

ದುಬೈ: ವಿಶ್ವದ ಅತಿ ದೊಡ್ಡ ಬಂದರು ಎನಿಸಿಕೊಂಡಿರುವ ದುಬೈನ ಜೆಬೆಲ್ ಅಲಿ ಬಂದರಿನಲ್ಲಿರುವ ಹಡಗಿನಲ್ಲಿ ಸ್ಫೋಟ ಸಂಭವಿಸಿದ ಘಟನೆ ನಡೆದಿದೆ. ಅರೇಬಿಯನ್ ಪೆನಿನ್ಸುಲಾದ ಪೂರ್ವ ಭಾಗದಲ್ಲಿ ಮಧ್ಯಪ್ರಾಚ್ಯದಲ್ಲಿ ಈ ಘಟನೆ ಸಂಭವಿಸಿದೆ. ದುಬೈನ ಉತ್ತರ ತುದಿಯಲ್ಲಿರುವ ಜೆಬೆಲ್ ಅಲಿ ಬಂದರು ವಿಶ್ವದ ಅತಿದೊಡ್ಡ ಮಾನವ ನಿರ್ಮಿತ ಆಳ ನೀರಿನಲ್ಲಿನ ಬಂದರು ಎನಿಸಿಕೊಂಡಿದೆ.
ಜೆಬೆಲ್ ಅಲಿ ಬಂದರಿನಲ್ಲಿರುವ ಹಡಗಿನಲ್ಲಿ ಭಾರಿ ಸ್ಫೋಟ ನಡೆದಿದ್ದು, ಇದರಿಂದಾಗಿ ಸಮೀಪದ ಮನೆಗಳ ಬಾಗಿಲು ಕಿಟಕಿಗಳು ಒಡೆದಿರುವುದಾಗಿ ವರದಿಯಾಗಿದೆ. ಸ್ಫೋಟದಿಂದ ಬೆಂಕಿ ಆಗಸದತ್ತ ತನ್ನ ಕೆನ್ನಾಲಿಗೆಯನ್ನು ಚಾಚಿದ್ದರಿಂದ ಉರಿಯುತ್ತಿರುವ ಬೆಂಕಿನಂತೆ ಕಂಡಿರುವುದಾಗಿ ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ.
ಹಡಗಿನಲ್ಲಿ ಸ್ಫೋಟ ಸಂಭವಿಸಿದ ನಂತರ ಕಂಟೈನರ್ನಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಇದನ್ನು ನಿಯಂತ್ರಣಕ್ಕೆ ತರಲಾಗಿದೆ. ಸದ್ಯ ಯಾವುದೇ ಜೀವ ಹಾನಿಯಾಗಿಲ್ಲ ಎಂದು ವರದಿಯಾಗಿದೆ. ಈ ಅನಾಹುತದಿಂದ ಬಂದರು ಮತ್ತು ಸುತ್ತಮುತ್ತಲಿನ ಸರಕುಗಳಿಗೆ ಎಷ್ಟು ಹಾನಿಯಾಗಿದೆ ಎಂದು ಇದುವರೆಗೆ ಸ್ಪಷ್ಟವಾಗಿಲ್ಲ. ಬೆಂಕಿ ನಂದಿಸುವ ಕಾರ್ಯ ಭರದಿಂದ ಸಾಗಿದೆ. ಈ ಬಂದರಿನಲ್ಲಿ ಭಾರತೀಯ ಉಪಖಂಡ, ಆಫ್ರಿಕಾ ಮತ್ತು ಏಷ್ಯಾದಿಂದ ಸರಕುಗಳು ಬರುತ್ತವೆ.
ಇಲ್ಲಿವೆ ನೋಡಿ ಸ್ಫೋಟದ ವಿಡಿಯೋಗಳು: