ಮಾಲ್​ನಲ್ಲಿ ಬಟ್ಟೆ ಖರೀದಿಸಿ ಟ್ರಯಲ್​ ರೂಮ್​ಗೆ ಹೋಗಿ ಬರುವಷ್ಟರಲ್ಲಿ ಮಹಿಳೆಗೆ ಕಾದಿತ್ತು ಬಿಗ್​ ಶಾಕ್​!

Woman 1
Published on

ಲಖನೌ: ಬಟ್ಟೆ ಅಥವಾ ಯಾವುದೇ ವಸ್ತುಗಳನ್ನು ಖರೀದಿಸಲು ಮಾಲ್ ಅಥವಾ ಮಾರುಕಟ್ಟೆಗಳಿಗೆ ಹೋದಾಗ ನಮ್ಮ ವಸ್ತುಗಳ ಬಗ್ಗೆ ನಾವು ತುಂಬಾ ಜವಬ್ದಾರರಾಗಿರಬೇಕು. ಒಂದು ಕ್ಷಣ ಮೈಮರೆತರೆ ಏನಾಗಲಿದೆ ಎಂಬುದಕ್ಕೆ ಉತ್ತರ ಪ್ರದೇಶದ ನೋಯ್ಡಾದಲ್ಲಿ ನಡೆದ ಈ ಒಂದು ಘಟನೆ ತಾಜಾ ಉದಾಹರಣೆ ಆಗಿದೆ.

ವೀಕೆಂಡ್​ ಹಿನ್ನೆಲೆಯಲ್ಲಿ ಭಾನುವಾರ ನೋಯ್ಡಾದಲ್ಲಿರುವ ಮಾಲ್​ ಒಂದಕ್ಕೆ ಶಾಪಿಂಗ್​ ಹೋದ ಮಹಿಳೆ ಬಟ್ಟೆಯನ್ನು ಖರೀದಿಸಿ ಟ್ರಯಲ್​ ರೂಮ್​ಗೆ ಹೋಗಿ ಬರುವಷ್ಟರಲ್ಲಿ ಆಕೆಯ ಪರ್ಸ್​ನಿಂದ ಬರೋಬ್ಬರಿಗೆ 1 ಲಕ್ಷ ರೂ. ಹಣವನ್ನು ಕಳ್ಳತನ ಮಾಡಲಾಗಿದೆ. ಟ್ರಯಲ್​ ರೂಮ್​ನ ಹೊರಭಾಗದಲ್ಲಿ ಇಡಲಾಗಿದ್ದ ಪರ್ಸ್​ನಲ್ಲಿ ಹಣ ಎಗರಿಸಲಾಗಿದೆ.

ಈ ಘಟನೆ ನೋಯ್ಡಾದ 18ನೇ ಸೆಕ್ಟರ್​ನಲ್ಲಿರುವ ಡಿಎಲ್​ಎಫ್​ ಆಫ್​ ಇಂಡಿಯಾ ಮಾಲ್​ನಲ್ಲಿ ನಡೆದಿದೆ. ಸಂತ್ರಸ್ತ ಮಹಿಳೆಯು ಟ್ರಯಲ್​ ರೂಮ್​ನ ಹೊರಭಾಗದಲ್ಲಿ ಬ್ಯಾಗ್​ ಅನ್ನು ನೇತು ಹಾಕಿ ಬಟ್ಟೆಯನ್ನು ಟ್ರಯಲ್​ ನೋಡಲು ರೂಮಿನ ಒಳಗೆ ಹೋಗಿದ್ದಾಳೆ. ಆಕೆ ರೂಮಿಂದ ಹೊರ ಬಂದು ನೋಡಿದಾಗ ಪರ್ಸ್​ ನೋಡಿದಾಗ ಒಂದು ಲಕ್ಷ ರೂ. ನಾಪತ್ತೆಯಾಗಿರುವುದನ್ನು ಕಂಡು ಕಂಗಾಲಾದರು ಎಂದು ಪೊಲೀಸ್​ ಅಧಿಕಾರಿಯೊಬ್ಬರು ಮಾಹಿತಿ ನೀಡಿದರು.

ಸದ್ಯ ನೋಯ್ಡಾ ಪೊಲೀಸರು 20ನೇ ಸೆಕ್ಟರ್​ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ಆರಂಭಿಸಿದ್ದಾರೆ. ಮಾಲ್​ನ ಸಿಬ್ಬಂದಿಯನ್ನು ವಿಚಾರಣೆಗೆ ಒಳಪಡಿಸಲಾಗಿದೆ ಮತ್ತು ಮಾಲ್​ನಲ್ಲಿರುವ ಸಿಸಿಟಿವಿಯನ್ನು ಪರಿಶೀಲಿಸುತ್ತಿದ್ದು, ತನಿಖೆ ಮುಂದುವರಿದಿದೆ. (ಏಜೆನ್ಸೀಸ್​) ಕ್ಷಣಕ್ಷಣದ ಮಾಹಿತಿಗಾಗಿ ವಿಜಯವಾಣಿ ಫೇಸ್​ಬುಕ್​ ಪೇಜ್​ ಲೈಕ್​ ಮಾಡಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net