ಒಂದು ಬಾಳೆಹಣ್ಣಿನ ಬೆಲೆ 100 ರೂ.! ಬೀದಿ ವ್ಯಾಪಾರಿಯ ವಿಡಿಯೋ ವೈರಲ್..Rs 100 For Single Banana

Rs 100 For Single Banana
Published on

ಹೈದರಾಬಾದ್​: (Rs 100 For Single Banana) ಬಾಳೆಹಣ್ಣು ಎಲ್ಲಾ ಕಾಲಾಮಾನದಲ್ಲಿ ಸಿಗುವ ಹಣ್ಣು ಆಗಿದೆ. ಒಂದು ಬಾಳೆಹಣ್ಣಿಗೆ ಮಾರುಕಟ್ಟೆಯಲ್ಲಿ 5 ರೂ.ಗೆ ಮಾರಾಟವಾಗುತ್ತಿದ್ದು, ಒಂದು 1 ಕೆಜಿಗೆ ಬಾಳೆಹಣ್ಣು 40 ರಿಂದ 60 ರೂ.ಗೆ ಮಾರಾಟವಾಗುತ್ತಿದೆ. ಆದರೆ ಭಾರತದಲ್ಲಿ ಬಾಳೆಹಣ್ಣು 100 ರೂ.ಗೆ ಮಾರಾಟವಾಗುತ್ತದೆ ಎಂದು ಇಂಗ್ಲೆಂಡ್ ನ ಯುವಕನೊಬ್ಬ ಹೇಳಿದ್ದಾನೆ. ಈ ವಿಡಿಯೋ ಸೋಶಿಯಲ್​ ಮೀಡಿಯಾದಲ್ಲಿ ಸಾಕಷ್ಟು ವೈರಲ್​​ ಆಗುತ್ತಿದೆ.

ಹೈದರಾಬಾದ್‌ನ ಬೀದಿ ವ್ಯಾಪಾರಿಯಿಂದ ಬಾಳೆಹಣ್ಣು ಖರೀದಿಸಲು ಪ್ರಯತ್ನಿಸಿ.. ಬೆಲೆ ರೂ.100 ಇದ್ದಾಗ ಆಂಗ್ಲ ಯುವಕ ಬೆಚ್ಚಿಬಿದ್ದಿದ್ದಾನೆ. ಈ ಅನುಭವವನ್ನು ಯುವಕ ವಿಡಿಯೋ ಮಾಡಿ ಇನ್‌ಸ್ಟಾಗ್ರಾಮ್​ನಲ್ಲಿ ಹಾಕಿದ್ದಾನೆ. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.

ವಿಡಿಯೋದಲ್ಲಿ ಇಂಗ್ಲೆಂಡಿನ ಯುವಕನೊಬ್ಬ ಬೀದಿಬದಿ ವ್ಯಾಪಾರಿಯೊಬ್ಬನಿಗೆ ಬಾಳೆಹಣ್ಣು ಎಷ್ಟು ಎಂದು ಕೇಳುತ್ತಾನೆ. ಅದಕ್ಕೆ ವ್ಯಾಪಾರಿ ಒಂದು ಬಾಳೆಹಣ್ಣು 100 ರೂ. ಎಂದು ಹೇಳುತ್ತಾನೆ. ಬೆಲೆ ಕೇಳಿ ಬೆಚ್ಚಿಬಿದ್ದ ಯುವಕ ಮತ್ತೆ ಎಷ್ಟು ಎಂದು ಕೇಳಿ ದೃಢಪಡಿಸಿಒಳ್ಳುತ್ತಾನೆ. ಆಗ ಕೂಡಾ ವ್ಯಾಪಾರಿ 100 ರೂ. ಎಂದು ಹೇಳುತ್ತಾನೆ. ಇದಾದ ಬಳಿಕ ಯುವಕ, ಇದು 100 ರೂ.ಗೆ ಬಾಳೆಹಣ್ಣು ಖರೀದಿಸಲು ಸಾಧ್ಯವಾಗುತ್ತಿಲ್ಲ. ಇಂಗ್ಲೆಂಡ್‌ನಲ್ಲಿ ಬಾಳೆಹಣ್ಣಿನ ಬೆಲೆಯನ್ನು ಹೋಲಿಸಿದರು. ಅಲ್ಲಿ, ಸುಮಾರು 8 ಬಾಳೆಹಣ್ಣುಗಳು ಒಂದು ಡಾಲರ್ ಬೆಲೆ ಎಂದು ಹೇಳುತ್ತಾರೆ. ವಿಡಿಯೋ ವೈರಲ್ ಆಗುತ್ತಿದ್ದಂತೆ ಅನೇಕ ನೆಟಿಜನ್‌ಗಳು ಪ್ರತಿಕ್ರಿಯಿಸಿದ್ದಾರೆ.

ನೀವು ಇಲ್ಲಿ ಈ ಸಮಸ್ಯೆಯನ್ನು ಎದುರಿಸುತ್ತಿರುವುದನ್ನು ಕ್ಷಮಿಸಿ. ನೋಡಲು ಬೇಸರವಾಗುತ್ತದೆ... ವಿದೇಶಿ ಸೇವಾ ತೆರಿಗೆಯನ್ನೂ ಸೇರಿಸಿದ್ದಾರೆ..ಎಂದು ಮತ್ತೊಬ್ಬರು ವ್ಯಂಗ್ಯವಾಡಿದ್ದಾರೆ. ಇನ್ನೊಬ್ಬ ದಯವಿಟ್ಟು ಅವನನ್ನು ಅಪಾರ್ಥ ಮಾಡಿಕೊಳ್ಳಬೇಡಿ...ಭಾರತದಲ್ಲಿ ಎಲ್ಲರಿಗೂ ಇಂಗ್ಲಿಷ್ ಅರ್ಥವಾಗುವುದಿಲ್ಲ ಎಂದು ನೆಟ್ಟಿಗರು ಈ ವಿಡಿಯೋ ನೋಡಿ ಕಾಮೆಂಟ್​​ ಮಾಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net