

ಉತ್ತರ ಪ್ರದೇಶ: ( Hair Robbery At House ) ಹಣ, ಬಂಗಾರ ಸೇರಿದಂತೆ ಬೆಲೆ ಬಾಳುವ ವಸ್ತುಗಳನ್ನು ಕದ್ದು ಎಸ್ಕೇಪ್ ಆಗುವ ಕಳ್ಳರ ಸುದ್ದಿ ಓದಿದ್ದೇವೆ... ಪ್ರತಿನಿತ್ಯ ಕೇಳುತ್ತಿರುತ್ತೇವೆ. ಆದರೆ ಇಲ್ಲೊಂದು ಕಳ್ಳರ ಗ್ಯಾಂಗ್ ಕೂದಲು ಕಳುವು ಮಾಡಿದ್ದಾರೆ. ಉತ್ತರ ಪ್ರದೇಶದ ಫರಿದಾಬಾದ್‌ನಲ್ಲಿ ಈ ಘಟನೆ ನಡೆದಿದೆ.
ರಂಜಿತ್ ಮಂಡಲ್ ಫರಿದಾಬಾದ್‌ನಲ್ಲಿರುವ ತಮ್ಮ ಮನೆಯಲ್ಲಿ ಚೌರಿ ತಯಾರಿಸಿ ಮಾರಾಟ ಮಾಡುತ್ತಿದ್ದರು. ಫರಿದಾಬಾದ್ ಪ್ರದೇಶದಲ್ಲಿ ಈ ಕೇಶ ಮಾರಾಟಗಾರರ ಮನೆಗೆ ನುಗ್ಗಿದ ದರೋಡೆಕೋರರ ತಂಡ 150 ಕೆಜಿ ಕೂದಲು ದೋಚಿದೆ.7 ಲಕ್ಷ ಮೌಲ್ಯದ ಕೂದಲು ಕಳ್ಳತನವಾಗಿದ್ದು, ಭಾರೀ ಆಘಾತವನ್ನುಂಟು ಮಾಡಿದೆ. ಜನವರಿ 12 ರಂದು ಮುಂಜಾನೆ 2.30 ರಿಂದ 3.00 ರ ನಡುವೆ ದರೋಡೆ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ವ್ಯಕ್ತಿಯೊಬ್ಬ ಇವರ ಮನೆಗೆ ನುಗ್ಗಿ 150 ಕೆಜಿ ತೂಕದ ಕೂದಲನ್ನು ಕದ್ದೊಯ್ದಿದ್ದಾನೆ. ಅಂದರೆ 150 ಕೆ.ಜಿ ಕೂದಲಿನ ಮೌಲ್ಯ 7 ಲಕ್ಷ ರೂ.. ದೇಶಿ ಮತ್ತು ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಹೆಚ್ಚು ಬೇಡಿಕೆ ಇರುವ ಲೂಟಿ ಮಾಡಲಾಗಿದೆ. ಕೂದಲಿನಿಂದ ವಿಗ್ ಮತ್ತು ಹೇರ್ ಎಕ್ಸ್ ಟೆನ್ಶನ್ ತಯಾರಿಸಲಾಗುವುದು ಎಂದು ಮಾಲೀಕರು ತಿಳಿಸಿದ್ದಾರೆ.
ಶಂಕಿತ ಆರೋಪಿಗಳು ಮನೆಯ ಮೆಟ್ಟಿಲು ಹತ್ತಿ ಕೋಣೆಗೆ ನುಗ್ಗಿ ಕೂದಲು ಹಾಗೂ ಹಣ ದೋಚಿದ್ದಾರೆ ಎನ್ನಲಾಗಿದೆ. ಮರುದಿನ ಬೆಳಗ್ಗೆ ಮಾಲೀಕ ಮಂಡಲ್ ಹಣ ಮತ್ತು ಕೂದಲು ಕಾಣೆಯಾಗಿರುವುದನ್ನು ಕಂಡು ಪೊಲೀಸರಿಗೆ ಮಾಹಿತಿ ನೀಡಿದರು.
ಕಳ್ಳತನದ ದೃಶ್ಯ ಆ ಪ್ರದೇಶದಲ್ಲಿ ಅಳವಡಿಸಲಾಗಿದ್ದ ಸಿಸಿಟಿವಿ ಕ್ಯಾಮೆರಾದಲ್ಲಿ ದಾಖಲಾಗಿದೆ. ಸಿಸಿಟಿವಿ ದೃಶ್ಯಾವಳಿಗಳಲ್ಲಿ ನಿಗೂಢ ಗ್ಯಾಂಗ್ ದೊಡ್ಡ ಗೋಣಿಚೀಲದಲ್ಲಿ ಕೂದಲು ಸಾಗಿಸುತ್ತಿರುವುದನ್ನು ತೋರಿಸುತ್ತದೆ. ಸದ್ಯ ಈ ದೃಶ್ಯಾವಳಿಗಳನ್ನು ಆಧರಿಸಿ ಕಳ್ಳರನ್ನು ಪತ್ತೆ ಹಚ್ಚಲು ಪೊಲೀಸರು ಯತ್ನಿಸುತ್ತಿದ್ದಾರೆ. ಘಟನೆ ಕುರಿತು ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. ಒಬ್ಬನನ್ನು ಬಂಧಿಸಲಾಗಿದೆ ಎಂದು ಹೇಳಲಾಗಿದೆ.