ರೂಪಾಯಿ ಬೆಲೆ ಸ್ಥಿರ; ಚಿನ್ನದ ಬೆಲೆ 2,200 ರೂ. ಏರಿಕೆ

gold rates
Published on

ನವದೆಹಲಿ: ಶುಕ್ರವಾರ ಡಾಲರ್ ಎದುರು ರೂಪಾಯಿ ಒಂದು ಪೈಸೆ ಕುಸಿತು 88.70 ರೂ.ಗೆ ಸ್ಥಿರವಾಯಿತು. ಅಂತರ ಬ್ಯಾಂಕ್ ವಿದೇಶಿ ವಿನಿಮಯ ಮಾರುಕಟ್ಟೆಯಲ್ಲಿ ರೂಪಾಯಿ 88.60 ರೂ.ಗೆ ವಹಿವಾಟು ಆರಂಭಿಸಿ ಕನಿಷ್ಠ ಮಟ್ಟ 88.78 ರೂ.ಗೆ ಇಳಿಕೆಯಾಗಿ ಅಂತಿವಾಗಿ 88.70 ಕ್ಕೆ ವಹಿವಾಟು ಮುಕ್ತಾಯಗೊಂಡಿದೆ. ಈ ಮೂಲಕ ರೂಪಾಯಿ 1 ಪೈಸೆ ಏರಿಕೆ ಕಂಡಿದೆ. ಗುರುವಾರ ರೂ. ಮೌಲ್ಯ 47 ಪೈಸೆ ಕುಸಿತ ಕಂಡಿತ್ತು.

ಚೆನ್ನದ ಬೆಲೆ ದೆಹಲಿಯಲ್ಲಿ ಶುಕ್ರವಾರ 10 ಗ್ರಾಂ. ಗೆ 2200 ರೂ. ಏರಿಕೆ ಕಂಡಿದ್ದು, 1,25,600 ರೂ.ಗೆ ತಲುಪಿದೆ. ಶೇ. 99.5 ಶುದ್ಧತೆಯ ಚಿನ್ನ 10 ಗ್ರಾಂಗೆ 2200 ರೂ. ಏರಿಕೆಯಾಗಿ 1,25,000 ರೂ. ತಲುಪಿದೆ. ಗುರುವಾರ ಬೆಲೆ 10 ಗ್ರಾಂಗೆ 1,22,800 ರೂ.ಗೆ ಇಳಿಕೆಯಾಗಿತ್ತು. ಶೇ. 99.9 ಶುದ್ಧತೆಯ ಚಿನ್ನ ಗುರುವಾರ 1,23,400 ರೂ. ಮುಕ್ತಾಯಗೊಂಡಿತ್ತು. ಶುಕ್ರವಾರ ಬೆಳ್ಳಿ ಬೆಲೆ ಪ್ರತಿ ಕೆ.ಜಿ.ಗೆ 2000 ರೂ. ಇಳಿಕೆ ಕಂಡಿದ್ದು 1,53,000 ರೂ.ಗೆ ತಲುಪಿದೆ. ಗುರುವಾರ ಬೆಳ್ಳಿ ಬೆಲೆ 1,55,000 ರೂ. ಇತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net