

ಸುಶಾಂತ್ ಸಿಂಗ್ ರಜಪೂತ್ ನಿಧನದ ಬಳಿಕ ಸಿಂಗಲ್ ಆಗಿದ್ದು ರಿಯಾ ಇದೀಗ ಮತ್ತೆ ರಿಲೇಶನ್ಶಿಪ್ನಲ್ಲಿದ್ದಾರಾ ಎಂಬ ಗಾಸಿಪ್ ಕೇಳಿ ಬರುತ್ತಿದೆ.
ರಿಯಾ ಸುಶಾಂತ್ ಬಳಿಕ ಭಾರತದ ಶ್ರೀಮಂತ ಉದ್ಯಮಿ ನಿಖಿಲ್ ಕಾಮತ್ ಜೊತೆ ಡೇಟಿಂಗ್ ನಡೆಸುತ್ತಿದ್ದಾರೆ ಅನ್ನೋ ಮಾತುಗಳು ಕೇಳಿಬಂದಿದೆ.
ಸುಶಾಂತ್ ಸಿಂಗ್ ರಜಪೂತ್ ನಿಧನದ ಬಳಿಕ ಶಾಕ್‌ನಲ್ಲಿದ್ದ ರಿಯಾ ಇದೀಗ ಮೆಲ್ಲನೆ ಸಹಜ ಬದುಕಿನತ್ತ ಸಾಗಿದ್ದಾರೆ.
ಭಾರತದ ಶ್ರೀಮಂತ ಉದ್ಯಮಿ, ಝೆರೋಧಾ ಸಹ ಸಂಸ್ಥಾಪಕ ನಿಖಿಲ್ ಕಾಮತ್ ಜೊತೆ ಡೇಟಿಂಗ್ ನಡೆಸುತ್ತಿದ್ದಾರೆ ಅನ್ನೋ ಸುದ್ದಿಗಳು ಹರಿದಾಡುತ್ತಿದೆ. 31 ವರ್ಷದ ರಿಯಾ ಚಕ್ರವರ್ತಿ ಹಾಗೂ 36 ವರ್ಷದ ನಿಖಿಲ್ ಕಾಮತ್ ರಿಲೇಶನ್‌ಶಿಪ್‌ನಲ್ಲಿದ್ದಾರೆ ಅನ್ನೋ ಮಾಹಿತಿಯನ್ನು ರೆಡ್ಡಿಟ್ ಸೇರಿದಂತೆ ಇತರ ಕೆಲ ಮಾಧ್ಯಮಗಳು ವರದಿ ಮಾಡಿದೆ.
ಇವರಿಬ್ಬರೂ ಡೇಟಿಂಗ್ ನಡೆಸುತ್ತಿರುವ ಕುರಿತು ಯಾವುದೇ ಅಧಿಕೃತ ಮಾಹಿತಿ ಹೊರಬಿದ್ದಿಲ್ಲ. ಆದರೆ ಉಹಾಪೋಹಗಳು ಹರಿದಾಡುತ್ತಿದೆ.
ಸುಶಾಂತ್ ಸಾವಿನ ಬಳಿಕ ಡ್ರಗ್ಸ್ ಪ್ರಕರಣದಲ್ಲಿ ಸಿಲುಕಿದ ರಿಯಾ ಚಕ್ರವರ್ತಿಗೆ ಇತ್ತೀಚೆಗೆ ನ್ಯಾಯಾಲಯ ಜಾಮೀನು ನೀಡಿತ್ತು. ರಿಯಾ ಚಕ್ರವರ್ತಿ, ಗೆಳೆಯ ಸುಶಾಂತ್ ಸಿಂಗ್ ಡ್ರಗ್ಸ್ ನೀಡುತ್ತಿದ್ದರು ಅನ್ನೋ ಗಂಭೀರ ಆರೋಪ ರಿಯಾ ಮೇಲಿದೆ.
ನಿಖಿಲ್ ಕಾಮತ್ ತಮ್ಮ ಆದಾಯದ ಬಹುಪಾಲ ದಾನ ಮಾಡುವ ನಿರ್ಧಾರ ಘೋಷಿಸಿದ್ದರು. ಬರೋಬ್ಬರಿ 28,000 ಕೋಟಿ ರೂಪಾಯಿಗೂ ಹೆಚ್ಚು ಆಸ್ತಿ ಹೊಂದಿರುವ ನಿಖಿಲ್ ಕಾಮತ್ ಸದ್ಯ ಭಾರತದ ಉದಯೋನ್ಮುಖ ಉದ್ಯಮಿ ಮಾತ್ರವಲ್ಲ, ಪ್ರಭಾವಿ ವ್ಯಕ್ತಿಗಳ ಪಟ್ಟಿಯಲ್ಲೂ ಕಾಣಿಸಿಕೊಂಡಿದ್ದಾರೆ.