

ಬೆಂಗಳೂರು: ಬಿಗ್ ಬಾಸ್ ಕನ್ನಡದ ಮೊದಲ ಒಟಿಟಿ ಸೀಸನ್ 01ರ ಹಾಗೂ ಸೀಸನ್ 09ರ ವಿಜೇತರಾದ, ತುಳು ಹಾಗೂ ಕನ್ನಡ ಚಿತ್ರರಂಗದ ನಟ ರೂಪೇಶ್ ಶೆಟ್ಟಿ ಇತ್ತೀಚೆಗೆ ವಿಜಯವಾಣಿ ನಡೆಸಿದ ಸಂದರ್ಶನದಲ್ಲಿ ಮನಬಿಚ್ಚಿ ಮಾತನಾಡಿದ್ದು, ತಮ್ಮ ಮುಂಬರುವ ಕೆಲಸ ಸೇರಿದಂತೆ ಮದುವೆ ಜೀವನ ಕುರಿತಂತೆ ಹಲವಾರು ಸಂಗತಿಗಳನ್ನು ಹಂಚಿಕೊಂಡಿದ್ದಾರೆ.
"ನನಗೆ ತುಂಬ ಜನ ಕೇಳುವ ಪ್ರಶ್ನೆ ಅಂದರೆ ಅದು ಮದುವೆ ಯಾವಾಗ ಅಂತ! ನಾನು ಇಷ್ಟು ವರ್ಷ ಒದ್ದಾಡಿರೋದು ಒಂದು ಆಲ್ಬಂ ಸಿಂಗರ್ ಆಗಿ, ತುಳು ಗಾಯಕನಾಗಿ, ಆರ್ಜೆ, ಟಿವಿ ಆ್ಯಂಕರ್ ಆಗಿ. ಎಂಟು ಸಿನಿಮಾಗಳು ಸೋತ ನಂತರ ಒಂದು ಸಕ್ಸಸ್ ಸಿಕ್ಕು, ಬಿಗ್ ಬಾಸ್ ವಿಜೇತನಾಗಿ ಹೊರಹೊಮ್ಮಿದೆ" ಎಂದಿದ್ದಾರೆ.
"ಇವಾಗ ರೈಟ್ ಟೈಮ್, ದೇವರ ದಯೆಯಿಂದ ಒಂದಷ್ಟು ಸಿನಿಮಾಗಳು ಬರುತ್ತಿವೆ. ನನ್ನ ಜತೆಯಿರುವವರು ನನಗೆ ತುಂಬ ಬೈತಾರೆ, ನೀನು ಒಂದು ಸಲ ಮದುವೆಯಾಗು, ಆಗ ನಿನಗೆ ಕಷ್ಟ ಅರ್ಥವಾಗುತ್ತದೆ ಅಂತ. ಈ ಟೈಮಲ್ಲಿ......." ಮುಂದುವರಿದ ಸಂಭಾಷಣೆ ತಿಳಿಯಲು ಕೆಳಗಿನ ಸಂದರ್ಶನದ ವಿಡಿಯೋ ವೀಕ್ಷಿಸಿ.