ಪೋಲೆಂಡ್​, ಯುಕ್ರೇನ್​ ಮೇಲೆ ಡ್ರೋನ್​ಗಳ ಮಳೆ ಸುರಿಸಿದ ರಷ್ಯಾ: ಪುಟಿನ್​ ಯುದ್ಧ ಹೆಚ್ಚಿಸುತ್ತಿದ್ದಾರೆ ಎಂದ ಯುಕ್ರೇನ್| Vladimir Putin​

Vladimir Putin 10
Published on

Vladimir Putin: ರಷ್ಯಾವು ಪೋಲೆಂಡ್​ ಮೇಲೆ ದಾಳಿ ಮಾಡಿದ್ದು, ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ನಮ್ಮ ವಿರುದ್ಧ ಯುದ್ಧವನ್ನು ಹೆಚ್ಚಿಸುತ್ತಿದ್ದಾರೆ ಮತ್ತು ಪಶ್ಚಿಮವನ್ನು ಪರೀಕ್ಷಿಸುತ್ತಿದ್ದಾರೆ ಎಂದು ಯುಕ್ರೇನ್​ ಬುಧವಾರ (ಸೆಪ್ಟೆಂಬರ್, 10) ತಿಳಿಸಿದೆ.

ಈ ಬಗ್ಗೆ ಎಕ್ಸ್​ನಲ್ಲಿ ಪೋಸ್ಟ್​ ಮಾಡಿರುವ ಯುಕ್ರೇನ್ ವಿದೇಶಾಂಗ ಸಚಿವ ಆಂಡ್ರಿ ಸಿಬಿಗಾ, ನಮ್ಮ ಮೇಲಿನ ಬೃಹತ್ ದಾಳಿಯ ಸಮಯದಲ್ಲಿ ಪೋಲೆಂಡ್‌ಗೆ ಹಾರಿದ ರಷ್ಯಾದ ಡ್ರೋನ್‌ಗಳು ಪುಟಿನ್​ರ ಹಿಂದಿನ ಅಪರಾಧಗಳಿಗೆ ಸರಿಯಾಗಿ ಶಿಕ್ಷೆಯಾಗದ ಕಾರಣವಾಗಿದೆ. ಇಂದರಿಂದ ರಷ್ಯಾದ ನಿರ್ಭಯ ಭಾವನೆ ಬೆಳೆಯುತ್ತಲೇ ಇದೆ ಎಂದು ತೋರಿಸುತ್ತದೆ ಎಂದು ಪುಟಿನ್​ ವಿರುದ್ಧ ಕಿಡಿಕಾರಿದ್ದಾರೆ.

ಮುಂದುವರೆದು ಮಾತನಾಡಿದ ಸೈಬಿಗಾ, ಪುಟಿನ್ ತನ್ನ ಯುದ್ಧವನ್ನು ವಿಸ್ತರಿಸುತ್ತಿದ್ದಾನೆ. ಅಲ್ಲದೆ, ಪಶ್ಚಿಮವನ್ನು ಪರೀಕ್ಷಿಸುತ್ತಲೇ ಇದ್ದಾನೆ ಎಂದು ಹೇಳಿದರು. ಪುಟಿನ್​ಆಕ್ರಮಣಕಾರಿಯಾಗುತ್ತಾನೆ. ಅಲ್ಲದೆ, ಈಗ ಯಾವುದೇ ರೀತಿಯ ಪ್ರತಿಕ್ರಿಯೆ ನೀಡಿದರೇ ರಷ್ಯಾವನ್ನು ಇನ್ನಷ್ಟು ಕೆರಳಿಸುತ್ತದೆ. ನಂತರ, ರಷ್ಯಾದ ಕ್ಷಿಪಣಿಗಳು ಮತ್ತು ಡ್ರೋನ್‌ಗಳು ಯುರೋಪಿನೊಳಗೆ ಇನ್ನಷ್ಟು ಹಾರುತ್ತವೆ ಎಂದು ತಿಳಿಸಿದ್ದಾರೆ.

ಪೋಲಿಷ್ ಗಡಿಯಿಂದ ಸುಮಾರು 80 ಕಿಲೋಮೀಟರ್ ದೂರದಲ್ಲಿರುವ ಪಶ್ಚಿಮ ನಗರವಾದ ಎಲ್ವಿವ್ ಸೇರಿದಂತೆ ಯುಕ್ರೇನ್‌ನಾದ್ಯಂತ ರಷ್ಯಾ ದಾಳಿಯ ಸುರಿಮಳೆಗೈದ ನಂತರ ಪೋಲಿಷ್ ವಾಯುಪ್ರದೇಶದ ಮೇಲೆ ದಾಳಿ ನಡೆಸಿತು.

ರಷ್ಯಾದ ಮೂರುವರೆ ವರ್ಷಗಳ ಯುದ್ಧದ ಸಮಯದಲ್ಲಿ ರಷ್ಯಾದ ಡ್ರೋನ್‌ಗಳು ಮತ್ತು ಕ್ಷಿಪಣಿಗಳು ಪೋಲೆಂಡ್ ಸೇರಿದಂತೆ NATO ಸದಸ್ಯರ ವಾಯುಪ್ರದೇಶವನ್ನು ಹಲವಾರು ಬಾರಿ ಪ್ರವೇಶಿಸಿದೆ. ಆದರೆ, NATO ದೇಶವೊಂದು ಇವುಗಳನ್ನು ಹೊಡೆದುರುಳಿಸಲು ಎಂದಿಗೂ ಪ್ರಯತ್ನಿಸಿಲ್ಲ ಎಂಬುದು ಆಚ್ಚರಿ ಮೂಡಿಸಿದೆ. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net