ಆರ್‌ಎಸ್‌ಎಸ್ ಮಹತ್ವದ ಭೂಮಿಕೆ: ಛಲವಾದಿ | Awareness among youths

BJP program
Published on

ಬೆಂಗಳೂರು: ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರ್‌ಎಸ್‌ಎಸ್) ಇಲ್ಲದೇ ಇದ್ದರೆ ನಾವು ಪಾಕಿಸ್ತಾನ ಅಥವಾ ಬಾಂಗ್ಲಾ ದೇಶ ಆಗಿರುತ್ತಿದ್ದವೋ ಏನೋ ಎಂದು ವಿಧಾನ ಪರಿಷತ್ ಪ್ರತಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಹೇಳುವ ಮೂಲಕ ಆರ್‌ಎಸ್‌ಎಸ್ ಮಹತ್ವದ ಭೂಮಿಕೆ ನಿರ್ವಹಿಸಿದೆ ಎಂದು ಪರೋಕ್ಷ ಇಂಗಿತ ವ್ಯಕ್ತಪಡಿಸಿದರು.

ಸ್ವಾತಂತ್ರ್ಯ ದಿನದ ನಿಮಿತ್ತ ಪಕ್ಷದ ರಾಜ್ಯ ಕಚೇರಿಯಲ್ಲಿ ರಾಷ್ಟ್ರ ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಅವರು, ಪ್ರಧಾನಿ ನರೇಂದ್ರ ಮೋದಿಯವರ ಆಶಯದಂತೆ ನಡೆದ ಮನೆ, ಮನೆಗೆ ತಿರಂಗಾ ಅಭಿಯಾನದಿಂದ ಯುವಜನರಿಗೆ ಸ್ವಾತಂತ್ರ್ಯ ನಡೆದ ಹೋರಾಟ, ಮಹತ್ವದ ಅರಿವು ಮೂಡಿದೆ ಎಂದು ವಿಧಾನ ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಅಭಿಪ್ರಾಯ ವ್ಯಕ್ತಪಡಿಸಿದರು.

ನವಪೀಳಿಗೆಯಲ್ಲಿ ಸ್ವಾತಂತ್ರ್ಯಕ್ಕಾಗಿ ನಡೆದ ಹೋರಾಟ, ತ್ಯಾಗದ ಅರಿವಿರಬೇಕು. ಬಾಬಾಸಾಹೇಬ ಡಾ.ಬಿ.ಆರ್.ಅಂಬೇಡ್ಕರ್ ಅವರು ಸರ್ವರಿಗೂ ಸಮಬಾಳು, ಸಮಪಾಲು ನೀಡಲು ಸಂವಿಧಾನದ ಮೂಲಕ ಗಟ್ಟಿ ತಳಹದಿ ಹಾಕಿಕೊಟ್ಟರು. ಸಂವಿಧಾನ ಮತ್ತು ತ್ರಿವರ್ಣ ಧ್ವಜ ನಮಗೆ ಅತ್ಯಂತ ಮುಖ್ಯವಾದುದು ಎಂದು ಛಲವಾದಿ ನಾರಾಯಣಸ್ವಾಮಿ ಹೇಳಿದರು.

ದೇಶಕ್ಕೆ ಪ್ರಾಮುಖ್ಯತೆ

ಮಾಜಿ ಸಚಿವ ಶಾಸಕ ಡಾ. ಸಿ.ಎನ್.ಅಶ್ವತ್ಥನಾರಾಯಣ ಮಾತನಾಡಿ ಜಾತಿ, ಧರ್ಮ, ಭಾಷೆಗಿಂತ ದೇಶ ಮೊದಲು. ಇದರಿಂದ ದೇಶ ಏಕತೆಯಿಂದ ಉಳಿಯಲು ಸಾಧ್ಯವಿದ್ದು, ಈ ವಿಚಾರದಲ್ಲಿ ಪ್ರತಿಯೊಬ್ಬ ಭಾರತೀಯರಲ್ಲೂ ಸ್ಪಷ್ಟತೆಯಿರಬೇಕು ಎಂದರು.

ದೇಶದೆದುರು ಹಲವಾರು ಸವಾಲು- ಸಮಸ್ಯೆಗಳಿವೆ. ಅವನ್ನು ನಿಭಾಯಿಸಲು ಜ್ಞಾನ, ಗುಣಮಟ್ಟದ ಶಿಕ್ಷಣ, ತಂತ್ರಜ್ಞಾನ ಮತ್ತು ಕೌಶಲಕ್ಕೆ ಆದ್ಯತೆ ಅನಿವಾರ್ಯವಾಗಿದೆ.

ಅಂಥ ಮಾನವ ಸಂಪನ್ಮೂಲವುಳ್ಳ ದೇಶಕ್ಕೆ ಉತ್ತಮ ಭವಿಷ್ಯ ಇರುತ್ತದೆ. ಈ ನಿಟ್ಟಿನಲ್ಲಿ ಪ್ರಧಾನಿ ಮೋದಿಯವರು ಸ್ಪಷ್ಟ ಸಂದೇಶ ನೀಡಿ ಕಾರ್ಯಪ್ರವೃತ್ತರಾಗಿದ್ದಾರೆ ಎಂದು ಡಾ.ಸಿ.ಎನ್.ಅಶ್ವತ್ಥ ನಾರಾಯಣ ತಿಳಿಸಿದರು.

ಸಂಸದ ಪಿ.ಸಿ.ಮೋಹನ್, ಮಾಜಿ ಸಚಿವ ಡಾ.ಸಿ.ಎನ್.ಅಶ್ವತ್ಥ ನಾರಾಯಣ, ಮಾಜಿ ಶಾಸಕ ಎ.ಎಚ್.ಶಿವಯೋಗಿಸ್ವಾಮಿ, ಪಕ್ಷದ ರಾಜ್ಯ ಪದಾಧಿಕಾರಿಗಳಾದ ಪ್ರೀತಂಗೌಡ, ಲಕ್ಷ್ಮೀಅಶ್ವಿನ್ ಗೌಡ ಜಗದೀಶ್ ಹಿರೇಮನಿ, ಎಸ್.ಹರೀಶ್, ಮುಖಂಡರು, ಕಾರ್ಯಕರ್ತರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net