

ರಷ್ಯಾ : ರಷ್ಯಾದ ಅತ್ಯಂತ ಸುಂದರ ಬೈಕರ್ ಎಂದೇ ಖ್ಯಾತಿ ಪಡೆದಿದ್ದ ಟಟ್ಯಾನಾ ಓಝೋಲಿನಾ ರಸ್ತೆ ಅಪಘಾತದಲ್ಲಿ ವಿಧಿವಶರಾಗಿದ್ದಾರೆ.
ಟಟ್ಯಾನಾ ಓಝೋಲಿನಾ (38) ಮೃತ ಮಹಿಳೆ. ಟರ್ಕಿಯಲ್ಲಿ ಅಪಘಾತದಲ್ಲಿ ಪ್ರಾಣ ಕಳೆದುಕೊಂಡಿದ್ದಾರೆ.ಟರ್ಕಿಯ ಮಿಲಾಸ್ ಪ್ರದೇಶದಲ್ಲಿ ದ್ವಿಚಕ್ರ ವಾಹನದಲ್ಲಿ ತೆರಳುತ್ತಿದ್ದಾಗ ಟಟಯಾನ ನಿಯಂತ್ರಣ ತಪ್ಪಿದೆ. ಎದುರಿಗೆ ಬರುತ್ತಿದ್ದ ಲಾರಿಗೆ ಬಲವಾಗಿ ಡಿಕ್ಕಿ ಹೊಡೆದಿದೆ. ಅಪಘಾತದಲ್ಲಿ ಆಕೆ ಸ್ಥಳದಲ್ಲೇ ಸಾವನ್ನಪ್ಪಿದ್ದಾಳೆ.
ಆಕೆಯ ಹಿಂದೆ ಕುಳಿತಿದ್ದ ಟರ್ಕಿಶ್ ಬೈಕ್ ಸವಾರ ಗಂಭೀರವಾಗಿ ಗಾಯಗೊಂಡಿದ್ದಾನೆ. ಓಝೋಲಿನಾ ಬೈಕಿನಲ್ಲಿ ಹೋಗುತ್ತಿದ್ದಾಗ ಮತ್ತೊಂದು ಸವಾರಿ ಗುಂಪು ಇದ್ದಕ್ಕಿದ್ದಂತೆ ಅವಳನ್ನು ನಿಲ್ಲಿಸಿತು. ಸಡನ್ ಬ್ರೇಕ್ ಹಾಕಿದಾಗ ಎದುರಿಗೆ ಬರುತ್ತಿದ್ದ ಲಾರಿಗೆ ಡಿಕ್ಕಿ ಹೊಡೆದಿದ್ದಾಳೆ. ಬೈಕ್ ಅಪಘಾತದ ಕುರಿತು ಸ್ಥಳೀಯ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
ಟಟಯಾನಾ ಓಜೋಲಿನಾ ಸಾಮಾಜಿಕ ಮಾಧ್ಯಮದಲ್ಲಿ ಜನಪ್ರಿಯರಾದರು. ಆಕೆಯ ಹಿಂಬಾಲಕರ ಸಂಖ್ಯೆ ದೊಡ್ಡದಾಗಿದೆ. ಆಕೆಯ ಖಾತೆಯು ಇನ್‌ಸ್ಟಾಗ್ರಾಮ್‌ನಲ್ಲಿ 10 ಲಕ್ಷ ಮತ್ತು ಯೂಟ್ಯೂಬ್‌ನಲ್ಲಿ 20 ಲಕ್ಷ ಅನುಯಾಯಿಗಳನ್ನು ಹೊಂದಿದೆ. ಓಝೋಲಿನಾ ಪ್ರಪಂಚದಾದ್ಯಂತ ಸಾಹಸಮಯ ಬೈಕ್ ರೈಡಿಂಗ್ ಮಾಡುತ್ತಿದ್ದರು. ಆಕೆಯ ಸೌಂದರ್ಯದಿಂದಾಗಿ ಅಭಿಮಾನಿಗಳು ಅವಳನ್ನು ರಷ್ಯಾದ ಅತ್ಯಂತ ಸುಂದರ ಬೈಕರ್ ಎಂದು ಕರೆಯುತ್ತಾರೆ. ಆಕೆಗೆ 13 ವರ್ಷದ ಮಗನಿದ್ದಾನೆ.
ಟಟಯಾನಾ ಓಝೋಲಿನಾ ತನ್ನ ಸೌಂದರ್ಯ ಮತ್ತು ಬೈಕ್ ಸವಾರಿಗಾಗಿ ಪ್ರಪಂಚದಾದ್ಯಂತ ಅಭಿಮಾನಿಗಳನ್ನು ಹೊಂದಿದ್ದಾರೆ. ಮೋಟಾರು ಸೈಕಲ್‌ಗಳ ಮೇಲಿನ ಅವಳ ಉತ್ಸಾಹವು ಅವಳನ್ನು ನಿರಂತರವಾಗಿ ಸುದ್ದಿಯಲ್ಲಿರುವಂತೆ ಮಾಡಿತ್ತು.