ಮಗುವಿಗೆ ಇಟ್ಟಿದ್ದ ಎದೆಹಾಲು ರಾತ್ರೋರಾತ್ರಿ ಮಾಯ! ಕಿತಾಪತಿ ಮಾಡಿದ ಬಾಲಿವುಡ್‌ ನಟನ ಗುಟ್ಟು ಬಿಚ್ಚಿಟ್ಟ ನಟಿ ತಾಹಿರಾ

Tahira
Published on

ಮುಂಬೈ: ಸಿನಿ ರಂಗದ ಕ್ಯೂಟ್‌ ದಂಪತಿ ಎನಿಸಿಕೊಂಡಿರುವ ಕೆಲವೇ ಕೆಲವು ಜೋಡಿಗಳ ಪೈಕಿ ಬಾಲಿವುಡ್ ನಟ ಆಯುಷ್ಮಾನ್ ಖುರಾನಾ ಮತ್ತು ತಾಹಿರಾ ಕಶ್ಯಪ್ ಕೂಡ ಒಂದು. ಇದೀಗ ತಾಹಿರಾ ಅವರು ತಮ್ಮ ಗಂಡನ ಗುಟ್ಟೊಂದನ್ನು ಬಿಚ್ಚಿಟ್ಟಿದ್ದು ಇದೀಗ ಸಾಮಾಜಿಕ ಜಾಲತಾಣದಲ್ಲಿ ಭಾರಿ ಸದ್ದು ಮಾಡುತ್ತಿದೆ.

ತಾಹಿರಾ ಅವರು ಪುಸ್ತಕವೊಂದನ್ನು ಬರೆದಿದ್ದು, ಅದರಲ್ಲಿ ಅವರು ಈ ವಿಷಯವನ್ನು ಬಹಿರಂಗಪಡಿಸಿದ್ದಾರೆ. ‘The 7 Sins Of Being A Mother’ (ತಾಯಿಯಾಗಿ ಮಾಡಿರುವ ಏಳು ತಪ್ಪುಗಳು) ಪುಸ್ತಕ ಇದಾಗಿದೆ. ಇದರಲ್ಲಿ ಮಗುವಿಗಾಗಿ ಇಟ್ಟಿರುವ ಎದೆಹಾಲು ರಾತ್ರೋರಾತ್ರಿ ಖಾಲಿಯಾಗಿರುವ ಬಗ್ಗೆ ಅವರು ವಿವರಣೆ ನೀಡಿದ್ದಾರೆ.

The 7 Sins of Being a Mother eBook : Khurrana, Tahira Kashyap: Amazon.in:  Kindle Store

ಈ ದಂಪತಿಗೆ ಮಗು ಹುಟ್ಟಿದ ಏಳನೇ ತಿಂಗಳಿಗೆ ಪ್ರವಾಸ ಮಾಡುವ ಪ್ಲ್ಯಾನ್‌ ಹಾಕಿದರು. ಅದೊಂದು ರೀತಿಯಲ್ಲಿ ಹನಿಮೂನ್‌ ಟ್ರಿಪ್‌ ಕೂಡ ಆಗಿತ್ತು ಎಂದು ನಟಿ ಬರೆದುಕೊಂಡಿದ್ದಾರೆ. ‘ಮಗ ವಿರಾಜ್‌ವೀರ್‌ಗೆ ಏಳು ತಿಂಗಳು ಆಗಿತ್ತು. ಇದು ಹನಿಮೂನ್‌ ಟ್ರಿಪ್‌ ಆಗಿತ್ತು. ಆದ್ದರಿಂದ ಮಗನನ್ನು ಅಮ್ಮನ ಬಳಿ ಬಿಟ್ಟು ಬಂದೆವು. ಆದ್ದರಿಂದ ಮೂರು ದಿನಗಳ ಈ ಪ್ರವಾಸದ ಸಮಯದಲ್ಲಿ ಮಗನಿಗೆ ಎಷ್ಟು ಎದೆಹಾಲು ಬೇಕೋ ಅಷ್ಟನ್ನು ತೆಗೆದಿಟ್ಟು ಬಾಟಲಿಯಲ್ಲಿ ಶೇಖರಣೆ ಮಾಡಿಟ್ಟಿದ್ದೆ. ಇನ್ನೇನು ಏರ್‌ಪೋರ್ಟ್‌ನಲ್ಲಿ ವಿಮಾನ ಹತ್ತಬೇಕು ಎನ್ನುವಷ್ಟರಲ್ಲಿ ಅಮ್ಮನ ಕರೆ ಬಂತು. ನೀನು ಶೇಖರಣೆ ಮಾಡಿಟ್ಟ ಎದೆಹಾಲು ರಾತ್ರೋರಾತ್ರಿ ಖಾಲಿಯಾಗಿಬಿಟ್ಟಿದೆ’ ಎಂದರು ಎಂದಿದ್ದಾರೆ ತಾಹಿರಾ.

‘ನನಗೆ ಈ ವಿಷಯ ಕೇಳಿ ಶಾಕ್‌ ಆಯಿತು. ಇದು ಹೇಗೆ ಖಾಲಿಯಾಗಲು ಸಾಧ್ಯ ಎಂದು ಚಿಂತೆಯಾಯಿತು. ಇದನ್ನು ಪತಿ ಆಯುಷ್ಮಾನ್‌ಗೆ ಹೇಳಿದಾಗ ಜೋರಾಗಿ ನಕ್ಕಿಬಿಟ್ಟರು. ಕಾರಣ ಏನು ಕೇಳಿದಾಗ, ಅದನ್ನು ನಾನೇ ಕುಡಿದೆ ಎಂದರು. ಇದನ್ನು ಕೇಳಿ ನನಗೆ ವಿಚಿತ್ರ ಎನಿಸಿತು. ಮಗುವಿನ ಹಾಲನ್ನು ಏಕೆ ಕುಡಿದಿರಿ ಎಂದು ಕೇಳಿದಾಗ, ಅವರು ನಗುತ್ತಾ, ಎದೆಹಾಲಿನಲ್ಲಿ ಎಲ್ಲಾ ಪೋಷಕಾಂಶಗಳೂ ತುಂಬಿವೆ ಎಂದು ಹೇಳುತ್ತಾರೆ. ಆದ್ದರಿಂದ ಈ ಹಾಲನ್ನು ಪ್ರೋಟೀನ್ ಶೇಖ್‌ ಜತೆ ಬೆರೆಸಿ ಕುಡಿದೆ ಎಂದರು. ಇದನ್ನು ಕೇಳಿ ನನಗೆ ನಗಬೇಕೋ, ಅಳಬೇಕೋ ತಿಳಿಯಲಿಲ್ಲ. ಒಟ್ಟಿನಲ್ಲಿ ಈತ ಮಾಡಿದ ಕೆಲಸಕ್ಕೆ ಮಗುವಿಗೆ ಮೂರು ದಿನ ಎದೆಹಾಲು ಸಿಗಲಿಲ್ಲ’ ಎಂದು ಪುಸ್ತಕದಲ್ಲಿ ತಾಹಿರಾ ಹೇಳಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net