

ಮುಂಬೈ: ಬಾಲಿವುಡ್ ನಟಿ ಕಾಜೋಲ್ಗೆ ಕರೊನಾ ಸೋಂಕು ತಗುಲಿರುವುದು ದೃಢಪಟ್ಟಿದೆ. ತಮಗೆ ಪಾಸಿಟಿವ್ ಬಂದಿರುವ ಸುದ್ದಿಯನ್ನು ಅವರು ಇನ್‌ಸ್ಟಾಗ್ರಾಮ್‌ನಲ್ಲಿ ಶೇರ್ ಮಾಡಿಕೊಂಡಿದ್ದಾರೆ.
ಮಗಳು ನೈಸಾ ಜೊತೆಗಿರುವ ಫೋಟೋ ಹಂಚಿಕೊಂಡಿರುವ ಕಜೋಲ್, ‘ನನಗೆ ಕೋವಿಡ್ ವರದಿ ಪಾಸಿಟಿವ್ ಬಂದಿದೆ. ನನ್ನ ಕೆಂಪು ಮೂಗನ್ನು ಯಾರಿಗೂ ತೋರಿಸಲು ಬಯಸುವುದಿಲ್ಲ. ಆದ್ದರಿಂದ ನಾವು ವಿಶ್ವದ ಅತ್ಯಂತ ಮಧುರವಾದ ನಗುವಿಗೆ ಅಂಟಿಕೊಳ್ಳೋಣ. ಮಿಸ್ ಯೂ ನೈಸಾ ದೇವಗನ್" ಎಂದು ಬರೆದುಕೊಂಡಿದ್ದಾರೆ.
1999ರಲ್ಲಿ ದಾಂಪತ್ಯ ಜೀವನಕ್ಕೆ ಕಾಜೋಲ್ ಮತ್ತು ನಟ ಅಜಯ್ ದೇವಗನ್ ದಂಪತಿಗೆ 18 ವರ್ಷದ ಪುತ್ರಿ ನೈಸಾ ದೇವಗನ್ ಎಂಬ ಹಾಗೂ 11 ವರ್ಷದ ಪುತ್ರ ಯುಗ್ ದೇವಗನ್ ಇದ್ದಾರೆ. 18 ವರ್ಷದ ನ್ಯಾಸಾ ಪ್ರಸ್ತುತ ಸ್ವಿಟ್ಜರ್ಲ್ಯಾಂಡ್ ಪ್ರತಿಷ್ಠಿತ ವಿದ್ಯಾಸಂಸ್ಥೆಯಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ. ನ್ಯಾಸಾ ದೇವಗನ್ ಇನ್ನೂ ಚಿತ್ರರಂಗಕ್ಕೆ ಕಾಲಿಟ್ಟಿಲ್ಲವಾದರೂ ದೊಡ್ಡ ಅಭಿಮಾನಿ ಬಳಗ ಹೊಂದಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಅವರ ಅಭಿಮಾನಿ ಖಾತೆಗಳೇ ಬಹಳಷ್ಟಿವೆ.