

ಭಾರತದ ಅತಿದೊಡ್ಡ ಹಡಗು ನಿರ್ಮಾಣ ಮತ್ತು ನಿರ್ವಹಣೆ ಸಂಸ್ಥೆಯಾಗಿರುವ ಕೊಚ್ಚಿನ್ ಶಿಪ್ಯಾರ್ಡ್ನಲ್ಲಿ ವಿವಿಧ ಹುದ್ದೆಗಳನ್ನು ಭರ್ತಿ ಮಾಡಲು ಅಧಿಸೂಚನೆ ಹೊರಡಿಸಿ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಗುತ್ತಿಗೆ ಆಧಾರದ ಮೇಲೆ ನೇಮಕ ಮಾಡಿಕೊಳ್ಳುತ್ತಿದ್ದು, ಎಲ್ಲ ಹುದ್ದೆಗಳಿಗೂ ಮೀಸಲಾತಿ ಅನ್ವಯವಾಗಲಿದೆ.
ಹುದ್ದೆಗಳ ವಿವರ
ಫ್ಯಾಬ್ರಿಕೇಷನ್ ಅಸಿಸ್ಟೆಂಟ್ಸ್ ಅಡಿಯಲ್ಲಿ ಶೀಟ್ ಮೆಟಲ್ ವರ್ಕರ್-56, ವೆಲ್ಡರ್-68 ಹುದ್ದೆಗಳಿಗೆ ಹಾಗೂ ಔಟ್ಫಿಟ್ ಅಸಿಸ್ಟೆಂಟ್ಸ್ ವಿಭಾಗದಲ್ಲಿ ಫಿಟ್ಟರ್-21, ಮೆಕ್ಯಾನಿಕ್ ಡೀಸೆಲ್-13, ಮೆಕ್ಯಾನಿಕ್ ಮೋಟಾರ್ ವೆಹಿಕಲ್-5, ಪ್ಲಂಬರ್-40, ಪೇಂಟರ್-14, ಎಲೆಕ್ಟ್ರೀಷಿಯನ್-28, ಕ್ರೇನ್ ಆಪರೇಟರ್-19, ಎಲೆಕ್ಟ್ರಾನಿಕ್ ಮೆಕ್ಯಾನಿಕ್-23, ಇನ್ಸ್ಟ್ರುಮೆಂಟ್ ಮೆಕ್ಯಾನಿಕ್-24, ಶಿಪ್ರೈಟ್ ವುಡ್-13, ಮಷಿನಿಸ್ಟ್-2, ಏರ್ ಕಂಡಿಷನರ್ ಟೆಕ್ನಿಷಿಯನ್-2, ಡ್ರಾಫ್ಟ್ಮನ್ (ಸಿವಿಲ್)-2 ಹುದ್ದೆ ಸೇರಿ ಒಟ್ಟು 330 ಹುದ್ದೆಗಳಿಗೆ ನೇಮಕ ಮಾಡಿಕೊಳ್ಳಲಾಗುತ್ತಿದೆ.
ಶೈಕ್ಷಣಿಕ ಅರ್ಹತೆ
ಹುದ್ದೆಗಳಿಗೆ ಅನುಸಾರ ಮಾನ್ಯತೆ ಪಡೆದ ವಿಶ್ವವಿದ್ಯಾಲಯದಲ್ಲಿ ಎಸ್ಎಸ್ಎಲ್ಸಿ, ಆಯಾ ಟ್ರೇಡ್ಗಳಲ್ಲಿ ಐಟಿಐ-ನ್ಯಾಷನಲ್ ಟ್ರೇಡ್ ಪ್ರಮಾಣ ಪತ್ರ ಕೇಳಲಾಗಿದ್ದು, ಸಂಬಂಧಪಟ್ಟ ವಿಭಾಗಗಳಲ್ಲಿ ಕನಿಷ್ಠ ಮೂರು ವರ್ಷ ವೃತ್ತಿ ಅನುಭವ ಪಡೆದಿರಬೇಕು.
ವೇತನ
ಮೂರು ವರ್ಷದ ಅವಧಿಗೆ ನೇಮಕ ಮಾಡಿಕೊಳ್ಳುತ್ತಿದ್ದು, ಪ್ರಥಮ ವರ್ಷ 23,300 ರೂ. ದ್ವೀತಿಯ ವರ್ಷ 24,000 ಹಾಗೂ ಮೂರನೇ ವರ್ಷ 24,800 ರೂ. ಇರಲಿದೆ. ಹೆಚ್ಚಿನ ಅವಧಿ ಕೆಲಸ ಮಾಡಿದರೆ ವರ್ಷಗಳ ಕ್ರಮವಾಗಿ 4900, 5000 ಹಾಗೂ 5,100 ರೂ. ಪಾವತಿ ಮಾಡಲಾಗುವುದು.
ವಯೋಮಿತಿ
ಜುಲೈ 15 2022ಕ್ಕೆ ಅನ್ವಯವಾಗುವಂತೆ ಅಭ್ಯರ್ಥಿಯ ವಯೋಮಿತಿ 30 ವರ್ಷ ಮೀರಿರಬಾರದು. ಒಬಿಸಿ ಅಭ್ಯರ್ಥಿಗೆ 3 ವರ್ಷ, ಎಸ್ಸಿ, ಎಸ್ಟಿ ಅಭ್ಯರ್ಥಿಗೆ 5 ವರ್ಷ ವಯೋಸಡಿಲಿಕೆ ಇರಲಿದೆ. ಮಾಜಿ ಸೈನಿಕ ಹಾಗೂ ಅಂಗವಿಕಲ ಅಭ್ಯರ್ಥಿಗೆ 45 ವರ್ಷ ನಿಗದಿಪಡಿಸಲಾಗಿದೆ.
ಆಯ್ಕೆ ಪ್ರಕ್ರಿಯೆ
ಆನ್ಲೈನ್ ಅರ್ಜಿ ಆಧರಿಸಿ ಶಾರ್ಟ್ಲಿಸ್ಟ್ ಮಾಡಲಾದ ಅಭ್ಯರ್ಥಿಗಳಿಗೆ ಆನ್ಲೈನ್ ಟೆಸ್ಟ್ ಹಾಗೂ ಪ್ರಾಕ್ಟಿಕಲ್ ಟೆಸ್ಟ್ ನಡೆಸಿ ಅರ್ಹರನ್ನು ಆಯ್ಕೆ ಮಾಡಲಾಗುವುದು. ಕೇರಳ ಮತ್ತು ಕೊಚ್ಚಿಯಲ್ಲಿ ಆನ್ಲೈನ್ ಟೆಸ್ಟ್ ನಡೆಯಲಿದೆ. ಒಂದೇ ಹುದ್ದೆಗೆ ಹೆಚ್ಚು ಅರ್ಜಿಗಳು ಸಲ್ಲಿಕೆಯಾದರೆ ಶೈಕ್ಷಣಿಕ ಅರ್ಹತೆ ಮತ್ತು ವೃತ್ತಿ ಅನುಭವದ ಆಧಾರದ ಮೇಲೆ ಅರ್ಹರನ್ನು ಆಯ್ಕೆ ಮಾಡಲಾಗುವುದು.
ಅರ್ಜಿ ಸಲ್ಲಿಸುವ ವಿಧಾನ
ಆಸಕ್ತ ಅಭ್ಯರ್ಥಿಗಳು ಅಗತ್ಯ ದಾಖಲೆಗಳೊಂದಿಗೆ ನಿಗದಿತ ದಿನಾಂಕದೊಳಗೆ 300 ರೂ. ಶುಲ್ಕ ಪಾವತಿಸಿ ಅರ್ಜಿ ಸಲ್ಲಿಸಬೇಕು. ಅರ್ಜಿಯಲ್ಲಿ ಯಾವ ಹುದ್ದೆಗೆ ಎಂದು ಸ್ಪಷ್ಟವಾಗಿ ನಮೂದಿಸಬೇಕು. ಮೀಸಲಾತಿ ಅಭ್ಯರ್ಥಿಗಳಿಗೆ ಯಾವುದೇ ಅರ್ಜಿ ಶುಲ್ಕವಿಲ್ಲ.
ಅರ್ಜಿ ಸಲ್ಲಿಸಲು ಕೊನೇ ದಿನ: 15.7.2022
ಅಧಿಸೂಚನೆಗೆ:https://bit.ly/3NF729o
ಮಾಹಿತಿಗೆ: http://www.cochinshipyard.in