ವಯಸ್ಸು, ಬಣ್ಣ ಹಾಗೂ ದೇಹದ ಬಗ್ಗೆ ಟ್ರೋಲ್ ಮಾಡುವವರ ವಿರುದ್ಧ ಈಗಾಗಲೇ ಹಲವು ನಟಿಯರು ಧ್ವನಿ ಎತ್ತಿದ್ದಾರೆ. ಆದರೂ, ಈ ಕೀಳುಮಟ್ಟದ ಪ್ರವೃತ್ತಿ ನಿಂತಿಲ್ಲ. ಇನ್ನು ಇದೇ ವಿಚಾರಕ್ಕೆ ನಿರಂತರವಾಗಿ ಟ್ರೋಲ್ ಆಗುತ್ತಿದ್ದ ಹಿಂದಿಯ ‘ಅರ್ಧ್’ ನಟಿ ರುಬಿನಾ ಟ್ರೋಲ್ ಮಾಡುವವರ ವಿರುದ್ಧ ಅಸಮಾಧಾನವ್ಯಕ್ತಪಡಿಸಿದ್ದಾರೆ. ನಿರಂತರ ಟ್ರೋಲ್‌ಗೆ ಬೇಸತ್ತಿರುವ ಅವರು ‘ಯಾರಾದರೂ, ಏನಾದರೂ ಮಾತನಾಡಲಿ’ ಎಂದು ಸುಮ್ಮನಾಗಿಬಿಟ್ಟಿದ್ದಾರಂತೆ. ಈ ಬಗ್ಗೆ ಇತ್ತೀಚೆಗೆ ಮೌನ ಮುರಿದಿರುವ ಅವರು, ‘ನನ್ನ ಬಗ್ಗೆ ಹಲವು ರೀತಿಯಲ್ಲಿ ಟ್ರೋಲ್ ಮಾಡುವುದನ್ನು ಕೇಳಿದ್ದೇನೆ. ನಿಮಗೆ ವಯಸ್ಸಾಗಿದೆ. ಬೋಟಾಕ್ಸ್ ಶಸ್ತ್ರಚಿಕಿತ್ಸೆ ಮಾಡಿಸಿಕೊಂಡು ವಿಚಿತ್ರವಾಗಿ ಕಾಣುತ್ತೀದ್ದೀರಿ, ಸಣ್ಣದಾಗಿ ಕಾಣಲು ದೇಹಕ್ಕೆ ಟೋನಿಂಗ್ ಮಾಡಿಸಿಕೊಂಡಿದ್ದೀರಿ?.. ಹೀಗೆ ನಾನಾ ರೀತಿಯಲ್ಲಿ ನನ್ನನ್ನು ಅಪಹಾಸ್ಯ ಮಾಡಿದವರು ಇದ್ದಾರೆ. ಆದರೆ, ಈ ರೀತಿ ಮಾತನಾಡುವವರನ್ನು ನಿಯಂತ್ರಿಸಲು ಅಸಾಧ್ಯ ಎಂಬುದು ನನಗೆ ಅರಿವಾಗಿದೆ. ಯಾರಾದರೂ, ಏನಾದರೂ ಮಾತನಾಡಿಕೊಳ್ಳಲಿ ಎಂದು ಸುಮ್ಮನಾಗಿದ್ದೇನೆ. ಮೊದಲು ನನ್ನನ್ನು ನಾನು ನಿಯಂತ್ರಿಸಿಕೊಳ್ಳುತ್ತಿದ್ದೇನೆ’ ಎಂದು ಉತ್ತರಿಸಿದ್ದಾರೆ. ಸದ್ಯ ರುಬಿನಾ ಹಿಂದಿಯ ‘ಹಮ್ ತುಮ್ ಮಕ್ತೂಬ್’ ಚಿತ್ರದಲ್ಲಿ ನಟಿಸುತ್ತಿದ್ದಾರೆ. -ಏಜೆನ್ಸೀಸ್