ಹುಟ್ಟಿದ ಹಸುಗೂಸಿನ ಗಾತ್ರ ನೋಡಿ ದಿಗಿಲುಗೊಂಡ ವೈದ್ಯರು- ತಲೆತಿರುಗಿಬಿದ್ದ ಅಮ್ಮ!

child
Published on

ಬಕಿಂಗ್‌ಹ್ಯಾಮ್‌: ಸಾಮಾನ್ಯವಾಗಿ ಆರೋಗ್ಯವಂತ ಮಗು ಹುಟ್ಟಿದರೆ 18 ಇಂಚು 7-8 ಪೌಂಡ್ಸ್‌ ತೂಕವಿರುತ್ತದೆ. ಆದರೆ 2 ಅಡಿ ಉದ್ದ ಮತ್ತು 12 ಪೌಂಡ್ ತೂಕವಿರುವ ಮಗುವೊಂದು ಹುಟ್ಟಿದ್ದು, ವೈದ್ಯರೇ ಅಚ್ಚರಿಗೊಂಡಿದ್ದಾರೆ.

ಬಕಿಂಗ್‌ಹ್ಯಾಮ್‌ನ 27 ವರ್ಷದ ಮಹಿಳೆಗೆ ಈ ಮಗು ಹುಟ್ಟಿದೆ. ಅಮಿ ಮತ್ತು ಜಾಕ್ ದಂಪತಿಗೆ ಈ ಮಗು ಹುಟ್ಟಿದೆ. ಮಗುವನ್ನು ನೋಡಿ ಅತ್ತ ವೈದ್ಯರೇ ಕಂಗಾಲಾಗಿದ್ದರೆ, ಕೂಸನ್ನು ನೋಡುತ್ತಿದ್ದಂತೆಯೇ ಆಮಿ ಮೂರ್ಛೆ ಹೋದರಂತೆ.

ಅಷ್ಟೇ ಅಲ್ಲದೇ, ಹಸುಗೂಸುಗಳ ತೂಕ ನೋಡಲೆಂದು ಇದ್ದ ಅಳತೆಮಾಪನದಲ್ಲಿ ಮಗು ಫಿಟ್ ಆಗದ ಕಾರಣ ವೈದ್ಯರು ಪೇಚಿಗೆ ಸಿಲುಕಿದರು. ಇದಾಗಲೇ ಎರಡು ಮಕ್ಕಳ ತಾಯಿಯಾದ ಅಮಿಗೆ ಇದು ಮೂರನೆಯ ಮಗು. ಮೊದಲು ಎರಡು ಮಕ್ಕಳು ಸರಿಯಾಗಿದ್ದು, ಈ ಮಗು ಇಷ್ಟು ತೂಕ ಏಕಾಯಿತು ಎಂದು ಗೊತ್ತಾಗುತ್ತಿಲ್ಲ ಎಂದಿದ್ದಾರೆ ಆಮಿ.

ತಮ್ಮ ಹೊಸ ಮಗು ಜಾಗ್ರಿಸ್‌ನನ್ನು ಎತ್ತಲು ಇಬ್ಬರು ಬರಬೇಕಾಗಿ ಬಂತು ಎಂದು ತಿಳಿಸಿದ್ದಾರೆ. ಈ ಮಗುವಿಗೆ ಜಾಗ್ರಿಸ್‌ ಎಂದು ಹೆಸರು ಇಟ್ಟಿದ್ದಾರೆ. ಹೊಸ ಮಗುವಿಗಾಗಿ ಒಂದಿಷ್ಟು ಬಟ್ಟೆ ತಂದಿಟ್ಟಿದ್ದರು. ಆದರೆ ಅದು ಫಿಟ್ ಆಗುತ್ತಿಲ್ಲ. ಮೂರು ತಿಂಗಳ ಮಕ್ಕಳ ಅಳತೆಗೆ ಖರೀದಿಸಿದ ಬಟ್ಟೆಗಳೂ ಸಹ ಜಾಗ್ರಿಸ್‌ಗೆ ಸರಿಯಾಗುತ್ತಿಲ್ಲ ಎಂದು ಆಮಿ ಹೇಳಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net