

Russia Strike: ಅತ್ತ ಇರಾನ್-ಇಸ್ರೇಲ್ ನಡುವೆ ಭೀಕರ ವೈಮಾನಿಕ ದಾಳಿ ನಡೆಯುತ್ತಿದ್ದರೆ, ಇತ್ತ ದೀರ್ಘ ಕಾಲದಿಂದ ನಡೆಯುತ್ತಿರುವ ರಷ್ಯಾ ಮತ್ತು ಯೂಕ್ತೇನ್ ಯುದ್ಧ ಮತ್ತಷ್ಟು ತೀವ್ರಗೊಂಡಿದೆ.
ಯೂಕ್ರೇನಿಯನ್ ಅಧಿಕಾರಿಗಳ ಪ್ರಕಾರ, ಇಂದು (ಜೂ. 17) ರಾತ್ರಿ ರಾಜಧಾನಿ ಕೈವ್ ಮೇಲೆ ರಷ್ಯಾ ಪ್ರಮುಖ ಕ್ಷಿಪಣಿ ಮತ್ತು ಡ್ರೋನ್ ದಾಳಿ ನಡೆಸಿದ್ದು, 14 ಜನರ ಪ್ರಾಣವನ್ನು ಕಸಿದಿದೆ. ದಾಳಿಯ ಭೀಕರತೆಗೆ 40ಕ್ಕೂ ಅಧಿಕ ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ಅಂತಾರಾಷ್ಟ್ರೀಯ ವರದಿಗಳು ಉಲ್ಲೇಖಿಸಿವೆ. ಯೂಕ್ರೇನ್ ಮೇಲೆ ಸರಣಿ ದಾಳಿಯನ್ನು ಕೈಗೊಂಡಿರುವ ರಷ್ಯಾ, ಇದೀಗ ಮತ್ತೊಂದು ಭೀಕರ ದಾಳಿಯನ್ನು ನಡೆಸಿದೆ.
ಕೆನಡಾದಲ್ಲಿ ವಿಶ್ವ ನಾಯಕರು ಒಟ್ಟುಗೂಡುವ ಗ್ರೂಪ್ ಆಫ್ ಸೆವೆನ್ (ಜಿ7) ಶೃಂಗಸಭೆಯಲ್ಲಿ ಪಾಲ್ಗೊಳ್ಳಲು ಯುಕ್ರೇನಿಯನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಮುಂದಾದ ಸಮಯದಲ್ಲೇ ಈ ದಾಳಿ ಸಂಭವಿಸಿದೆ. ಕಟ್ಟಡಗಳ ಅವಶೇಷಗಳ ನಡುವೆ ಹಲವರು ಸಿಲುಕಿದ್ದು, ಸಾವಿನ ಸಂಖ್ಯೆ ಮತ್ತಷ್ಟು ಹೆಚ್ಚಾಗಬಹುದು ಎಂದು ಹೇಳಲಾಗಿದೆ. ಸಾವನ್ನಪ್ಪಿದವರಲ್ಲಿ, 62 ವರ್ಷದ ಯುಎಸ್ ಪ್ರಜೆಯೊಬ್ಬರು ರಷ್ಯಾ ಡ್ರೋನ್ ದಾಳಿಗೆ ಸಿಲುಕಿ ಮೃತಪಟ್ಟಿದ್ದಾರೆ ಎಂದು ಆಂತರಿಕ ಸಚಿವ ಇಹೋರ್ ಕ್ಲೈಮೆಂಕೊ ಮಾಹಿತಿ ನೀಡಿದ್ದಾರೆ,(ಏಜೆನ್ಸೀಸ್).