

ಮುಂಬೈ: ಪ್ಯಾಕೇಜಿಂಗ್ ವಲಯದ ಕಂಪನಿ ಕ್ರಿಯೇಟಿವ್ ಗ್ರಾಫಿಕ್ಸ್ ಸೊಲ್ಯೂಷನ್ಸ್ ಇಂಡಿಯಾ ಲಿಮಿಟೆಡ್ (Creative Graphics Solutions India Limited) ಶುಕ್ರವಾರ ತನ್ನ ಆರಂಭಿಕ ಸಾರ್ವಜನಿಕ ಕೊಡುಗೆ (ಐಪಿಒ) ಮಾರ್ಚ್ 28 ರಂದು ತೆರೆಯಲಿದೆ ಎಂದು ಹೇಳಿದೆ. ಈ ಐಪಿಒ ಗಾತ್ರ 54.4 ಕೋಟಿ ರೂ. ಇದೆ. ಈ ಐಪಿಒದ ಬೆಲೆ ಪಟ್ಟಿಯನ್ನು ಪ್ರತಿ ಷೇರಿಗೆ 80-85 ರೂ.ಗೆ ನಿಗದಿಪಡಿಸಲಾಗಿದೆ.
ಏಪ್ರಿಲ್ 4 ರಂದು ಐಪಿಒ ಮುಕ್ತಾಯವಾಗಲಿದೆ ಎಂದು ಕಂಪನಿ ಹೇಳಿಕೆಯಲ್ಲಿ ತಿಳಿಸಿದೆ. ಆಂಕರ್ ಹೂಡಿಕೆದಾರರ ಬಿಡ್ಗಳು ಮಾರ್ಚ್ 27 ರಂದು ಒಂದು ದಿನದವರೆಗೆ ತೆರೆಯಲ್ಪಡುತ್ತವೆ.
ಐಒಪಿದಿಂದ ಸಂಗ್ರಹಿಸಲಾದ ಮೊತ್ತವನ್ನು ಕಂಪನಿಯ ಕಾರ್ಯನಿರತ ಬಂಡವಾಳದ ಅವಶ್ಯಕತೆಗಳನ್ನು ಪೂರೈಸಲು, ಸಾಲಗಳನ್ನು ಮರುಪಾವತಿಸಲು, ಸ್ವಾಧೀನಪಡಿಸಿಕೊಳ್ಳಲು ಮತ್ತು ಸಾಮಾನ್ಯ ಕಾರ್ಪೊರೇಟ್ ವೆಚ್ಚಗಳನ್ನು ಪೂರೈಸಲು ಬಳಸಲಾಗುತ್ತದೆ.
ಈ ಐಪಿಒದಲ್ಲಿ 1600 ಷೇರುಗಳಿಗೆ ಒಂದು ಲಾಟ್ ಮಾಡಲಾಗಿದೆ. ಹೂಡಿಕೆದಾರರು ಕನಿಷ್ಠ ಒಂದು ಲಾಟ್ ಖರೀದಿಸಬೇಕು. ಇದರಿಂದಾಗಿ ಹೂಡಿಕೆದಾರರು ಕನಿಷ್ಠ 1,36,000 ರೂ.ಗಳ ಹೂಡಿಕೆ ಮಾಡಬೇಕಾಗುತ್ತದೆ.
ಪ್ರಸ್ತುತ ಕಂಪನಿಯಲ್ಲಿ ಪ್ರವರ್ತಕರ ಒಟ್ಟು ಪಾಲು 92.10 ಪ್ರತಿಶತ ಇದೆ. ಐಪಿಒ ನಂತರ ಇದು 67.83 ಪ್ರತಿಶತಕ್ಕೆ ಇಳಿಯುತ್ತದೆ.
ಕಂಪನಿಯ ಐಪಿಒ ಗ್ರೇ ಮಾರ್ಕೆಟ್ನಲ್ಲಿ 40 ರೂ ಪ್ರೀಮಿಯಂನಲ್ಲಿ ವಹಿವಾಟು ನಡೆಸುತ್ತಿದೆ. ಪಟ್ಟಿ ಮಾಡುವವರೆಗೆ ಇದೇ ಪರಿಸ್ಥಿತಿ ಮುಂದುವರಿದರೆ ನಂತರ ಕಂಪನಿಯ ಷೇರು 120 ರೂ.ಗಳಲ್ಲಿ ಷೇರು ಮಾರುಕಟ್ಟೆಯಲ್ಲಿ ಪಾದಾರ್ಪಣೆ ಮಾಡಬಹುದು. ಅಂದರೆ ಹೂಡಿಕೆದಾರರು ಮೊದಲ ದಿನವೇ ಶೇಕಡಾ 47 ರಷ್ಟು ಲಾಭವನ್ನು ಪಡೆಯಬಹುದು.