ಎಲ್ಲ ಪರೀೆ ಎದುರಿಸಿ ಉನ್ನತ ಹುದ್ದೆ ಅಲಂಕರಿಸಿ; ಎಸ್​.ವಿ. ಸಂಕನೂರ

22-RNR-03
Published on

ರಾಣೆಬೆನ್ನೂರ: ವಿದ್ಯಾಥಿರ್ಗಳು ಸ್ಪರ್ಧಾತ್ಮಕ ಪರೀಕ್ಷೆ ಎದುರಿಸಿ ಉನ್ನತ ಹುದ್ದೆ ಅಲಂಕರಿಸುವ ಕಡೆಗೆ ಸಾಗಬೇಕು ಎಂದು ವಿಧಾನ ಪರಿಷತ್​ ಸದಸ್ಯ ಎಸ್​.ವಿ. ಸಂಕನೂರ ಹೇಳಿದರು.

ನಗರದ ಆರ್​ಟಿಇಎಸ್​ ಕಾಲೇಜ್​ನಲ್ಲಿ ಶನಿವಾರ ಡಾ. ಬಿ.ಆರ್​. ಅಂಬೇಡ್ಕರ್​ ಅಧ್ಯಯನ ಮತ್ತು ಸಂಶೋಧನಾ ಕೇಂದ್ರ, ಮಾಹಿತಿ ಕೇಂದ್ರ, ಗ್ರಂಥಾಲಯ ಮತ್ತು ಮಾಹಿತಿ ಕೇಂದ್ರ, ಸಮಾಜಶಾಸ್ತ್ರ ವಿಭಾಗದಿಂದ ಹಮ್ಮಿಕೊಂಡಿದ್ದ ಸ್ಪರ್ಧಾ ಸಂಭ್ರಮ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಅಂಕಗಳನ್ನು ಪಡೆಯುವುದು ಮುಖ್ಯವಲ್ಲ. ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸುವ ಕೌಶಲ ವಿದ್ಯಾಥಿರ್ಗಳು ಅರಿತುಕೊಳ್ಳಬೇಕು. ಬೇರೆ ರಾಜ್ಯದ ಜನರು ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ತೇರ್ಗಡೆಯಾಗಿ ನಮ್ಮ ರಾಜ್ಯದಲ್ಲಿ ಉನ್ನತ ಹುದ್ದೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಆದ್ದರಿಂದ ನಾವು ಕೂಡ ಹೆಚ್ಚು ಹೆಚ್ಚು ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸಿ ಉನ್ನತ ಸ್ಥಾನ ಪಡೆಯಬೇಕು. ಅದಕ್ಕೆ ಪೂರಕವಾದ ಅಧ್ಯಯನ ಕಾಲೇಜ್​ ಹಂತದಲ್ಲಿಯೇ ವಿದ್ಯಾಥಿರ್ಗಳು ಮಾಡಬೇಕು ಎಂದರು.

ಪ್ರಾಚಾರ್ಯ ಸಿ.ಎ. ಹರಿಹರ ಅಧ್ಯಕ್ಷತೆ ವಹಿಸಿದ್ದರು.

ಲಯನ್ಸ್​ ಕ್ಲಬ್​ ಜಿಲ್ಲಾಧ್ಯಕ್ಷ ಪ್ರಭುಲಿಂಗ ಹಲಗೇರಿ, ಬ್ಯಾಡಗಿ ತಾಲೂಕು ಪತ್ರಕರ್ತ ಸಂದ ಅಧ್ಯಕ್ಷ ಶಿವಾನಂದ ಮಲ್ಲನಗೌಡ್ರ, ಡಾ. ಮಂಜುನಾಥ ತಲ್ಲೂರು, ಶಿಕ್ಷಣ ಸಂಸ್ಥೆ ಅಧ್ಯಕ್ಷ ಸುಭಾಷ ಸಾವಕಾರ, ಕಾರ್ಯಾಧ್ಯಕ್ಷ ಎಸ್​.ಕೆ. ಕೋಟಿ, ಸಂಯೋಜಕ ಡಾ. ಆನಂದ ಕಾನಪೇಟೆ, ಐಕ್ಯೂಎಸಿ ಸಂಯೋಜಕ ಡಾ. ಮಧುಕುಮಾರ ಆರ್​., ಗ್ರಂಥಪಾಲಕ ಡಾ. ಪಿ.ಬಿ. ಕೊಪ್ಪದ ಮತ್ತು ಸಿಬ್ಬಂದಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net