ರುದ್ರಪ್ಪ ನೆನಪು ಕಾರ್ಯಕ್ರಮ ಜು.19ಕ್ಕೆ

Manjunath
ಮಂಜುನಾಥ್, ರೈತ ಸಂಘ ಹಾಗೂ ಹಸಿರು ಸೇನೆ ಶಿವಮೊಗ್ಗ ಜಿಲ್ಲಾಧ್ಯಕ್ಷ
Published on

ಶಿವಮೊಗ್ಗ: ರೈತ ಸಂಘದ ಸಂಸ್ಥಾಪಕ ಅಧ್ಯಕ್ಷ ಹೆಚ್.ಎಸ್. ರುದ್ರಪ್ಪ ಅವರ ನೆನಪು ಕಾರ್ಯಕ್ರಮವನ್ನು ಜು. 19ರಂದು ಶಿವಮೊಗ್ಗದ ಮತ್ತೂರು ರಸ್ತೆಯ ತೀರ್ಥಪ್ಪ ಕ್ಯಾಂಪ್‌ನಲ್ಲಿ ಆಯೋಜಿಸಲಾಗಿದೆ ಎಂದು ರೈತ ಸಂಘ ಮತ್ತು ಹಸಿರುಸೇನೆಯ ನೂತನ ಜಿಲಾಧ್ಯಕ್ಷ ಮಂಜುನಾಥ್ ಆರೇಕೊಪ್ಪ ತಿಳಿಸಿದರು.

ಸಂಘಟನೆಯನ್ನು ಬಲಪಡಿವು ನಿಟ್ಟಿನಲ್ಲಿ ಗ್ರಾಮ ಮಟ್ಟದಲ್ಲಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು. ಇದಕ್ಕಾಗಿ ರಾಜ್ಯಾಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ಜಿಲ್ಲಾ ಸಮಿತಿಯನ್ನು ಮರು ರಚನೆ ಮಾಡಿದ್ದಾರೆ ಎಂದು ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಜಿಲ್ಲಾ ಗೌರವಾಧ್ಯಕ್ಷರಾಗಿ ಸೈಯದ್ ಶಫೀವುಲ್ಲಾ, ವೀರಭದ್ರೇಗೌಡ, ಕಾರ‌್ಯಾಧ್ಯಕ್ಷರಾಗಿ ಅಮೃತ್ ರಾಜ್, ಉಪಾಧ್ಯಕ್ಷರಾಗಿ ಬಸವರಾಜ್ ಬನ್ನೂರ್, ಪ್ರಧಾನ ಕಾರ್ಯದರ್ಶಿಯಾಗಿ ಎಚ್.ಪಿ. ಸತೀಶ್, ಕಾರ್ಯದರ್ಶಿಯಾಗಿ ನಾಗರಾಜ್, ಸಂಚಾಲಕರಾಗಿ ಯೋಗೇಶ್ ಕುಂದಗಸವಿ, ಧನಂಜಯ ಬನ್ನೂರ್, ಸೋಮಶೇಖರ್ ಸಿಗ್ಗ, ಸಂಘಟನಾ ಕಾರ್ಯದರ್ಶಿಯಾಗಿ ಬಸವರಾಜ್ ಆರೇಕೊಪ್ಪ, ಮಹಿಳಾ ಸಂಚಾಲಕಿಯಾಗಿ ಸುಮಿತ್ರಾ ಅವರನ್ನು ನೇಮಕ ಮಾಡಲಾಗಿದೆ ಎಂದರು.
ಕಾರ್ಯದರ್ಶಿ ನಾಗರಾಜ್ ಮಾತನಾಡಿ, ರೈತರ ಬೆಳೆಗೆ ಬೆಂಬಲ ಬೆಲೆ ನಿಗದಿಪಡಿಸಬೇಕು. ರೈತ ಸಂಪರ್ಕ ಕೇಂದ್ರದಲ್ಲಿ ಗುಣಮಟ್ಟದ ಬೀಜ ಹಾಗೂ ಗೊಬ್ಬರ ಉಚಿತವಾಗಿ ವಿತರಣೆ ಮಾಡಬೇಕು. ಬರ ಪರಿಹಾರವನ್ನು ರೈತರ ಸಾಲಕ್ಕೆ ಜಮಾ ಮಾಡಿಕೊಳ್ಳಬಾರದು ಎಂದು ಒತ್ತಾಯಿಸಿದರು.
ಜಿಲ್ಲಾ ಸಮಿತಿ ಪದಾಧಿಕಾರಿಗಳು ಸುದ್ದಿಗೋಷ್ಠಿಯಲ್ಲಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net