ರಾಜಮೌಳಿಯ ಬಹುನೀರಿಕ್ಷಿತ 'ಆರ್​ಆರ್​ಆರ್​' ಚಿತ್ರದ ಹೆಸರಿನ ಅರ್ಥವೇನು: ಮೋಷನ್ ಪೋಸ್ಟರ್​ನಲ್ಲಿದೆ ಉತ್ತರ!

RRR
Published on

ಹೈದರಾಬಾದ್​: ನಿರ್ದೇಶಕ ರಾಜಮೌಳಿ ಹೊಸ ಸಿನಿಮಾ ಆರ್ ಆರ್ ಆರ್ ನ ಅಸಲಿಯತ್ತು ಯುಗಾದಿ ಪ್ರಯುಕ್ತ ಗೊತ್ತಾಗಿದೆ. ಅಂದರೆ ಶೀರ್ಷಿಕೆಯ ಹಿನ್ನೆಲೆಯನ್ನು ಚಿತ್ರತಂಡ ಬಿಚ್ಚಿಟ್ಟಿದೆ.

ಇಲ್ಲಿಯವರೆಗೂ ಆರ್ ಆರ್ ಆರ್ ಎಂದರೆ ರಘುಪತಿ ರಾಘವ ರಾಜಾರಾಮ್ ಎಂದೇ ಭಾವಿಸಲಾಗಿತ್ತು. ಆದರೆ, ಅದೀಗ ಅಲ್ಲ ಎಂಬುದನ್ನು ಸ್ವತಃ ಚಿತ್ರತಂಡ ಹೇಳಿಕೊಂಡಿದ್ದು, ರೌದ್ರಂ, ರಣಂ ರುಧಿರಂ ಟೈಟಲ್ ಅಧಿಕೃತ ಎಂದಿದೆ.

ರೌದ್ರನಾಗಿ ರಾಮ್ ಚರಣ್ ತೇಜ, ರುಧಿರನಾಗಿ ಜೂ. ಎನ್ ಟಿಆರ್ ನಾಯಕನಾಗಿ ನಟಿಸುತ್ತಿದ್ದು, ರಣ ಯಾರೆಂಬುದು ಸದ್ಯದ ಕುತೂಹಲ. ಐತಿಹಾಸಿಕ ಹಿನ್ನೆಲೆಯುಳ್ಳ ಸಿನಿಮಾ ಇದಾಗಿದೆಯಂತೆ.

ತೆಲುಗಿನ ಜತೆ ಕನ್ನಡ, ತಮಿಳು, ಮಲಯಾಳಂ ಮತ್ತು ಹಿಂದಿಯಲ್ಲೂ ಈ ಸಿನಿಮಾ ಬಿಡುಗಡೆ ಆಗಲಿದ್ದು, ಮೊದಲ ಬಾರಿ ರಾಜಮೌಳಿ ಸಿನಿಮಾವೊಂದು ಕನ್ನಡಕ್ಕೆ ಡಬ್​ ಆಗಿ ತೆರೆಕಾಣಲಿದೆ. ಚಿತ್ರದಲ್ಲಿ ಬಾಲಿವುಡ್ ನಟ ಅಜಯ್​ ದೇವಗನ್​ ಮತ್ತು ನಟಿ ಆಲಿಯಾ ಭಟ್​ ಸಹ ನಟಿಸುತ್ತಿದ್ದಾರೆ.

ಈಗಾಗಲೇ ಒಂದಷ್ಟು ಭಾಗದ ಶೂಟಿಂಗ್​ ಮುಗಿಸಿಕೊಂಡಿರುವ ಚಿತ್ರತಂಡ ಸದ್ಯ ಕರೊನಾ ಹಿನ್ನೆಲೆಯಲ್ಲಿ ಚಿತ್ರೀಕರಣವನ್ನು ಸ್ಥಗಿತಗೊಳಿಸಿದೆ. 350 ಕೋಟಿ ಬಜೆಟ್​ನಲ್ಲಿ ಸಿದ್ಧವಾಗುತ್ತಿರುವ ಈ ಚಿತ್ರಕ್ಕೆ ವಿವಿ ದಾನಯ್ಯ ಬಂಡವಾಳ ಹೂಡುತ್ತಿದ್ದಾರೆ. ಕನ್ನಡದಲ್ಲಿ ಕೆಆರ್ ಜಿ ಸ್ಟುಡಿಯೋಸ್ ವಿತರಣೆ ಹಕ್ಕನ್ನು ಪಡೆದುಕೊಂಡಿದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net