಭೌತಿಕ ಸಂಶೋಧನಾ ಪ್ರಯೋಗಾಲಯದಲ್ಲಿ ಸಮಗ್ರ ಉನ್ನತ ಶಕ್ತಿಯ ಖಗೋಳವಿಜ್ಞಾನ ಕಾರ್ಯಕ್ರಮವನ್ನು ಪ್ರಾರಂಭಿಸಿದ ಕೀರ್ತಿ ಇವರಿಗೆ ಸಲ್ಲುತ್ತದೆ.

    ಇವರ ಸಾಧನೆಗೆ ಪದ್ಮ ಭೂಷಣ, ಪದ್ಮ ವಿಭೂಷಣ ಪ್ರಶಸ್ತಿ ಲಭಿಸಿದೆ. 2017ರ ಜುಲೈ 21ರಂದು ರಾಮಚಂದ್ರ ರಾವ್​ ಮೃತಪಟ್ಟಿದ್ದಾರೆ.

    ಅವನನ್ನು ನಂಬಿ ದೇಹ ಒಪ್ಪಿಸಿಬಿಟ್ಟೆ… ಈಗ ಬೇರೆ ಮದ್ವೆಯಾಗಿದ್ದಾನೆ… ಹುಚ್ಚಿಯಾಗದಂತೆ ನಾನೇನು ಮಾಡಲಿ ಮೇಡಂ?

    ಟೈಪಿಂಗ್​, ಷಾರ್ಟ್​ಹ್ಯಾಂಡ್​ ಕಲಿತಿರುವಿರಾ? ಕೋರ್ಟ್​ನಲ್ಲಿವೆ 18 ಹುದ್ದೆಗಳು

    ನಂಗೆ ಬೇಕು… ನಂಗೆ ಬೇಕು… ಮುಗಿಬಿದ್ದು ಮದ್ಯದಂಗಡಿ ಹರಾಜಿಗೆ ಬಂದ ಜನ- 510 ಕೋಟಿ ರೂ.ಗೆ ಸೇಲ್​!

    ಕ್ರೀಡಾ ಪ್ರಾಧಿಕಾರದಲ್ಲಿ ಕನ್ಸಲ್ಟಂಟ್ ಹುದ್ದೆ- ₹1 ಲಕ್ಷದವರೆಗೆ ವೇತನ- 55 ವರ್ಷದವರೆಗೂ ಆದ್ಯತೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts