ವಿಜಯಕಾಂತ್ ಅನಾರೋಗ್ಯದ ಬಗ್ಗೆ ವದಂತಿ.. ನಿರಾಕರಿಸಿದ ಕ್ಯಾಪ್ಟನ್ ಪತ್ನಿ ಪ್ರೇಮಲತಾ

vijaya kanth
Published on

Rumors about Vijayakanth’s illness

ಚೆನ್ನೈ: ತಮಿಳು ಸ್ಟಾರ್, ಡಿಎಂಡಿಕೆ ಪಕ್ಷದ ಅಧ್ಯಕ್ಷ ವಿಜಯಕಾಂತ್ ಅವರು ಅನಾರೋಗ್ಯದ ಹಿನ್ನೆಲೆಯಲ್ಲಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಕೆಲವರು ಅವರು ಮೃತಪಟ್ಟಿದ್ದಾರೆ ಎಂದು ಸುಳ್ಳು ಪ್ರಚಾರ ಮಾಡುತ್ತಿದ್ದಾರೆ. ಸಾಮಾಜಿಕ ಜಾಲತಾಣಗಳು ಮತ್ತು ಯೂಟ್ಯೂಬ್ ಚಾನೆಲ್‌ಗಳು ವಿಜಯಕಾಂತ್ ಇನ್ನಿಲ್ಲ ಎಂದು ಸುಳ್ಳು ಸುದ್ದಿ ಹಬ್ಬಿಸುತ್ತಿವೆ. ಆದರೆ ಇದರಲ್ಲಿ ಯಾವುದೇ ಸತ್ಯಾಂಶವಿಲ್ಲ.

ಇದನ್ನೂ ಓದಿ: ಓಡಿದರೂ ಬಿಡದೆ ಪೇದೆ ಮೇಲೆ ಸಿಐ ಲಾಠಿ ಚಾರ್ಜ್ – ಬೆಚ್ಚಿಬಿದ್ದ ಮತದಾರರು! 
ವಿಜಯಕಾಂತ್ ಪತ್ನಿ ಪ್ರೇಮಲತಾ ಕೂಡ ಈ ಸುದ್ದಿಯನ್ನು ಅಲ್ಲಗಳೆದಿದ್ದಾರೆ. ಇನ್ನು ವಿಜಯಕಾಂತ್ ಆರೋಗ್ಯ ಸ್ಥಿರವಾಗಿದ್ದು, ಶೀಘ್ರದಲ್ಲೇ ಪೂರ್ಣ ಆರೋಗ್ಯಕ್ಕೆ ಮರಳಲಿದ್ದಾರೆ. ಅವರ ಅನಾರೋಗ್ಯದ ಬಗ್ಗೆ ವದಂತಿಗಳನ್ನು ನಂಬಬೇಡಿ, ಅವರ ಆರೋಗ್ಯ ಸುಧಾರಿಸುತ್ತಿದೆ ಎಂದು ಚೆನ್ನೈನ ಆಸ್ಪತ್ರೆ ಅಧಿಕಾರಿಗಳು ತಿಳಿಸಿದ್ದಾರೆ.

ತಮಿಳಿನ ‘ಇನಿಕ್ಕುಂ ಇಳಮೈ’ ಚಿತ್ರದ ಮೂಲಕ ವಿಜಯಕಾಂತ್ ಬೆಳ್ಳಿತೆರೆಯಲ್ಲಿ ತಮ್ಮ ಪಯಣ ಆರಂಭಿಸಿದ್ದರು. ಅವರು 150 ಕ್ಕೂ ಹೆಚ್ಚು ಚಿತ್ರಗಳನ್ನು ಮಾಡಿದ್ದಾರೆ. ಇಪ್ಪತ್ತಕ್ಕೂ ಹೆಚ್ಚು ಪೊಲೀಸ್ ಕಥೆಗಳಲ್ಲಿ ನಟಿಸಿದ್ದಾರೆ. ಅವರ 100 ನೇ ಚಿತ್ರ ‘ಕ್ಯಾಪ್ಟನ್ ಪ್ರಭಾಕರ್’ ಹಿಟ್ ಆದ ನಂತರ, ಎಲ್ಲರೂ ಅವರನ್ನು ಕ್ಯಾಪ್ಟನ್ ಎಂದು ಕರೆಯುತ್ತಿದ್ದಾರೆ. ಅವರ ಹಲವು ಚಿತ್ರಗಳು ಇತರೆ ಭಾಷೆಗಳಿಗೆ ಡಬ್ ಮತ್ತು ರಿಮೇಕ್ ಆಗಿವೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net