ರಷ್ಯಾ ಕರೊನಾ ಲಸಿಕೆ ಪಡೆದ ಪುಟಿನ್​ ಮಗಳು; ಆಕೆಯ ಆರೋಗ್ಯದಲ್ಲಾದ ಬದಲಾವಣೆ ಏನು?

putins daughter health2
Published on

ಮಾಸ್ಕೋ: ಜಗತ್ತಿನ ಪ್ರಪ್ರಥಮ ಕರೊನ ನಿಗ್ರಹ ಲಸಿಕೆಯನ್ನು ಸಂಶೋಧಿಸಿರುವುದಾಗಿ ಘೋಷಿಸಿರುವ ರಷ್ಯಾ, ಅದನ್ನು ಸ್ಪುಟ್ನಿಕ್​-ವಿ ಎಂದು ನಾಮಕರಣ ಮಾಡಿದೆ.

ಕರೊನಾ ಲಸಿಕೆಯನ್ನು ನೋಂದಣಿ ಮಾಡಿದ ವಿಷಯವನ್ನು ಪ್ರಧಾನಿ ವ್ಲಾದಿಮಿರ್​ ಪುಟಿನ್​ ಪ್ರಕಟಿಸಿದರು. ಈ ವೇಳೆ ಇನ್ನೊಂದು ಮುಖ್ಯ ವಿಷಯವನ್ನು ಅವರು ತಿಳಿಸಿದ್ದರು. ತನ್ನ ಇಬ್ಬರು ಹೆಣ್ಣು ಮಕ್ಕಳಲ್ಲಿ ಒಬ್ಬರಿಗೆ ಈ ಲಸಿಕೆಯನ್ನು ನೀಡಲಾಗಿದೆ ಎಂದು ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ್ದರು.

ಈ ಲಸಿಕೆಯನ್ನು ಎರಡು ಹಂತದಲ್ಲಿ ನೀಡಲಾಗಿತ್ತು. ಇದಾದ ಬಳಿಕ ಪುಟಿನ್​ ಮಗಳ ಆರೋಗ್ಯ ಹೇಗಿದೆ ಎಂಬ ಕುತೂಹಲ ಇಡೀ ಜಗತ್ತಿನದಾಗಿತ್ತು. ಅದರಂತೆ ಕೆಲ ಮಾಹಿತಿಗಳು ಲಭ್ಯವಾಗಿವೆ.

ಮೊದಲ ಬಾರಿಗೆ ಲಸಿಕೆ ನೀಡಿದಾಗ ಆಕೆಯ ದೇಹದ ಉಷ್ಣಾಂಶ 38 ಡಿಗ್ರಿ ಸೆಲ್ಸಿಯಸ್​ (100.4 ಫ್ಯಾರನ್​ಹೀಟ್​) ಆಗಿತ್ತು. ಮರುದಿನ ಇದು 37 ಡಿಗ್ರಿಗೆ ಇಳಿದಿತ್ತು. ಅಂದರೆ 98.6 ಫ್ಯಾರನ್​ಹೀಟ್​ ಆಗಿತ್ತು. ಎರಡನೇ ಹಂತದ ಲಸಿಕೆ ನೀಡಿದಾಗಲೂ ಉಷ್ಣಾಂಶ ಕೊಂಚ ಏರಿಕೆಯಾಗಿತ್ತು. ಬಳಿಕ ಸಾಮಾನ್ಯ ಸ್ಥಿತಿಗೆ ಬಂದಿದೆ.

ಲಸಿಕೆಯಿಂದ ಮಗಳಿಗೆ ಕೊಂಚ ಜ್ವರ ಬಂದಿದ್ದು ಬಿಟ್ಟರೆ, ಆರೋಗ್ಯ ಉತ್ತಮವಾಗಿದೆ ಜತೆಗೆ ದೇಹದಲ್ಲಿರುವ ಪ್ರತಿರೋಧ ಕಣಗಳ ಸಂಖ್ಯೆ ಹೆಚ್ಚಾಗಿದೆ ಎಂದು ಸ್ವತ: ಪುಟಿನ್​ ಹೇಳಿದ್ದಾರೆ.

ಎರಡು ಹಂತದಲ್ಲಿ ಲಸಿಕೆ ನೀಡುವುದರಿಂದ ಪ್ರತಿರೋಧಕ ಶಕ್ತಿ ಹೆಚ್ಚು ಕಾಲ ಇರಲಿದೆ. ಅಂದಾಜು ಎರಡು ವರ್ಷಗಳ ಕಾಲ ಇದರ ಪ್ರಭಾವ ದೇಹದಲ್ಲಿ ಇರಲಿದೆ ಎಂದು ರಷ್ಯಾ ಆರೋಗ್ಯ ಇಲಾಖೆ ತಿಳಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net