

ಬೆಂಗಳೂರು: ಶಿಕ್ಷಣ ಹಕ್ಕು ಕಾಯ್ದೆ (ಆರ್‌ಟಿಇ) ಅಡಿ ಶೇ.25ರಷ್ಟು ಸೀಟು ಪಡೆಯುವ ಪಾಲಕರ ಅನುಕೂಲಕ್ಕಾಗಿ ಶಾಲಾ ಶಿಕ್ಷಣ ಇಲಾಖೆಯು ತನ್ನ ವೆಬ್‌ಸೈಟ್‌ನಲ್ಲಿ ನೆರೆಹೊರೆಯ ಶಾಲೆಗಳ ಪಟ್ಟಿಯನ್ನು ಪ್ರಕಟಿಸಿದೆ.
ಇಲಾಖೆ ವೆಬ್‌ಸೈಟ್‌ಗೆ ಭೇಟಿ ನೀಡಿದರೆ ಮಾಹಿತಿ ಲಭ್ಯವಾಗಲಿದೆ. ರಾಜ್ಯದ ಎಲ್ಲ ಜಿಲ್ಲೆಗಳು, ತಾಲ್ಲೂಕು, ಕಂದಾಯ ಗ್ರಾಮಗಳು, ನಗರ ಪ್ರದೇಶ, ಸ್ಳಳೀಯ ಸಂಸ್ಥೆಗಳ ವ್ಯಾಪ್ತಿಯ ಶಾಲೆಗಳು ಸೇರಿ ವಿಭಾಗವಾರು ಲಭ್ಯವಿರುವ ಶಾಲೆಗಳ ಪಟ್ಟಿಯನ್ನು ಪ್ರಕಟಿಸಿದೆ. ಪಾಲಕರು ಶಾಲೆಗಳ ಪಟ್ಟಿಯನ್ನು ಒಮ್ಮೆ ನೋಡಿದ ಬಳಿಕ ಶಾಲೆಗಳ ಬಗ್ಗೆ ವಿಚಾರಿಸಿದ ಬಳಿಕ ಪಾಲಕರು ಅರ್ಜಿಯನ್ನು ಸಲ್ಲಿಸಬಹುದು.
ರಾಜ್ಯಾದ್ಯಂತ ಲಭ್ಯವಿರುವ ಎಲ್ಲ ಶಾಲೆಗಳ ಮಾಹಿತಿ ಕೂಡ ಜಾಲತಾಣದಲ್ಲಿ ಮಾಹಿತಿ ಸಿಗಲಿದೆ. ಅರ್ಜಿ ಸಲ್ಲಿಸುವುದಕ್ಕೂ ಮೊದಲು ಯಾವೆಲ್ಲ ಶಾಲೆಗಳಲ್ಲಿ ಆರ್‌ಟಿಇ ಸೀಟುಗಳು ದೊರೆಯಲಿವೆ ಎಂಬ ಮಾಹಿತಿ ತಿಳಿಯಲು ಎಂಬ ಕಾರಣದಿಂದ ಸರ್ಕಾರವು ಮಾಹಿತಿಯನ್ನು ನೀಡಿದೆ. ಹೆಚ್ಚಿನ ಮಾಹಿತಿಗೆ ಭೇಟಿ ನೀಡಬಹುದು.