VIDEO: ವಿಮಾನಕ್ಕೆ ಬಿತ್ತು ಬೆಂಕಿ: ಇನ್ನೇನು 241 ಪ್ರಯಾಣಿಕರ ಸಾವು ಸನಿಹದಲ್ಲಿತ್ತು- ನಡೆಯಿತು ಪವಾಡ

vimana
Published on

ವಾಷಿಂಗ್ಟನ್: ಎಷ್ಟೋ ಮಂದಿಗೆ ಸಾವು ಸದ್ದಿಲ್ಲದೇ ಆವರಿಸಿಕೊಂಡು ಬಿಡುತ್ತದೆ, ಇನ್ನು ಕೆಲವರಿಗೆ ಸಾವು ಸಮೀಪವೇ ಬಂದರೂ ಅದೃಷ್ಟ ಕೈಹಿಡಿಯುತ್ತದೆ. 241 ವಿಮಾನ ಪ್ರಯಾಣಿಕರು ಇಂಥದ್ದೊಂದು ಅದೃಷ್ಟವಂತರ ಸಾಲಿಗೆ ಸೇರಿದ್ದರಿಂದ ಸಾವು ಸಮೀಪವೇ ಹಾದು ಹೋದರೂ ಬಚಾವಾಗಿದ್ದಾರೆ.

ಇಂಥದ್ದೊಂದು ಭಯಾನಕ ಘಟನೆ ನಡೆದಿರುವುದು ಅಮೆರಿಕದಲ್ಲಿ. ಬೋಯಿಂಗ್ 777-200- ಯುಎ328 ಸಂಖ್ಯೆಯ ವಿಮಾನವು ಡೆನ್ವರ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಸ್ಥಳೀಯ ಕಾಲಮಾನ ಮಧ್ಯಾಹ್ನ 12: 15ರಲ್ಲಿ ಹೊನೊಲುಲುಗೆ ಪ್ರಯಾಣ ಬೆಳೆಸಿತ್ತು. ಈ ಸಮಯದಲ್ಲಿ ಆದ ಘಟನೆಯಿಂದಾಗಿ ವಿಮಾನದಲ್ಲಿದ್ದ ಎಲ್ಲಾ 241 ಪ್ರಯಾಣಿಕರು ಹಾಗೂ ಪೈಲೆಟ್‌, ಗಗನಸಖಿಯರು ಎಲ್ಲರೂ ಜೀವ ಕಳೆದುಕೊಳ್ಳುವ ಸಾಧ್ಯತೆ ಇತ್ತು. ಆದರೆ ಪೈಲಟ್‌ ಸಮಯಪ್ರಜ್ಞೆಯಿಂದ ಎಲ್ಲರ ಜೀವವೂ ಉಳಿದಿದೆ.

ಆಗಿದ್ದೇನು?

ವಿಮಾನ ಟೇಕಾಫ್‌ ಆದ ಕೆಲ ಗಂಟೆಗಳ ನಂತರ ಮಾರ್ಗ ಮಧ್ಯೆ ಇಂಜಿನ್‌ನಲ್ಲಿ ತ್ರಿಕ ದೋಷ ಕಾಣಿಸಿಕೊಂಡಿದೆ. ಇದು ಪೈಲಟ್‌ ಗಮನಕ್ಕೆ ಬಂದಿದೆ. ಅವರು ಕೂಡಲೇ ಇದನ್ನು ಏರ್ ಟ್ರಾಫಿಕ್ ಕಂಟ್ರೋಲ್‌ ರೂಂಗೆ ಹೇಳಿದ್ದಾರೆ. ಕೂಡಲೇ ತಡ ಮಾಡದೇ ವಿಮಾನವನ್ನು ಮರಳಿ ವಿಮಾನ ನಿಲ್ದಾಣಕ್ಕೆ ತಿರುಗಿಸಿದ್ದಾರೆ.

ಇಷ್ಟೊತ್ತಿಗಾಗಲೇ ಇಂಜಿನ್‌ ಬೆಂಕಿಯಲ್ಲಿ ಧಗ ಧಗ ಉರಿಯಲು ಶುರುವಾಗಿದೆ. ಮಾತ್ರವಲ್ಲದೇ ಇಂಜಿನ್‌ನಲ್ಲಿ ಅಳವಡಿಸಲಾಗಿದ್ದ ರಕ್ಷಣಾ ಕವಚಕ್ಕೂ ಬೆಂಕಿ ತಗುಲಿದ್ದು, ಅದು ಮನೆಯೊಂದರ ಅಂಗಳದಲ್ಲಿ ಬಿದ್ದಿದೆ.

ಇಷ್ಟಾದರಲೂ ವಿಚಲಿತರಾಗದ ಪೈಲಟ್‌ ಡೆನ್ವರ್ ವಿಮಾನ ನಿಲ್ದಾಣವನ್ನು ತಲುಪಿ ಸುರಕ್ಷಿತವಾಗಿ ಲ್ಯಾಂಡ್ ಮಾಡಿದ್ದಾರೆ. ಇದರಿಂದ ಎಲ್ಲರ ಜೀವ ಉಳಿದಿದೆ. ಇದೊಂದು ಪವಾಡವೇ ಎಂದು ಬಣ್ಣಿಸಲಾಗುತ್ತಿದೆ.

ವಿಮಾನದ ಇಂಜಿನ್‌ನಗೆ ಬೆಂಕಿ ತಗುಲಿರುವ ದೃಶ್ಯ ಹಾಗೂ ಸುರಕ್ಷಿತ ಲ್ಯಾಂಡಿಂಗ್‌ ದೃಶ್ಯ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಕ್ಷಣಕ್ಷಣದ ಮಾಹಿತಿಗಾಗಿ ವಿಜಯವಾಣಿ ಫೇಸ್​ಬುಕ್​ ಪೇಜ್​ ಲೈಕ್​ ಮಾಡಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net