

ಮಾಸ್ಕೋ: ಮೂವರು ಸಿಬ್ಬಂದಿ ಮತ್ತು 19 ಪ್ರಯಾಣಿಕರಿದ್ದ ರಷ್ಯಾದ ಎಂಐ -8ಟಿ ಹೆಲಿಕಾಪ್ಟರ್ ಪೂರ್ವದ ಕಮ್ಚತ್ಕಾದ ದ್ವೀಪದಲ್ಲಿ ಶನಿವಾರ ನಾಪತ್ತೆಯಾಗಿದೆ. ಇದು ವಚ್ಕಜೆಟ್ಸ್ ಜ್ವಾಲಾಮುಖಿಯ ಬಳಿಯ ನೆಲೆಯಿಂದ ಟೇಕ್ ಆಫ್ ಆಗಿದೆ ಎಂದು ವರದಿಯಾಗಿದೆ.
ಹೆಲಿಕಾಪ್ಟರ್ "ವಿತ್ಯಾಜ್-ಏರೋ" ಕಂಪನಿಯದ್ದಾಗಿದ್ದು, ಕಡಿದಾದ ಶಿಖರಗಳಿಂದ ಕೂಡಿದ ಈ ಮಾರ್ಗದಲ್ಲಿ 25 ಕಿಲೋಮೀಟರ್ ದೂರ ಕ್ರಮಿಸಿದ ನಂತರ ಸಂಪರ್ಕ ಕಡಿತಗೊಂಡಿದೆ. ಪ್ರಸ್ತುತ, ಅದೇ ಏರ್‌ಲೈನ್‌ನ ಮಂಡಳಿಯು ವಿಮಾನವನ್ನು ಹುಡುಕಲು ಹೊರಟಿದೆ ಎಂದು ಎಮರ್ಜೆನ್ಸಿ ಸರ್ವೀಸಸ್ ತಿಳಿಸಿದೆ.
ಬೆಳಗ್ಗೆ 6:37 ಕ್ಕೆ (ಸ್ಥಳೀಯ ಸಮಯ) ವಾಚ್ಕಾಜೆಟ್ಸ್ ಜ್ವಾಲಾಮುಖಿಯ ಬಳಿಯ ನೆಲೆಯಿಂದ ಹೊರಟಿದೆ. ಪ್ರಸ್ತುತ ಐದು ಜನರನ್ನು ಒಳಗೊಂಡ ತಂಡವು, ಉಪಕರಣಗಳ ಸಮೇತ ಪತ್ತೆಕಾರ್ಯಕ್ಕೆ ತೆರಳಿದೆ. ಸಮೀಪದಲ್ಲಿ ಎಲ್ಲಿಯಾದರೂ ಅಪಘಾತಕ್ಕೀಡಾಗಿದೆಯೇ ಎಂದು ಪರಿಶೀಲಿಸಲು ಮುಂದಾಗಿದೆ.
ರಷ್ಯಾದ ಎಂಐ-8 ಎರಡು ಇಂಜಿನ್ ಹೆಲಿಕಾಪ್ಟರ್ ಆಗಿದ್ದು, ಇದನ್ನು 1960 ರ ದಶಕದಲ್ಲಿ ವಿನ್ಯಾಸಗೊಳಿಸಲಾಗಿದೆ. ಇದನ್ನು ರಷ್ಯಾದಲ್ಲಿ ವ್ಯಾಪಕವಾಗಿ ಬಳಸಲಾಗುತ್ತದೆ. ಆದಾಗ್ಯೂ ಈ ಹೆಲಿಕಾಪ್ಟರ್ ಗಳು ಮಾರಣಾಂತಿಕ ಅಪಘಾತಕ್ಕೆ ಒಳಗಾಗುತ್ತಿರುವುದು ಹೆಚ್ಚಾಗುತ್ತಿದೆ. ಈ ತಿಂಗಳ ಆರಂಭದಲ್ಲಿ, 16 ಜನರನ್ನು ಹೊತ್ತೊಯ್ಯುತ್ತಿದ್ದ ಎಂಐ-8 ಹೆಲಿಕಾಪ್ಟರ್ ರಷ್ಯಾದ ಪೂರ್ವ ಪ್ರದೇಶದಲ್ಲಿ ಪತನಗೊಂಡಿತ್ತು.