ರೌಡಿಶೀಟರ್ ಕಲಬುರ್ಗಿ ಜಿಲ್ಲೆಗೆ ಗಡಿಪಾರು

download
Published on

ಧಾರವಾಡ: ಅಕ್ರಮ ಚಟುವಟಿಕೆಗಳಲ್ಲಿ ಭಾಗಿಯಾಗುತ್ತಿದ್ದ ವಿದ್ಯಾಗಿರಿ ಪೊಲೀಸ್ ಠಾಣೆ ವ್ಯಾಪ್ತಿಯ ರೌಡಿಶೀಟರ್‌ನನ್ನು ಗಡಿಪಾರು ಮಾಡಿ ಹು-ಧಾ ಪೊಲೀಸ್ ಆಯುಕ್ತರು ಆದೇಶ ಹೊರಡಿಸಿದ್ದಾರೆ. ಕೊಲೆ, ಹಲ್ಲೆಗಳಂಥ ಅಪರಾಧ ಚಟುವಟಿಕೆಗಳಲ್ಲಿ ಭಾಗಿಯಾಗಿದ್ದ ಇಲ್ಲಿನ ತೇಜಸ್ವಿನಗರದ ನಿವಾಸಿ ಇರ್ಪಾನ್ ಹಮೀದ್ ಶೇಖ್ (ಛೋಟಾ ಇರ್ಪಾನ್) (೩೦) ಎಂಬಾತನನ್ನು ಮಾ. ೨೯ರಿಂದ ಅನ್ವಯವಾಗುವಂತೆ ೬ ತಿಂಗಳ ಅವಽಗೆ ಯಾದಗಿರಿ ಶಹರ ಪೊಲೀಸ್ ಠಾಣೆ ವ್ಯಾಪ್ತಿಗೆ ಗಡಿಪಾರು ಮಾಡಲಾಗಿದೆ.
ಇರ್ಫಾನ್ ಶೇಖ್ ರಿಯಲ್ ಎಸ್ಟೇಟ್ ವ್ಯವಹಾರಗಳಲ್ಲಿ ಅನವಶ್ಯಕವಾಗಿ ಭಾಗಿಯಾಗಿ, ಕೊಲೆ ಪ್ರಕರಣದಲ್ಲಿ ಕಾರಾಗೃಹ ಶಿಕ್ಷೆ ಅನುಭವಿಸಿದ್ದಾನೆ. ಬಿಡುಗಡೆಯಾಗಿ ಬಂದ ನಂತರ ಜನರ ಮೇಲೆ ಹಲ್ಲೆ ಮಾಡುವುದು, ಹಣಕಾಸು ವ್ಯವಹಾರ ಮಾಡುವವರ ಮೇಲೆ ಗುಂಪು ಕಟ್ಟಿಕೊಂಡು ಹೊಡೆಯುವುದು, ಗೂಂಡಾ ಪ್ರವೃತ್ತಿ ಪ್ರದರ್ಶಿಸುವುದು, ತನ್ನ್ನ ವಿರುದ್ಧದ ಸಾಕ್ಷಿಗಳನ್ನು ನಾಶಪಡಿಸುವ ಪ್ರವೃತ್ತಿ ಮುಂದುವರಿಸಿದ್ದ. ಈತನ ವಿರುದ್ಧ ಧಾರವಾಡದ ವಿದ್ಯಾಗಿರಿ ಮತ್ತು ಶಹರ ಪೊಲೀಸ್ ಠಾಣೆ, ಕಲಬುರ್ಗಿ ಜಿಲ್ಲೆಯ ನೆಲೋಗಲ್ ಪೊಲೀಸ್ ಠಾಣೆಗಳಲ್ಲಿ ಕೊಲೆಗೆ ಯತ್ನ ಅಪರಾಧ ಪ್ರಕರಣ ದಾಖಲಾಗಿವೆ. ಸಮಾಜದಲ್ಲಿ ಆರೋಗ್ಯಕರ ವಾತಾವರಣ ಕಾಯ್ದುಕೊಳ್ಳುವ ಉದ್ದೇಶದಿಂದ ೬ ತಿಂಗಳ ಅ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net