2ನೇ ಪತಿ ಜತೆ ಮಜವಾಗಿರಲು 12 ವರ್ಷದ ಮಗಳನ್ನು ಎರಡೆರಡು ಬಾರಿ ಮದ್ವೆ ಮಾಡಿಸಿದ ತಾಯಿ!

child
Published on

ಧಾರ್ಚುಲಾ (ಉತ್ತರಾಖಂಡ): ಮೊದಲ ಪತಿಯನ್ನು ತೊರೆದ ಮೇಲೆ ಇನ್ನೊಂದು ಮದ್ವೆಯಾದ ಮಹಿಳೆಯೊಬ್ಬಳು, ಆತನ ಜತೆ ಮಜವಾಗಿರುವ ಸಲುವಾಗಿ ತಾನೇ ಹೆತ್ತ ಮಗಳನ್ನು ಎರಡೆರಡು ಬಾರಿ ಮದುವೆ ಮಾಡಿರುವ ಅಮಾನವೀಯ ಘಟನೆ ಉತ್ತರಾಖಂಡದ ಧಾರ್ಚುಲಾದಲ್ಲಿ ನಡೆದಿದೆ.

ಇದಕ್ಕೆ ಸಂಬಂಧಿಸಿದಂತೆ ತಾಯಿ ಮತ್ತು ಆಕೆಯ ಗಂಡ ಇಬ್ಬರನ್ನೂ ಪೊಲೀಸರು ಬಂಧಿಸಿದ್ದಾರೆ. ಬಾಲ್ಯ ವಿವಾಹ ವಿರೋಧ ಕಾಯ್ದೆ ಅಡಿ ಇಬ್ಬರನ್ನೂ ಬಂಧಿಸಲಾಗಿದೆ.

12 ವರ್ಷದ ಬಾಲಕಿಯನ್ನು ಕೆಲ ತಿಂಗಳ ಹಿಂದೆ ಇಬ್ಬರೂ ಸೇರಿ ಮದುವೆ ಮಾಡಿಸಿದ್ದರು. ಆದರೆ ಬಾಲಕಿಗೆ ಗಂಡನ ಮನೆಯಲ್ಲಿ ತೀವ್ರ ಹಿಂಸೆ ಕೊಡಲಾಗುತ್ತಿತ್ತು. ಈ ದೌರ್ಜನ್ಯ ಸಹಿಸಿಕೊಳ್ಳಲು ಸಾಧ್ಯವಾಗದ ಬಾಲೆ ಓಡಿ ತವರು ಮನೆಗೆ ಬಂದಿದ್ದಳು. ಈಕೆ ಮನೆಯಲ್ಲಿ ಇದ್ದುದು ತಾಯಿ ಮತ್ತು ಆಕೆಯ ಎರಡನೇ ಗಂಡನಿಗೆ ಹಿಂಸೆ ಆದಂತಾಗಿತ್ತು. ಅದಕ್ಕಾಗಿಯೇ ಕೆಲವೇ ತಿಂಗಳಿನಲ್ಲಿ ಮತ್ತೆ 36 ವರ್ಷದವನ ಜತೆ ಮದುವೆ ಮಾಡಿಸಿದ್ದಾಳೆ.

ಈ ಪ್ರಕರಣ ಬೆಳಕಿಗೆ ಬಂದದ್ದು ಬಾಲಕಿ ಗರ್ಭಿಣಿಯಾದಾಗ. ಚಿಕಿತ್ಸೆಗೆಂದು ಕರೆದುಕೊಂಡು ಹೋದಾಗ ಈ ಪ್ರಕರಣ ಬೆಳಕಿಗೆ ಬಂದಿದೆ. ಈ ಬಗ್ಗೆ ಶಿಶು ಅಭಿವೃದ್ಧಿ ಇಲಾಖೆಗೆ ವಿಷಯ ತಿಳಿದಿದ್ದು, ಅವರು ಈ ಮಾಹಿತಿಯನ್ನು ಪೊಲೀಸರ ಗಮನಕ್ಕೆ ತಂದಿದ್ದರು.

ಈ ಘಟನೆಗೆ ಸಂಬಂಧಿಸಿದಂತೆ ಬಾಲಕಿಯ ಎರಡನೇ ಪತಿಯನ್ನು ಬಂಧಿಸಿದ್ದರು. ಈಗ ಬಾಲಕಿಯ ತಾಯಿಯನ್ನು ಸಹ ಬಂಧಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net