ತಲೆ ಮೇಲೆ ಕಲ್ಲು ಎತ್ತಿಹಾಕಿ ರೌಡಿಶೀಟರ್ ಬರ್ಬರ ಕೊಲೆ

pppppppppppp
Published on

ಹಾಸನ: ಹಳೇ ವೈಷಮ್ಯ ಹಿನ್ನೆಲೆ ರೌಡಿಶೀಟರ್​ನನ್ನು ಬರ್ಬರವಾಗಿ ಕೊಲೆಗೈದಿರುವ ಘಟನೆ ಹಾಸನ ಜಿಲ್ಲೆ ಅರಸೀಕೆರೆ ಹೊರವಲಯದ ಚಿಕ್ಕತಿರುಪತಿ ರಸ್ತೆಯ ಕಾರೇಹಳ್ಳಿ ಸಮೀಪ ನಡೆದಿದೆ.

ನವಾಜ್ (27) ಕೊಲೆಯಾದ ರೌಡಿಶೀಟರ್. ಈತನ ತಲೆ ಮೇಲೆ ಕಲ್ಲು ಎತ್ತಿಹಾಕಿ ಬರ್ಬರವಾಗಿ ಕೊಲ್ಲಲಾಗಿದೆ. ಇನ್ನು ಕೊಲೆಗೆ ಕಾರಣ ಯಾವುದೋ ಹಣಕಾಸಿನ ವಿಚಾರ ಎಂಬ ಮಾತುಗಳು ಕೇಳಿಬರುತ್ತಿವೆ.

ಆಂಬ್ಯುಲೆನ್ಸ್​ ಚಾಲಕನ ಕೊಲೆ:

ನಾಲ್ಕು ವರ್ಷಗಳ ಹಿಂದೆ ಮೀನು ಹಿಡಿಯುವ ಸಂಬಂಧ ಎರಡು ತಂಡದ ನಡುವೆ ಗಲಾಟೆ ನಡೆದು ಕೊನೆಗೆ ಆಂಬ್ಯುಲೆನ್ಸ್ ಚಾಲಕ ಅರುಣ್ ಎಂಬಾತನನ್ನು ಅರಸೀಕೆರೆ ನಗರದ ಹೃದಯಭಾಗದಲ್ಲಿರುವ ಅಂಬೇಡ್ಕರ್ ವೃತ್ತದ ಬಳಿ ಚಾಕು ಇರಿದು ಬರ್ಬರವಾಗಿ ಕೊಲೆ ಮಾಡಿದ್ದರು.

ಆ ಕೊಲೆ ಪ್ರಕರಣದಲ್ಲಿ ನಿನ್ನೆ ರಾತ್ರಿ ಕೊಲೆಯಾಗಿರುವ ನವಾಜ್ ಕೂಡಾ ಭಾಗಿಯಾಗಿದ್ದ. ಜೈಲಿನಲ್ಲಿದ್ದ ಈತ ಇತ್ತೀಚೆಗಷ್ಟೇ ಜಾಮೀನು ಪಡೆದು ಹೊರಬಂದಿದ್ದ. ಮತ್ತೆ ನಗರದಲ್ಲಿ ಕೆಲವು ಅಕ್ರಮ ಚಟುವಟಿಕೆಗಳಲ್ಲಿ ಭಾಗಿಯಾಗಿದ್ದನು. ಹೀಗಾಗಿ ಅರುಣ್ ಕೊಲೆ ಪ್ರಕರಣದ ಹಳೇ ವೈಷಮ್ಯ ಕಾರಣ ಎಂಬ ಬಗ್ಗೆ ಪೊಲೀಸರು ತನಿಖೆ ಮುಂದುವರೆಸಿದ್ದಾರೆ. ಈ ಸಂಬಂಧ ಅರಸೀಕೆರೆ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net