ಕಲಬುರುಗಿಯಲ್ಲಿ ಆರ್​ಎಸ್​ಎಸ್​ ಪಥಸಂಚಲನ; ಪೊಲೀಸರಿಂದ ಬಿಗಿ ಬಂದೋಬಸ್ತ್​​

RSS
Published on

ಕಲಬುರಗಿ: ವಿಜಯದಶಮಿ ಅಂಗವಾಗಿ ಆರ್​ಎಸ್​ಎಸ್ ನಿಂದ ಕಲಬುರಗಿ ಕೋಟೆಯಿಂದ ಗಂಜ್ ಮಾರ್ಗವಾಗಿ ಶರಣಬಸವೇಶ್ವರ ದೇವಸ್ಥಾನದವರೆಗೆ ಪಥಸಂಚಲನ ನಡೆಯಿತು.

ಮುಖ್ಯರಸ್ತೆಯಲ್ಲಿ ಆರ್​ಎಸ್​ಎಸ್​ ಪಥಸಂಚಲನ ನಡೆಯುತ್ತಿದ್ದ ವೇಳೆ, ಹಿಂದೂ ಸಂಘಟನೆಗಳಿಂದ ಪುಷ್ಪಾರ್ಚನೆ ನಡೆಯಿತು.

ಆಕರ್ಷಕವಾಗಿ ನಡೆದ ಆರ್​ಎಸ್​ಎಸ್​ ಪಥಸಂಚಲನ ಕಣ್ತುಂಬಿಕೊಳ್ಳಲು ರಸ್ತೆಯ ಎರಡೂ ಬದಿಯಲ್ಲೂ ಜನರು ಸೇರಿದ್ದರು. ಈ ವೇಳೆ ಪೊಲೀಸರಿಂದ ಪಥಸಂಚಲನಕ್ಕೆ ಬಂದೋಬಸ್ತ್​ ನೀಡಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net