

ನವದೆಹಲಿ: ಭಾರತದ ವಿದ್ಯಮಾನಗಳ ಬಗ್ಗೆ ಸಮರ್ಥ ವಾದ ಮಂಡಿಸಲು ಹಿರಿಯ ರಾಜತಾಂತ್ರಿಕ ಅಧಿಕಾರಿ ರುಚಿರಾ ಕಾಂಬೋಜ್ ಅವರನ್ನು ವಿಶ್ವಸಂಸ್ಥೆಗೆ ಭಾರತದ ಖಾಯಂ ಪ್ರತಿನಿಧಿಯಾಗಿ ನೇಮಿಸಲಾಗಿದೆ.
1987ರ ಬ್ಯಾಚ್‌ನ ಭಾರತೀಯ ವಿದೇಶಾಂಗ ಸೇವೆ (ಐಎಫ್ಎಸ್) ಅಧಿಕಾರಿಯಾಗಿರುವ ಕಾಂಬೋಜ್ ಪ್ರಸ್ತುತ ಭೂತಾನ್‌ನಲ್ಲಿ ಭಾರತದ ರಾಯಭಾರಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. ರುಚಿರಾ ಕಾಂಬೋಜ್ ಭೂತಾನ್ ಸಾಮ್ರಾಜ್ಯಕ್ಕೆ ಭಾರತದ ಮೊದಲ ಮಹಿಳಾ ರಾಯಭಾರಿಯಾಗಿದ್ದಾರೆ.
ಅವರು 1987ರ ನಾಗರಿಕ ಸೇವೆಗಳ ಬ್ಯಾಚ್ʼನ ಅಖಿಲ ಭಾರತ ಮಹಿಳಾ ಟಾಪರ್ ಮತ್ತು 1987ರ ವಿದೇಶಿ ಸೇವಾ ಬ್ಯಾಚ್ʼನ ಟಾಪರ್ ಆಗಿದ್ದರು. ಈವರೆಗೆ ಟಿ.ಎಸ್.ತಿರುಮೂರ್ತಿ ವಿಶ್ವಸಂಸ್ಥೆಯ ಮಹತ್ವದ ಹುದ್ದೆಯಲ್ಲಿದ್ದರು.