ದಿವಾಳಿ ಮತ್ತು ದಿವಾಳಿತನ ನೀತಿ ತಿದ್ದುಪಡಿ ಮಸೂದೆ ಅಂಗೀಕರಿಸಿದ ರಾಜ್ಯಸಭೆ

Nirmala Sitaraman (1)
Published on

ನವದೆಹಲಿ: ದಿವಾಳಿ ಮತ್ತಿ ದಿವಾಳಿತನ ನೀತಿ (ಎರಡನೇ ತಿದ್ದುಪಡಿ) ಮಸೂದೆಯನ್ನು ರಾಜ್ಯಸಭೆ ಶನಿವಾರ ಅಂಗೀಕರಿಸಿದೆ. ಈ ತಿದ್ದುಪಡಿ ಅಂಗೀಕಾರವಾದ ಕಾರಣ, ಕರೊನಾ ವೈರಸ್​ ದಿವಾಳಿ ಘೋಷಣೆ ಪ್ರಕ್ರಿಯೆಯನ್ನು ಮಾರ್ಚ್​ 25ರಿಂದ ಪೂರ್ವಾನ್ವಯವಾಗುವಂತೆ ಕನಿಷ್ಠ ಆರು ತಿಂಗಳ ಮಟ್ಟಿಗೆ ಕೈಗೊಳ್ಳುವುದು ಸಾಧ್ಯವಿಲ್ಲ.

ಈ ಮಸೂದೆ ತಿದ್ದುಪಡಿ ಕುರಿತು ರಾಜ್ಯಸಭೆಯಲ್ಲಿ ನಡೆದ ಚರ್ಚೆಯ ವೇಳೆ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು, ಉತ್ತಮ ಕಾಳಜಿಯಲ್ಲಿ ಇರಿಸುವುದು, ದಿವಾಳಿಯಾಗದಂತೆ ಇರಿಸುವುದು ಐಬಿಸಿಯ ಉದ್ದೇಶ. ಮಾರ್ಚ್​ 25ರಿಂದ ದೇಶಾದ್ಯಂತ ಲಾಕ್​ಡೌನ್ ಘೋಷಣೆಯಾದ ಕಾರಣ ಅಂದಿನಿಂದ ಸಾಲ ಮರುಪಾವತಿ ಮಾಡಿಲ್ಲದ ಕಂಪನಿಗಳ ವಿರುದ್ಧ ಅಂದಿನಿಂದ ಅನ್ವಯವಾಗುವಂತೆ ಕನಿಷ್ಠ ಆರು ತಿಂಗಳ ಮಟ್ಟಿಗೆ ದಿವಾಳಿ ಕ್ರಮ ತೆಗೆದುಕೊಳ್ಳದಿರುವುದಕ್ಕೆ ಈ ತಿದ್ದುಪಡಿ ಮಾಡಲಾಗಿದೆ ಎಂದು ತಿಳಿಸಿದರು.

ಈ ಮಸೂದೆಯು ಜೂನ್ ತಿಂಗಳಲ್ಲಿ ಮಾಡಿದ್ದ ಆರ್ಡಿನೆನ್ಸ್ ಜಾಗವನ್ನು ತುಂಬಲಿದೆ. ವ್ಯಾಪಾರೋದ್ಯಮಗಳಿಗೆ ಇದರಿಂದ ಅನುಕೂಲವಾಗಲಿದೆ ಎಂದು ಸರ್ಕಾರ ಹೇಳಿದೆ. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net