ಮಳೆಗಾಲದಲ್ಲಿ ನೀರು ಕುಡಿಯುವ ಮುನ್ನ ಇರಲಿ ಎಚ್ಚರ! ಅಪಾಯದ ಬಗ್ಗೆ ನಿಮಗೆ ತಿಳಿದಿರಲಿ…

drinking water
Published on

ಬೆಂಗಳೂರು: ಕಳೆದ ಕೆಲವು ದಿನಗಳಿಂದ ಎಡೆಬಿಡದೆ ಮಳೆ ಸುರಿಯುತ್ತಿದೆ. ಎಡೆಬಿಡದೆ ಸುರಿಯುತ್ತಿರುವ ಮಳೆಯಲ್ಲಿ ಎಲ್ಲೆಂದರಲ್ಲಿ ನೀರು ಕುಡಿದರೆ ಅಪಾಯ ಕಟ್ಟಿಟ್ಟ ಬುತ್ತಿ. ಹಾಗೆ ಕುಡಿದರೆ ಆರೋಗ್ಯದ ಮೇಲೆ ಬಿರುವ ಪರಿಣಾಮವೇನು ಗೊತ್ತಾ? ನಾವು ಇಂದು ತಿಳಿಸಿಕೊಡಲಿದ್ದೇವೆ....

ಮಳೆಗಾಲದಲ್ಲಿ ನೀರು ಕಲುಷಿತವಾಗುವ ಸಾಧ್ಯತೆ ಹೆಚ್ಚು. ಕಲುಷಿತವಾಗಿರುವ ನೀರು. ಮಳೆ ನೀರು ವಿವಿಧ ನಲ್ಲಿಗಳಲ್ಲಿ ಸೇರುತ್ತದೆ. ಇದೇ ರೀತಿ ಹಲವು ಪ್ರದೇಶಗಳಲ್ಲಿ ನೀರು ಪೂರೈಕೆಯಾದರೆ ನೀರಿನ ತೊಟ್ಟಿಗಳು ಕಲುಷಿತವಾಗುವ ಸಾಧ್ಯತೆ ಹೆಚ್ಚಿದೆ. ಅಲ್ಲದೆ ಕೆಲವೆಡೆ ಕುಡಿಯುವ ನೀರಿನ ಉಪಕರಣಗಳಿಗೆ ಮುಚ್ಚಳ ಹಾಕದ ಕಾರಣ ಮಳೆ ನೀರು ಬೀಳುತ್ತದೆ. ಬಾಯಾರಿಕೆಯಾದಲ್ಲೆಲ್ಲ ಈ ನೀರು ಕುಡಿದರೆ ಅಪಾಯ ಕಟ್ಟಿಟ್ಟ ಬುತ್ತಿ ಎನ್ನುತ್ತಾರೆ ವೈದ್ಯರು. ಈ ರೀತಿಯ ನೀರನ್ನು ಅದರ ಶುಚಿತ್ವದ ಬಗ್ಗೆ ಕಾಳಜಿ ವಹಿಸದೆ ಕುಡಿಯುವುದು ರೋಗಗಳಿಗೆ ಕಾರಣವಾಗಬಹುದು ಎಂದು ತಜ್ಞರು ಎಚ್ಚರಿಸಿದ್ದಾರೆ.

ಮಳೆ ಮಿಶ್ರಿತ ನೀರು ಕುಡಿಯುವುದರಿಂದ ಅಮೀಬಿಯಾಸಿಸ್, ಅತಿಸಾರ, ಟೈಫಾಯಿಡ್ ಮತ್ತಿತರ ಕಾಯಿಲೆಗಳು ಬರುತ್ತವೆ.

ಅತಿಸಾರದೊಂದಿಗೆ ನೀರಿನಂಶದ ಭೇದಿ ಮತ್ತು ವಾಂತಿ ಹೆಚ್ಚಾಗಿ ಕಂಡುಬರುತ್ತದೆ. ಅಲ್ಲದೆ ಕಲುಷಿತ ನೀರು ಕುಡಿಯುವುದರಿಂದ ನಮಗೆ ತಿಳಿಯದಂತೆ ವಿವಿಧ ರೀತಿಯ ಬ್ಯಾಕ್ಟೀರಿಯಾ, ವೈರಸ್ ಗಳು ನಮ್ಮ ದೇಹ ಸೇರುತ್ತವೆ.

ವೈರಸ್‌ಗಳು ಕಲುಷಿತ ನೀರಿನಲ್ಲಿ ಸೇರುತ್ತವೆ ಮತ್ತು ನೀವು ಅಂತಹ ನೀರನ್ನು ಸೇವಿಸಿದರೆ, ಸೋಂಕುಗಳಿಗೆ ಕಾರಣವಾಗಬಹುದು. ಹೊಟ್ಟೆ ಮತ್ತು ಜೀರ್ಣಾಂಗ ವ್ಯವಸ್ಥೆಗೆ ಸಂಬಂಧಿಸಿದ ಸಮಸ್ಯೆಗಳಿರುತ್ತವೆ .

ಮಳೆಗಾಲದಲ್ಲಿ ಉಗುರುಬೆಚ್ಚನೆಯ ನೀರು ಕುಡಿಯುವುದು ಉತ್ತಮ . ಹಾಗೆ ಮಾಡುವುದರಿಂದ ಯಾವುದೇ ಬ್ಯಾಕ್ಟೀರಿಯಾಗಳು ನಾಶವಾಗುತ್ತವೆ.

ಮನೆಯಲ್ಲಿ ನೀರನ್ನು ಸೋಸುವುದು ಉತ್ತಮ. ಹೀಗೆ ಮಾಡುವುದರಿಂದ ವಿವಿಧ ರೀತಿಯ ಕಲ್ಮಶಗಳು ದೇಹಕ್ಕೆ ಸೇರದಂತೆ ತಡೆಯುತ್ತದೆ.

ಮಳೆಗಾಲದಲ್ಲಿ ಹೊರಗಡೆ ನೀರು ಕುಡಿಯದಿರುವುದು ಉತ್ತಮ ಮತ್ತು ನಾವೇ ನೀರನ್ನು ಒಯ್ಯುವುದು ಉತ್ತಮ ಎಂಬುದು ತಜ್ಞರ ಅಭಿಪ್ರಾಯ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net