ಬಿಸ್ಕತ್ ತಿನ್ನಲು ನಿರಾಕರಿಸಿದರೆ ಭವಿಷ್ಯದಲ್ಲಿ ಆಪತ್ತು ವದಂತಿ... ಬಿಹಾರದಲ್ಲಿ Parle-G​ಗೆ ಸಖ್ಖತ್ ಡಿಮ್ಯಾಂಡ್​

parle g pic
Published on

ಬಿಹಾರ: ವಿಚಿತ್ರ ವದಂತಿಯೊಂದು ಬಿಹಾರದಲ್ಲಿ ಕಾಳ್ಗಿಚ್ಚಿನಂತೆ ಹರಡುತ್ತಿದ್ದು, ಇದರ ಪರಿಣಾಮ ಪಾರ್ಲೆ-ಜಿ ಬಿಸ್ಕತ್ತುಗಳನ್ನು ಕೊಳ್ಳಲು ಜನರು ಅಂಗಡಿಗಳಿಗೆ ಮುಗಿಬೀಳುತ್ತಿದ್ದಾರೆ.

ಪ್ರತಿವರ್ಷ ರಾಜ್ಯದಲ್ಲಿ ಆಚರಿಸುವ ಜಿಯುತಿಯಾ ಹಬ್ಬದಲ್ಲಿ ತಾಯಂದಿರು ತಮ್ಮ ಮಕ್ಕಳ ಆರೋಗ್ಯಕರ ಮತ್ತು ಸಮೃದ್ಧ ಜೀವನಕ್ಕಾಗಿ 24 ಗಂಟೆಗಳ ಕಾಲ ಉಪವಾಸ ಮಾಡುತ್ತಾರೆ. ಆದರೆ, ಈ ಬಾರಿ ಹೊಸದೊಂದು ವದಂತಿ ಹರಡಿದೆ. ಹಬ್ಬದ ವೇಳೆ ತಾಯಂದಿರು ತಮ್ಮ ಮಕ್ಕಳು, ಅದರಲ್ಲಿಯೂ ಗಂಡು ಮಕ್ಕಳಿಗೆ ಪಾರ್ಲೆ-ಜಿ ಬಿಸ್ಕತ್ತುಗಳನ್ನು ತಿನ್ನಿಸಬೇಕು. ಅವರು ತಿನ್ನಲು ನಿರಾಕರಿಸಿದರೆ, ಭವಿಷ್ಯದಲ್ಲಿ ಅಹಿತಕರ ಘಟನೆಗಳನ್ನು ಎದುರಿಸಬಹುದು ಎಂಬ ವದಂತಿ ಹರಡಿದೆ.

ಜನರು ಮಾತ್ರ ಅಂಗಡಿಗಳ ಮುಂದೆ ಪಾರ್ಲೆ-ಜಿ ಬಿಸ್ಕತ್ತುಗಳನ್ನು ಖರೀದಿಸಲು ಸಾಲುಗಟ್ಟಿ ನಿಂತಿರುವ ದೃಶ್ಯಗಳು ಕಂಡು ಬಂದಿವೆ. ಇದನ್ನು ತಿಳಿದ ಕೆಲವರು ಕಾಳ ಸಂತೆಯಲ್ಲಿಯೂ ಪಾರ್ಲೆ-ಜಿ ಬಿಸ್ಕತ್​ ಮಾರಾಟ ಮಾಡುತ್ತಿದ್ದಾರೆ. 5 ರೂ. ಬಿಸ್ಕತ್​ ಪ್ಯಾಕೆಟ್​ ಅನ್ನು 50 ರೂಪಾಯಿಗೆ ಮಾರಾಟ ಮಾಡಲಾಗುತ್ತಿದೆ. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net