VIDEO | ಜೇನುತುಪ್ಪದ ಶುದ್ಧತೆಯನ್ನು ಪರೀಕ್ಷಿಸಲು ವ್ಯಾಪಾರಿ ಮಾಡಿದ್ದೇನು?ನೋಡಿ...

Rs 200 rupee note pure honey testing in kolkata watch viral video
Published on

ಕೋಲ್ಕತ್ತಾ: ರಸ್ತೆ ಬದಿಯಲ್ಲಿ ಜೇನುತುಪ್ಪ ಮಾರಾಟ ಮಾಡುತ್ತಿದ್ದ ವ್ಯಾಪಾರಿಯೊಬ್ಬ, ಗ್ರಾಹಕರಿಗೆ ಜೇನುತುಪ್ಪದ ಶುದ್ಧತೆಯನ್ನು ತೋರಿಸಲು ಮಾಡಿರುವ ಸಹಾಸ ಸೋಶಿಯಲ್​​ ಮೀಡಿಯಾದಲ್ಲಿ ವೈರಲ್ ಆಗಿದೆ.

ಮಾರುಕಟ್ಟೆಯಲ್ಲಿ ನಾವು ಖರೀದಿಸುವ ಜೇನುತುಪ್ಪ ಶುದ್ಧವಾಗಿದೆಯೇ ಎಂಬ ಪ್ರಶ್ನೆ ಎಲ್ಲರ ಮನದಲ್ಲಿ ಮೂಡುತ್ತದೆ. ಆದರೆ, ಜೇನುತುಪ್ಪದ ಶುದ್ಧತೆಯನ್ನು ಹೇಗೆ ನಿರ್ಧರಿಸುವುದು ಎಂದು ನಿಮಗೆ ಎಂದಾದರೂ ತಿಳಿದಿದ್ದೀರಾ..? ಆದರೆ ಜೇನು ಮಾರಾಟಗಾರರು ಇದರ ಬಗ್ಗೆ ಹೆಚ್ಚು ಜಾಗೃತರಾಗಿದ್ದಾರೆ. ಆದ್ದರಿಂದ ಅವರು ತಮ್ಮ ಸ್ವಂತ ಬುದ್ಧಿವಂತಿಕೆಯನ್ನು ಜೇನುತುಪ್ಪವನ್ನು ಮಾರಾಟ ಮಾಡಲು, ಅದರ ಶುದ್ಧತೆಯನ್ನು ಹೇಳಲು ಬಳಸುತ್ತೀರುವ ವಿಧಾನ ವೈರಲ್​ ಆಗಿದೆ.

ವಿಡಿಯೋದಲ್ಲಿ ಏನಿದೆ?: ವೃದ್ಧರೊಬ್ಬರು ರಸ್ತೆಬದಿಯಲ್ಲಿ ಜೇನು ಮಾರಾಟ ಮಾಡುತ್ತಿರುವುದನ್ನು ಕಾಣಬಹುದು. ಜೇನುತುಪ್ಪವು ಶುದ್ಧವಾಗಿದೆ ಎಂದು ಅವರು ಹೇಳುತ್ತಾರೆ. ಆದರೆ, ಗ್ರಾಹಕರಿಗೆ ಜೇನುತುಪ್ಪದ ಶುದ್ಧತೆಯನ್ನು ತೋರಿಸಲು, ಅವರು ಮೊದಲು ಇನ್ನೂರು ರೂಪಾಯಿಯ ನೋಟನ್ನು ತೆಗೆದುಕೊಂಡು ನೋಟಿನ ಒಂದು ಭಾಗಕ್ಕೆ ಸ್ವಲ್ಪ ಜೇನುತುಪ್ಪವನ್ನು ಬಳಿಯುತ್ತಾರೆ. ಬಳಿಕ ಬೆಂಕಿಕಡ್ಡಿಯನ್ನು ಹೊತ್ತಿಸಿ ಕರೆನ್ಸಿ ನೋಟಿನ ಮೇಲೆ ಹಚ್ಚಿದ ಜೇನು ತುಪ್ಪದ ಕೆಳಗೆ ಇಟ್ಟರು. ಆದರೆ ನೋಟು ಸುಡುವುದಿಲ್ಲ. ಅಂದರೆ ಜೇನು ಲೇಪಿತ ನೋಟಿಗೆ ಬೆಂಕಿ ಬಿದ್ದಿಲ್ಲ. ಅಷ್ಟೇ ಅಲ್ಲ, ನೋಟು ಸುಟ್ಟರೆ ಜೇನನ್ನು ಬಿಸಾಕುತ್ತೇನೆ ಎಂದು ಆ ವ್ಯಕ್ತಿ ಹೇಳಿರುವುದು ಕೂಡ ವಿಡಿಯೋದಲ್ಲಿ ಕಂಡು ಬಂದಿದೆ. ಆ ನಂತರವೂ ಅವರು 10 ರೂ.ನೋಟಿನ ಮೂಲಕ ಅದೇ ಸಾಹಸವನ್ನು ತೋರಿಸಿದರು.

ಆದರೆ, ಸೋಷಿಯಲ್ ಮೀಡಿಯಾ ಬಳಕೆದಾರರು ಮಾರಾಟಗಾರನ ಈ ಪ್ರಯೋಗವನ್ನು ಒಪ್ಪುತ್ತಿಲ್ಲ. ಕೆಲವು ಬಳಕೆದಾರರು ಜೇನುತುಪ್ಪವು ಸಂಪೂರ್ಣವಾಗಿ ನಕಲಿ ಎಂದು ಹೇಳಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net