ಸೋಮವಾರಪೇಟೆ: ರೋಟರಿ ಕ್ಲಬ್ ಆಫ್ ಸೋಮವಾರಪೇಟೆ ಹಿಲ್ಸ್‌ಗೆ ಸೆ.23ರಂದು ಜಿಲ್ಲಾ ಪ್ರಾಂತಪಾಲ ಪಿ.ಕೆ.ರಾಮಕೃಷ್ಣ ಭೇಟಿ ನೀಡಲಿದ್ದಾರೆ.
ಸಂಜೆ 6-45ಕ್ಕೆ ರೋಟರಿ ಭವನದಲ್ಲಿ ನಡೆಯುವ ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಅಧ್ಯಕ್ಷೆ ವೀಣಾ ಮನೋಹರ್ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಸಹಾಯಕ ಪ್ರಾಂತಪಾಲ ಉಲ್ಲಾಸ್ ಕೃಷ್ಣ, ವಲಯ ಸೇನಾನಿ ರಾಕೇಶ್ ಪಟೇಲ್ ಭಾಗವಹಿಸಲಿದ್ದಾರೆ ಎಂದು ಪ್ರಧಾನ ಕಾರ್ಯದರ್ಶಿ ಡಿ.ಪಿ.ರಮೇಶ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.