More

    ದೇವಸ್ಥಾನದಲ್ಲಿ ಹಿಂದೂ ಜೋಡಿಯ ಮದುವೆ ಮಾಡಿದ ಮುಸ್ಲಿಂ ಲೀಗ್​

    ಮಲಪ್ಪುರಂ: ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್ (ಐಯುಎಂಎಲ್) ಆಶೀರ್ವಾದದೊಂದಿಗೆ ದೇವಸ್ಥಾನದಲ್ಲಿ ಹಿಂದೂ ಜೋಡಿಯ ವಿವಾಹ ನಡೆದಿದೆ. ಮಲಪ್ಪುರಂ ಜಿಲ್ಲೆಯಲ್ಲಿ ಕೇರಳದ ಜಾತ್ಯತೀತ ರುಜುವಾತುಗಳನ್ನು ಪುನರುಚ್ಚರಿಸುವ ಮತ್ತೊಂದು ಘಟನೆಯಾಗಿ ಹೊರಹೊಮ್ಮಿದೆ.

    ವಿಷ್ಣು ಮತ್ತು ಗೀತಾ ದಂಪತಿಯ ವಿವಾಹವು ವೆಂಗಾರ ಶ್ರೀ ಅಮ್ಮಂಚೇರಿ ಭಗವತಿ ದೇವಸ್ಥಾನದಲ್ಲಿ ಅದ್ದೂರಿಯಾಗಿ ನೆರವೇರಿತು. ಮುಸ್ಲಿಮ್ ಲೀಗ್ ರಾಜ್ಯಾಧ್ಯಕ್ಷ ಸೈಯದ್ ಸಾದಿಕಲಿ ಶಿಹಾಬ್ ತಂಗಳ್, ಹಿರಿಯ ಮುಖಂಡ ಹಾಗೂ ಶಾಸಕ ಪಿ.ಕೆ.ಕುನ್ಹಾಲಿಕುಟ್ಟಿಯವರು ಸಮಾರಂಭದಲ್ಲಿ ಪಾಲ್ಗೊಂಡು ದಂಪತಿಯನ್ನು ಆಶೀರ್ವದಿಸಿದರು. ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ ಮತ್ತು ಕಾಂಗ್ರೆಸ್‌ನ ಹಲವಾರು ನಾಯಕರು ಸಮಾರಂಭದಲ್ಲಿ ಉಪಸ್ಥಿತರಿದ್ದರು.

    ಇದನ್ನೂ ಓದಿ: ಮಾದರಿ ಮಹಿಳೆ; ವೈದ್ಯ ವೃತ್ತಿ ಬಿಟ್ಟು ವ್ಯಾಪಾರಕ್ಕೆ ಕಾಲಿಟ್ಟ ಡೈನಾಮಿಕ್ ಲೇಡಿ

    ಶ್ರೀ ಅಮ್ಮಂಚೇರಿ  ಭಗವತಿ ದೇವಸ್ಥಾನದಲ್ಲಿ, ನವ ಜೋಡಿಗಳಾದ ಗೀತಾ-ವಿಷ್ಣು ವಿವಾಹಕ್ಕೆ ಸಕಲ ವ್ಯವಸ್ಥೆಗಳನ್ನು ಉತ್ತರ ಕೇರಳ ಜಿಲ್ಲೆಯ ವೆಂಗರಾ ಪಂಚಾಯತ್‌ನ 12 ನೇ ವಾರ್ಡ್‌ನ ಮುಸ್ಲಿಂ ಯೂತ್ ಲೀಗ್ ಸಮಿತಿಯು ಮಾಡಿತ್ತು.

    ಪಾಲಕ್ಕಾಡ್ ಮೂಲದ ಗೀತಾ ವೆಂಗಾರದ ಮನಾಟ್ಟಿಪರಂಬುವಿನ ರೋಸ್ ಮ್ಯಾನರ್ ಶಾರ್ಟ್ ಸ್ಟೇ ಹೋಮ್‌ನಲ್ಲಿ ವಾಸಿಸುತ್ತಿದ್ದರು. ವೆಂಗಾರ ಮಣಟ್ಟಿಪರಂಬು ಮುಸ್ಲಿಂ ಲೀಗ್ ಕಾರ್ಯಕರ್ತರು ಗೀತಾ ಅವರ ವಿವಾಹವನ್ನು ಆಯೋಜಿಸಿದ್ದರು. ಸ್ಟೇ ಹೋಮ್‌ನ ಸೂಪರಿಂಟೆಂಡೆಂಟ್ ಮೈತ್ರಿಯನ್ನು ಏರ್ಪಡಿಸಿ ವಿಷ್ಣು ಜತೆ ಗೀತಾಳ ಮದುವೆಯನ್ನು ನಿಶ್ಚಯಿಸಿದರೆ, ಐಯುಎಂಎಲ್‌ನ ಯುವ ವಿಭಾಗವು ಆರ್ಥಿಕ ನೆರವು ನೀಡಿತು. ಅಮ್ಮಂಚೇರಿ ಭಗವತಿ ದೇವಸ್ಥಾನದ ಪ್ರಾಂಗಣದಲ್ಲಿ  ಈ ವಿವಾಹ ನಡೆದಿದೆ.

    ಇದನ್ನೂ ಓದಿ:  ಟಿಪ್ಪುನಗರದಲ್ಲಿ ಹೆಚ್ಚುವರಿ ವಿದ್ಯುತ್​ ಬಿಲ್​ ಬಂದದ್ದಕ್ಕೆ ಸಿಬ್ಬಂದಿ ಮೇಲೆ ಹಲ್ಲೆ!

    ಈ ಕುರಿತು ಫೇಸ್‌ಬುಕ್‌ನಲ್ಲಿ ಬರೆದುಕೊಂಡಿರುವ ಪಿಕೆ ಕುನ್ಹಾಲಿಕುಟ್ಟಿ, “ಇಂದು, ದೇವಾಲಯದ ಪ್ರಾಂಗಣವು ನನ್ನ ನೆಲದ ಏಕತೆ ಮತ್ತು ಸ್ನೇಹವನ್ನು ಸಾರುವ ಸುಂದರವಾದ ಚಿತ್ರಗಳಿಗೆ ಸಾಕ್ಷಿಯಾಗಿದೆ. ಇದು ಅನುಕರಿಸಲು ಉತ್ತಮ ಸಂದೇಶವಾಗಿದೆ. ವಿಷ್ಣು ಮತ್ತು ಗೀತಾ ಅವರು ದಾಂಪತ್ಯಕ್ಕೆ ಮೊದಲ ಹೆಜ್ಜೆ ಇಡುತ್ತಿರುವುದಕ್ಕೆ ಶುಭಾಶಯಗಳು” ಎಂದು ಬರೆದುಕೊಂಡಿದ್ದಾರೆ. ಈ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತವಾಗುತ್ತಿದೆ.

    ಕೇವಲ 1000 ರೂ. ಅಡ್ವಾನ್ಸ್ ಪಡೆದು ಚಿತ್ರಕ್ಕೆ ಯೆಸ್ ಹೇಳಿದ ಸ್ಟಾರ್ ಹೀರೋ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts