ಕರೊನಾ ಲಸಿಕೆ ಪಡೆದು ಖುಷಿಯಲ್ಲಿದ್ದ ನಟಿಗೆ ಶಾಕ್​ ನೀಡಿದ ರಿಪೋರ್ಟ್​: ಬಂತು ಪಾಸಿಟಿವ್​!

nagma
Published on

ಮುಂಬೈ: ಕರೊನಾ ಲಸಿಕೆ ಭಾರತಕ್ಕೆ ಕಾಲಿಟ್ಟು ತಿಂಗಳುಗಳೇ ಕಳೆದಿವೆ. ಇದೀಗ ಬಹುತೇಕ ಆಸ್ಪತ್ರೆಗಳಲ್ಲಿಯೂ ಲಸಿಕೆ ಲಭ್ಯವಿದ್ದು, ಅವುಗಳನ್ನು ಹಾಕಿಸಿಕೊಳ್ಳುವಂತೆ ತಾಕೀತು ಮಾಡಲಾಗುತ್ತಿದೆ.

ಆದರೆ ಲಸಿಕೆ ಪಡೆದ ನಂತರವೂ ಕರೊನಾ ಪಾಸಿಟಿವ್​ ಬಂದಿರುವ ವರದಿಗಳು ಅಲ್ಲಲ್ಲಿ ಬರುತ್ತಲೇ ಇವೆ. ಇದೀಗ ನಟಿ, ಕಾಂಗ್ರೆಸ್ ಮುಖಂಡೆ ನಗ್ಮಾ (50) ಅವರಿಗೂ ಇದೇ ರೀತಿಯಾಗಿದೆ. ಕೆಲ ದಿನಗಳ ಹಿಂದೆ ಕೋವಿಡ್ 19 ಮೊದಲನೇ ಡೋಸ್ ಲಸಿಕೆ ತೆಗೆದುಕೊಂಡಿದ್ದ ನಗ್ಮಾ ಅವರಿಗೆ ಕರೊನಾ ಪಾಸಿಟಿವ್​ ಕಾಣಿಸಿಕೊಂಡಿದೆ.

ಈ ಕುರಿತು ಟ್ವೀಟ್​ ಮಾಡಿ ಅವರೇ ಮಾಹಿತಿ ನೀಡಿದ್ದಾರೆ. ಕೆಲ ದಿನಗಳ ಹಿಂದೆ ಕರೊನಾ ಲಸಿಕೆ ತೆಗೆದುಕೊಂಡಿದ್ದೆ. ಆದರೆ ಈಗ ಕರೊನಾ ಪಾಸಿಟಿವ್​ ಬಂದಿದೆ. ಹೀಗಾಗಿ ಸದ್ಯ ಮನೆಯಲ್ಲೇ ಕ್ವಾರಂಟೈನ್ ಆಗಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದೇನೆ. ಈ ಹಿನ್ನೆಲೆಯಲ್ಲಿ ದಯವಿಟ್ಟು ಎಲ್ಲಾರೂ ಜಾಗರೂಕರಾಗಿರಿ. ಅಲ್ಲದೆ ಈಗಾಗಲೇ ಮೊದಲೇ ಡೋಸ್ ಪಡೆದುಕೊಂಡವರು ಕೂಡ ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಳ್ಳಿ ಎಂದಿದ್ದಾರೆ.

ನಗ್ಮಾ ಅವರು ಏಪ್ರಿಲ್ 2ರಂದು ಮೊದಲನೇ ಲಸಿಕೆ ಹಾಕಿಸಿಕೊಂಡಿದ್ದರು. ಆ ಬಳಿಕ ಇದೀಗ ಮತ್ತೆ ಟೆಸ್ಟ್ ಮಾಡಿದಾಗ ಪಾಸಿಟಿವ್ ಇರುವುದು ಗೊತ್ತಾಗಿದೆ. ಬಹುಭಾಷಾ ನಟಿಯಾಗಿರುವ ನಗ್ಮಾ ಅವರು ತೆಲುಗು, ತಮಿಳು, ಭೊಜ್ ಪುರಿ, ಮಲಯಾಳಂ, ಕನ್ನಡ ಹಾಗೂ ಹಿಂದಿ ಚಿತ್ರಗಳಲ್ಲಿ ನಟಿಸಿದ್ದಾರೆ. ಇವರ ಮೂಲ ಹೆಸರು ನಂದಿತಾ ಅರವಿಂದ ಮೊರಾರ್ಜಿ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net