ಓಲೈಕೆಗಾಗಿ ಆರ್‌ಎಸ್‌ಎಸ್ ನಿಂದನೆ: ಆರ್.ಅಶೋಕ್ ಟೀಕೆ | Congress failed attempt

r ashoka
Published on

ಬೆಂಗಳೂರು: ಕಾಂಗ್ರೆಸ್ ಹೈಕಮಾಂಡ್ ಮತ್ತು ನಕಲಿ ಗಾಂಧಿ ಕುಟುಂಬ ಮೆಚ್ಚಿಸಲು, ಅಕ್ಕಪಕ್ಕದಲ್ಲೇ ಓಡಾಡಿಕೊಂಡು ಅವರ ರಹಸ್ಯ ಕಾರ್ಯಸೂಚಿಗಳನ್ನು ಜಾರಿ ಮಾಡಲು ಸದಾ ಹೊಂಚು ಹಾಕುತ್ತಿರುವ ಕೆಲವು ಎಡಪಂಥೀಯರು, ಸೋಕಾಲ್ಡ್ ಬುದ್ಧಿಜೀವಿಗಳನ್ನು ಓಲೈಸಲು ಆರ್‌ಎಸ್‌ಎಸ್‌ನ್ನು ಸಿಎಂ ಸಿದ್ದರಾಮಯ್ಯ ನಿಂದಿಸಿದ್ದಾರೆ ಎಂದು ವಿಧಾನಸಭೆ ಪ್ರತಿಪಕ್ಷ ನಾಯಕ ಆರ್.ಅಶೋಕ್ ಕುಟುಕಿದ್ದಾರೆ.

ಸಾಮಾಜಿಕ ಜಾಲತಾಣದ ತಮ್ಮ ಖಾತೆಯಲ್ಲಿ ಈ ಕುರಿತು ಶುಕ್ರವಾರ ಸಂದೇಶ ಹಂಚಿಕೊಂಡಿರುವ ಅವರು, ಸಿಎಂ ಹೇಳಿಕೆಯಿಂದ ನನಗೇನು ಅಚ್ಚರಿಯಾಗಿಲ್ಲ. ಕಾಂಗ್ರೆಸ್ ಪಕ್ಷದ ಹತಾಶೆ, ಅಸೂಯೆ ಏನು ಎಂಬುದು ನನಗೆ ಅರ್ಥವಾಗುತ್ತದೆ ಎಂದು ಛೇಡಿಸಿದ್ದಾರೆ.

ರಾಷ್ಟ್ರೀಯ ಸ್ವಯಂಸೇವಕ ಸಂಘದ ಇತಿಹಾಸ, ಸಿದ್ಧಾಂತ, ಕಾರ್ಯದ ಬಗ್ಗೆ ಅಪಪ್ರಚಾರ, ನಿಂದನೆ, ತೇಜೋವಧೆ ಮಾಡುವ ವಿಫಲ ಪ್ರಯತ್ನವನ್ನು ಕಾಂಗ್ರೆಸ್ ಪಕ್ಷ ಅನೇಕ ದಶಕಗಳಿಂದಲೂ ಮಾಡುತ್ತಲೇ ಬಂದಿದೆ ಎಂದಿದ್ದಾರೆ.

ಗೌರವ, ಅಭಿಮಾನ ಹೆಚ್ಚಳ

ಆದರೂ ಆರ್‌ಎಸ್‌ಎಸ್ ಬಗ್ಗೆ ಜನರಿಗೆ ಗೌರವ, ಅಭಿಮಾನ ಹೆಚ್ಚುತ್ತಲೇ ಇದೆ. ಸಂಘದ ವೈಚಾರಿಕತೆ ವ್ಯಾಪಕವಾಗಿ ಸ್ವೀಕೃತವಾಗುತ್ತಿದೆ, ಸಂಘ ಪರಿವಾರ ದೊಡ್ಡದಾಗುತ್ತಲೇ ಇದೆ. ರಾಜಕೀಯ ಲಾಭಕ್ಕಾಗಿ ದೇಶಭಕ್ತ ಸಂಘಟನೆಗಳನ್ನು ನಿಂದಿಸುವ ನಡೆಯನ್ನು ಯಾವ ದೇಶಪ್ರೇಮಿಯೂ ಕ್ಷಮಿಸುವುದಿಲ್ಲ.

ಕೆಲವೇ ಕೆಲವರನ್ನು ಮೆಚ್ಚಿಸಲು ಕೋಟ್ಯಂತರ ದೇಶಪ್ರೇಮಿಗಳ ಕಣ್ಣಲ್ಲಿ ಸಿಎಂ ಸಿದ್ದರಾಮಯ್ಯ ಚಿಕ್ಕವರಾಗಬಾರದು. ಸ್ವಾತಂತ್ರ್ಯ ಹೋರಾಟದಲ್ಲಿ ಆರ್‌ಎಸ್‌ಎಸ್ ಪಾತ್ರ ಏನು ಎಂಬುದನ್ನ ಸ್ವಲ್ಪ ಓದಿ ತಿಳಿದುಕೊಳ್ಳಬೇಕು ಎಂದು ಸಲಹೆ ನೀಡಿದ್ದಾರೆ.

ರಾಷ್ಟ್ರೀಯ ನಾಯಕರ ಗುಣಗಾನ

ಗಾಂಧೀಜಿ, ಬಾಬಾ ಸಾಹೇಬ್ ಅಂಬೇಡ್ಕರ್, ಜಯಪ್ರಕಾಶ್ ನಾರಾಯಣ ಆದಿಯಾಗಿ ಪಕ್ಷ, ಸೈದ್ಧಾಂತಿಕ ಹಿನ್ನೆಲೆ ಮೀರಿ ಅನೇಕ ಮಹನೀಯರು ್ಕಖಖನ ಸೇವೆ, ಸಮರ್ಪಣೆ, ಸಮಾನತೆ, ಭಾತೃತ್ವದ ಭಾವನೆಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿರುವುದು ಇತಿಹಾಸದಲ್ಲಿ ದಾಖಲಾಗಿದೆ.

ಅರ್‌ಎಸ್‌ಎಸ್ ಶಿಬಿರಕ್ಕೆ 1934ರಲ್ಲಿ ಭೇಟಿ ನೀಡಿದ್ದ ಗಾಂಧೀಜಿಯವರು ಅಲ್ಲಿ ಎ್ಲ ಸ್ವಯಂಸೇವಕರು ಜಾತಿ, ಮತ, ಕುಲದ ಭೇದವಿಲ್ಲದೆ ಅನ್ಯೋನ್ಯವಾಗಿ ಒಂದೇ ತಾಯಿ ಮಕ್ಕಳಂತೆ ಇದ್ದದ್ದನ್ನು ಕಂಡು ಜಾತಿಬೇಧ ರಹಿತ, ಅಸ್ಪೃಶ್ಯತೆ ರಹಿತ ಸಮಾಜ ನಿರ್ಮಾಣದ ನನ್ನ ಕನಸು ಆರ್‌ಎಸ್‌ಎಸ್ ನನಸು ಮಾಡಿದೆ ಎಂದು ಪ್ರಶಂಸಿಸಿದ್ದರು.

1962ರ ಭಾರತ-ಚೀನಾ ಯುದ್ಧದ ಸಂದರ್ಭದಲ್ಲಿ ಸಂಘದ ಸ್ವಯಂಸೇವಕರು ಸಲ್ಲಿಸಿದ

ಸೇವೆಯನ್ನು ಗುರುತಿಸಿ ಅಂದಿನ ಪ್ರಧಾನಿ ಜವಾಹರ್ ಲಾಲ್ ನೆಹರೂ ಅವರು 1963ರ ಗಣರಾಜ್ಯೋತ್ಸವ ದಿನಾಚರಣೆಯ ಪರೇಡ್‌ಗೆ ಸ್ವಯಂಸೇವಕರನ್ನು ಆಹ್ವಾನಿಸಿದ್ದರು.

ಅಷ್ಟೇ ಏಕೆ, ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿರವರು 2018ರಲ್ಲಿ ಆರ್‌ಎಸ್‌ಎಸ್ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು ಎಂಬುದನ್ನು ಸಿದ್ದರಾಮಯ್ಯ ಅವರಿಗೆ ಆರ್.ಅಶೋಕ್ ನೆನಪಿಸಿ, ತಿವಿದಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net